ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್ಐಆರ್) ಪೂರ್ವ ತಯಾರಿಯ ಭಾಗವಾಗಿ ರಾಜ್ಯದ 5.55 ಕೋಟಿ ಮತದಾರರ ಪೈಕಿ, 4.93 ಕೋಟಿ ಮಂದಿಯ ವಿವರಗಳ ಮ್ಯಾಪಿಂಗ್ ಪೂರ್ಣಗೊಂಡಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ತಿಳಿಸಿದರು.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಎಸ್ಐಆರ್ ಪ್ರಕ್ರಿಯೆ ಕುರಿತು ಪತ್ರಕರ್ತರಿಗೆ ಬುಧವಾರ ಕಾರ್ಯಾಗಾರ ಆಯೋಜಿಸಿತ್ತು. ಎಸ್ಐಆರ್ ಪೂರ್ವ ತಯಾರಿ ಮ್ಯಾಪಿಂಗ್ ಪ್ರಕ್ರಿಯೆಯನ್ನು ಅವರು ವಿವರಿಸಿದರು.

‘ರಾಜ್ಯದ ಒಟ್ಟು ಮತದಾರರ ಪೈಕಿ, ಬುಧವಾರ (ಮೇ 27) ಬೆಳಿಗ್ಗೆ ವೇಳೆಗೆ ಶೇ 88.8ರಷ್ಟು ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದೆ. ಎಸ್ಐಆರ್ ಪ್ರಕ್ರಿಯೆ ಆರಂಭವಾಗಿ ಗಣತಿ ನಮೂನೆ ಸಲ್ಲಿಕೆ ಅವಧಿಯಲ್ಲೂ ಮ್ಯಾಪಿಂಗ್ ನಡೆಯಲಿದ್ದು, ಶೇ 100ರಷ್ಟು ಪ್ರಗತಿ ಸಾಧಿಸುವ ಗುರಿ ಹಾಕಿಕೊಳ್ಳಲಾಗಿದೆ’ ಎಂದರು.

1,145 ಮಂದಿಗೆ ತರಬೇತಿ: ಎಸ್ಐಆರ್ ಭಾಗವಾಗಿ ಈಗಾಗಲೇ 34 ಹೆಚ್ಚುವರಿ ಜಿಲ್ಲಾಧಿಕಾರಿಗಳು, 224 ಮತದಾರರ ನೋಂದಣಾಧಿಕಾರಿ, 336 ಸಹಾಯಕ ಮತದಾರರ ನೋಂದಣಾಧಿಕಾರಿ, 34 ಚುನಾವಣಾ ತಹಶೀಲ್ದಾರ್, 34 ಜಿಲ್ಲಾ ಮಟ್ಟದ ಮಾಸ್ಟರ್ ತರಬೇತುದಾರರು, 224 ಕ್ಷೇತ್ರಮಟ್ಟದ ಮಾಸ್ಟರ್ ತರಬೇತುದಾರರು, 224 ಆಪರೇಟರ್ಗಳು ಸೇರಿ ಒಟ್ಟು 1,145 ಮಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ.

ರಾಜ್ಯದ 59,050 ಮತಗಟ್ಟೆಗಳಿಗೆ ಅಷ್ಟೇ ಸಂಖ್ಯೆಯ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು (ಬಿಎಲ್ಒ) ನಿಯೋಜಿಸಲಾಗಿದೆ. ಎಸ್ಐಆರ್ ಮ್ಯಾಪಿಂಗ್ ಹಂತದಲ್ಲಿ ಈಗಾಗಲೇ ಅವರಿಗೆ ತರಬೇತಿ ನೀಡಲಾಗಿದೆ. ಈಗ ಮತ್ತೆ ಜೂನ್ ಮೊದಲ ವಾರದಿಂದ ಮತ್ತೆ ತರಬೇತಿ ನೀಡಲಾಗುತ್ತದೆ. ರಾಜಕೀಯ ಪಕ್ಷಗಳ ಮತಗಟ್ಟೆ ಮಟ್ಟದ ಏಜೆಂಟರಿಗೂ ಕಾರ್ಯಾಗಾರ ಏರ್ಪಡಿಸಲಾಗುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-51-1450610359

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.