2024ರ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ರಾಜ್ಯದ ಗಮನ ಸೆಳೆದಿದ್ದ ಇನ್ಸೈಟ್ಸ್ ಐಎಎಸ್ ಸಂಸ್ಥೆಯ ಮುಖ್ಯಸ್ಥ, ದಾವಣಗೆರೆ ತಾಲ್ಲೂಕಿನ ಕಕ್ಕರಗೊಳ್ಳ ಗ್ರಾಮ ಮೂಲದ ಜಿ.ಬಿ.ವಿನಯಕುಮಾರ್ ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರ ಪರ ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯ ನಡೆಸುತ್ತಿರುವ ಅವರು, ಶನಿವಾರದಿಂದ ಕ್ಷೇತ್ರವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಪಾದಯಾತ್ರೆ ಮೂಲಕ ಮತ ಯಾಚಿಸುತ್ತಿದ್ದಾರೆ. ಯುವಕ/ ಯುವತಿಯರು, ಮಹಿಳೆಯರನ್ನು ಭೇಟಿ ಮಾಡುತ್ತ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುವಂತೆ ಕೋರುತ್ತ, ಹಿಂದುಳಿದವರ ಏಳ್ಗೆಗೆ ಬಿಜೆಪಿಯೇ ಸೂಕ್ತ ಎಂದೂ ಸಾರುತ್ತಿದ್ದಾರೆ. ಕುಟುಂಬ ರಾಜಕಾರಣವನ್ನು ಬೆಂಬಲಿಸದಂತೆ ಮನವಿ ಮಾಡುತ್ತ ಕ್ಷೇತ್ರದಾದ್ಯಂತ ಕಾಲ್ನಡಿಗೆಯಲ್ಲೇ ಸಂಚರಿಸುತ್ತಿರುವ ವಿನಯಕುಮಾರ್, ಹದಡಿ ಸಮೀಪದ ಹಳೆಕೊಳೇನಹಳ್ಳಿ ಗ್ರಾಮದಲ್ಲಿ ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನದ ಸಾರ ಹೀಗಿದೆ.

l ‘ಉಪ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳೇ ನಮಗೆ ಶ್ರೀರಕ್ಷೆ. ಪಂಚ ಗ್ಯಾರಂಟಿಯು ನಮ್ಮ ಕೈಹಿಡಿಯಲಿದೆ’ ಎಂದು ಕಾಂಗ್ರೆಸ್ ಮುಖಂಡರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರಲ್ಲ?

ಗ್ಯಾರಂಟಿ ಯೋಜನೆಗಳು ‘ಕೈ’ಹಿಡಿಯಲಿವೆ ಎಂಬುದು ಕಾಂಗ್ರೆಸ್ ಮುಖಂಡರ ಭ್ರಮೆ. ಮತದಾರರು ಗ್ಯಾರಂಟಿಯನ್ನು ನೆಚ್ಚಿಕೊಂಡಿಲ್ಲ. ಬದಲಿಗೆ, ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳನ್ನು ನೆಚ್ಚಿಕೊಂಡು ಉಪ ಚುನಾವಣೆಯಲ್ಲಿ ಗೆಲ್ಲುವ ವಿಫಲಯತ್ನ ಮಾಡುತ್ತಿದೆ.

l ಶಾಮನೂರು ಶಿವಶಂಕರಪ್ಪ ಅವರ ಅಗಲಿಕೆಯ ಅನುಕಂಪದ ಅಲೆ ಕಾಂಗ್ರೆಸ್ಗೆ ನೆರವಾಗಬಹುದೇ?

ಹಾಲಿ ಶಾಸಕರ ಸಾವಿನಿಂದ ಎದುರಾಗುವ ಉಪಚುನಾವಣೆಗಳಲ್ಲಿ ಸಾಮಾನ್ಯವಾಗಿ ಅನುಕಂಪದ ಅಲೆ ಕಂಡುಬರುತ್ತದೆ. ಆದರೆ, ಈಗ ನಡೆದಿರುವ ಉಪಚುನಾವಣೆಯಲ್ಲಿ ಅಸಮಾಧಾನದ ಹೊಗೆ ಇದೆ. ಟಿಕೆಟ್ ಆಕಾಂಕ್ಷಿಗಳಲ್ಲಿ ಅಸಮಾಧಾನ, ಅಭಿವೃದ್ಧಿಯನ್ನೇ ಕಾಣದ ಮತದಾರರಲ್ಲಿ ಅಸಮಾಧಾನ, ಕಾಂಗ್ರೆಸ್ ಬಣಗಳಲ್ಲಿ ಅಸಮಾಧಾನ ಹೀಗೆ ಎಲ್ಲಿ ನೋಡಿದರೂ ಅಸಮಾಧಾನವೇ ಇದೆ. ಅಂತೆಯೇ ಈಗ ಬಿಜೆಪಿ ಪರ ಅಲೆ ಇದೆ. ಅಭ್ಯರ್ಥಿ ಶ್ರೀನಿವಾಸ ಪರ ಅಲೆ ಇದೆ. ಶ್ರೀಮಂತರಿಗೆ ಮತ ಹಾಕಬಾರದು ಎಂದೇ ಮತದಾರರು ತೀರ್ಮಾನಿಸಿದ್ದಾರೆ.

l ಬಿಜೆಪಿ ಅಹಿಂದ ವಿರೋಧಿ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಾರಲ್ಲ?

2ನೇ ಬಾರಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರೇ ಅಹಿಂದ ವಿರೋಧಿಯಾಗಿ ಹೊರಹೊಮ್ಮಿದ್ದಾರೆ. ಒಳಮೀಸಲಾತಿ ಜಾರಿಯಲ್ಲಿ ಗೊಂದಲಗಳು ಮುಂದುವರಿದಿದ್ದು ದಲಿತರಲ್ಲಿ ಆಕ್ರೋಶ ಉಂಟುಮಾಡಿದೆ. ಅಲ್ಪಸಂಖ್ಯಾತರು, ಹಿಂದುಳಿದವರ ಪರ ಎಂದು ಹೇಳುವ ಕಾಂಗ್ರೆಸ್ ಇಲ್ಲಿ ಶಾಮನೂರು ಕುಟುಂಬಕ್ಕೆ ತನ್ನನ್ನು ಸಮರ್ಪಿಸಿಕೊಂಡಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಎಂಬುದನ್ನು ಮರೆತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಮನೆಗೆ ಹೋಗುತ್ತಾರೆ. ಇಲ್ಲಿ ಬಂದಾಗ ಅವರು ಜನಸಾಮಾನ್ಯರ ಕೈಗೇ ಸಿಗುವುದಿಲ್ಲ. ಕೈಗೇ ಸಿಗದ ಸಚಿವ, ಸಂಸದೆಯ ಮನೆಗೆ ಹೋಗುತ್ತಾರೆ. ಬಿಜೆಪಿ ಪರಿಶಿಷ್ಟ ಪಂಗಡದ ಶ್ರೀನಿವಾಸ ಅವರಿಗೆ ಟಿಕೆಟ್ ಘೋಷಿಸಿದೆ. ಅಹಿಂದ ವಿರೋಧಿ ಯಾರು ಎಂಬುದು ಇದರಿಂದಲೇ ಗೊತ್ತಾಗುತ್ತದೆ.

l ಅಭಿವೃದ್ಧಿ ಆಗಿದ್ದೇ ನಮ್ಮ ಅವಧಿಯಲ್ಲಿ ಎಂದು ಕಾಂಗ್ರೆಸ್ ಹೇಳುತ್ತಿದೆಯಲ್ಲ?

ಈಗ ನಾನು ಪಾದಯಾತ್ರೆ ಮೂಲಕ ಜನರನ್ನು ಸಂಪರ್ಕಿಸುತ್ತಿರುವ ಈ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ರಸ್ತೆಗಳೇ ಇಲ್ಲ. ಕೆಲವು ಓಣಿಗಳಿಗೆ ಸಿ.ಸಿ. ರಸ್ತೆ ಹಾಕಿದಾಕ್ಷಣ ಅಭಿವೃದ್ಧಿ ಆದಂತಲ್ಲ. ಈ ಊರುಗಳಿಗೆ ಬರಲು ಸರಿಯಾಗಿ ರಸ್ತೆಗಳೇ ಇಲ್ಲ. ಸರ್ಕಾರಿ ಬಸ್ಗಳಿಲ್ಲ. ಶಾಲೆಗಳಲ್ಲಿ ಮೂಲ ಸೌಲಭ್ಯಗಳಿಲ್ಲ. ಅವರೇನು ಅಭಿವೃದ್ಧಿ ಮಾಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಶಾಮನೂರು ಕುಟುಂಬದವರು ಚುನಾವಣೆ ಮುಗಿದ ನಂತರ ಈ ಗ್ರಾಮಗಳಿಗೆ ಬಂದೇ ಇಲ್ಲವಂತೆ. ಅವರನ್ನೇ ಭೇಟಿಯಾಗಲು ಮನೆಗೆ ಹೋದರೂ ಅವರು ಸಂಪರ್ಕಕ್ಕೆ ಸಿಗುವುದಿಲ್ಲವಂತೆ. ಇದು ನನ್ನ ಮಾತಲ್ಲ. ಮತದಾರರ ಮಾತು. ಆಡಳಿತ ವಿರೋಧಿ ಅಲೆ ಇರುವುದರಿಂದಲೇ ಇಡೀ ಸರ್ಕಾರ ಇಲ್ಲಿ ಠಿಕಾಣಿ ಹೂಡಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಪಂಚ ರಾಜ್ಯಗಳ ಚುನಾವಣೆ ಪ್ರಚಾರ ಬಿಟ್ಟು ದಾವಣಗೆರೆಗೆ ಬಂದು ಕುಳಿತಿದ್ದಾರೆ. ಅಭಿವೃದ್ಧಿ ಮಾಡಿದ್ದರೆ ಸರ್ಕಾರ ಇಲ್ಲಿಗೆ ಬರುವ ಅಗತ್ಯವಿತ್ತೇ?

l ನಿಮ್ಮ ರಾಜಕೀಯ ಭವಿಷ್ಯದ ಬಗ್ಗೆ ಚಿಂತನೆ ನಡೆಸಿದ್ದೀರಾ?

2028ರ ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ಉತ್ತರ ಅಥವಾ ಹೊನ್ನಾಳಿ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ಒತ್ತಾಯ ಬೆಂಬಲಿಗರಿಂದ ಕೇಳಿ ಬರುತ್ತಿದೆ. ಕೆಲವರು ಲೋಕಸಭೆ ಚುನಾವಣೆಯಲ್ಲೇ ಸ್ಪರ್ಧಿಸಿ ಸಂಸದರಾಗಬೇಕು ಎಂಬ ಸಲಹೆ ನೀಡಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳುವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.