ಕಾಸರಗೋಡು: ‘ಜಿಲ್ಲೆಯ ಕನ್ನಡಿಗರ ಸಮಸ್ಯೆ ಸಾಮಾನ್ಯದ್ದಲ್ಲ. ಅದು ಕನ್ನಡ ಸಂಸ್ಕೃತಿಯ ಅಸ್ಮಿತೆಯನ್ನೇ ಬುಡಮೇಲು ಮಾಡುವ ವ್ಯವಸ್ಥಿತ ಸಂಚು. ಅದು ನನ್ನ ಬದುಕಿನ ಸವಾಲೂ ಹೌದು. ನನ್ನ ಮಕ್ಕಳೂ ಅದನ್ನು ಎದುರಿಸುತ್ತಿದ್ದಾರೆ’ ಎಂದು ಕೇರಳ ವಿಧಾನಸಭೆ ಚುನಾವಣೆಯ ಕಾಸರಗೋಡು ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಎಂ.ಎಲ್.ಅಶ್ವಿನಿ ಸೋಮವಾರ ಹೇಳಿದರು.

‘ಕನ್ನಡತಿಯಾಗಿ, ಶಿಕ್ಷಕಿಯಾಗಿ ಕನ್ನಡಿಗರು ಇಲ್ಲಿ ಅನುಭವಿಸುತ್ತಿರುವ ಅನಾಥಪ್ರಜ್ಞೆಯನ್ನು ನೇರವಾಗಿ ಅನುಭವಿಸಿದ್ದೇನೆ. ಇದರ ಪರಿಹಾರಕ್ಕೆ ನಡೆಯುತ್ತಿರುವ ಹೋರಾಟದಲ್ಲಿ ನಾನೂ ಭಾಗಿಯಾಗುವೆ. ಚುನಾವಣೆಯಲ್ಲಿ ಗೆದ್ದು ಶಾಸಕಿಯಾದರೆ, ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸುವುದು ಮಾತ್ರವಲ್ಲ, ವಿಧಾನಸಭೆಯಲ್ಲೂ ಪ್ರಸ್ತಾಪ ಮಾಡುವೆ’ ಎಂದು ಬದಿಯಡ್ಕದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಎಡರಂಗ, ಐಕ್ಯರಂಗ ಒಕ್ಕೂಟಗಳ ಪ್ರತಿನಿಧಿಗಳೇ ಕಾಸರಗೋಡು ಮತ್ತು ಮಂಜೇಶ್ವರ ವಿಧಾನಸಭೆ ಕ್ಷೇತ್ರಗಳಲ್ಲಿ ಇದುವರೆಗೆ ಗೆಲುವು ಸಾಧಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಅವರು ಏನು ಮಾಡಿದ್ದಾರೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-51-692811883

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.