ತಿರುವನಂತಪುರ: ಚುನಾವಣೆ ಫಲಿತಾಂಶ ಘೋಷಣೆಯಾಗಿ 11 ದಿನಗಳ ಬಳಿಕ ಕೇರಳಂ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ವಿ.ಡಿ ಸತೀಶನ್ ಶುಕ್ರವಾರದಿಂದ ಸಂಪುಟ ರಚನೆ, ಖಾತೆ ಹಂಚಿಕೆ ಕಸರತ್ತು ಆರಂಭಿಸಿದ್ದಾರೆ.

ಇಲ್ಲಿ ನಡೆದ ಯುಡಿಎಫ್ ಸಭೆಯಲ್ಲಿ ಸಂಪುಟ ಸ್ಥಾನ ಮತ್ತು ಖಾತೆ ಹಂಚಿಕೆ ಬಗ್ಗೆ ಕೆಲವು ಒಪ್ಪಂದಗಳಿಗೆ ಬರಲಾಗಿದೆ ಎಂದು ಮೂಲಗಳು ಹೇಳಿವೆ.

ಮುಖ್ಯಮಂತ್ರಿ ಸ್ಥಾನದಿಂದ ವಂಚಿತರಾಗಿರುವ ರಮೇಶ್ ಚೆನ್ನಿತ್ತಲ ಅವರನ್ನು ಸಂಪುಟದಲ್ಲಿನ ಸ್ಥಾನ ಹಂಚಿಕೆ ಮಾತುಕತೆಯಲ್ಲಿ ಭಾಗಿಯಾಗುವಂತೆ ಮಾಡುವ ಮೂಲಕ ಅವರನ್ನು ಸಮಾಧಾನಪಡಿಸುವ ಪ್ರಯತ್ನ ನಡೆದಿದೆ.

ನಿಯೋಜಿತ ಮುಖ್ಯಮಂತ್ರಿ ವಿ.ಡಿ ಸತೀಶನ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕೇರಳಂನ ಉಸ್ತುವಾರಿಯೂ ಆಗಿರುವ ದೀಪಾ ದಾಸ್ಮುನ್ಶಿ ಅವರು ಚೆನ್ನಿತ್ತಲ ಅವರನ್ನು ಶುಕ್ರವಾರ ಭೇಟಿಯಾಗಿ ಅವರ ಮನವೊಲಿಕೆಗೆ ಪ್ರಯತ್ನಿಸಿದರು. 2011ರಲ್ಲೂ ಮುಖ್ಯಮಂತ್ರಿ ಸ್ಥಾನ ತಪ್ಪಿಸಿಕೊಂಡಿದ್ದ ಚೆನ್ನಿತ್ತಲ ಅವರಿಗೆ ಉಮ್ಮನ್ ಚಾಂಡಿ ನೇತೃತ್ವದ ಸಂಪುಟದಲ್ಲಿ ಗೃಹ ಖಾತೆ ನೀಡಲಾಗಿತ್ತು.

ಚೆನ್ನಿತ್ತಲ ಅವರು ಸಂಪುಟಕ್ಕೆ ಸೇರ್ಪಡೆಯಾದರೆ ಅವರಿಗೆ ಈ ಬಾರಿಯೂ ಗೃಹ ಖಾತೆ ಸಿಗುವ ಸಾಧ್ಯತೆ ಇದೆ. ಹಿಂದೆ ಗೃಹ ಖಾತೆ ನಿಭಾಯಿಸಿದ ಅನುಭವ ಅವರಿಗೆ ಇದೆ. ಜತೆಗೆ ತಮಗೆ ಆಪ್ತರಾಗಿರುವ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷ ಸಣ್ಣಿ ಜೋಸೆಫ್ ಅವರಿಗೂ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕು ಎಂಬ ಒತ್ತಡವನ್ನೂ ಅವರು ಹೇರಬಹುದು ಎಂದು ಮೂಲಗಳು ಹೇಳಿವೆ.

ಯುಡಿಎಫ್ ಗೆಲುವಿನಲ್ಲಿ ಇನ್ನೊಂದೆಡೆ ನಿರ್ಣಾಯಕ ಪಾತ್ರ ವಹಿಸಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ಗೆ (ಐಯುಎಂಎಲ್) ‘ಶಿಕ್ಷಣ ಖಾತೆ’ ಸಿಗುತ್ತದೆಯೇ ಎನ್ನುವುದರ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಐಯುಎಂಎಲ್ಗೆ ಶಿಕ್ಷಣ ಖಾತೆ ನೀಡುವುದಕ್ಕೆ ಬಿಜೆಪಿ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿದೆ.

ಭಾನುವಾರದ ವೇಳೆಗೆ ಸಂಪುಟ ಸ್ಥಾನಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದ್ದು, ಇಡೀ ಸಚಿವ ಸಂಪುಟ ಸೋಮವಾರದ ಸಮಾರಂಭದಲ್ಲೇ ಪ್ರಮಾಣ ವಚನ ಸ್ವೀಕರಿಸಲಿದೆ ಎಂದು ಮೂಲಗಳು ಹೇಳಿವೆ.

ಸಂಪುಟ ಸ್ಥಾನದ ನಿರೀಕ್ಷೆ: ‘ಯುಡಿಎಫ್ ಮಿತ್ರಪಕ್ಷಗಳ ಪ್ರತಿನಿಧಿಗಳು ಸಹ ವಿ.ಡಿ ಸತೀಶನ್ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿ ಇದ್ದಾರೆ’ ಎಂದು ಕೇರಳ ಕಾಂಗ್ರೆಸ್ನ (ಜೇಕಬ್ ಬಣ) ಅನೂಪ್ ಜೇಕಬ್ ಹೇಳಿದ್ದಾರೆ.

ಮಾಜಿ ಸಚಿವ ಟಿ.ಎಂ. ಜೇಕಬ್ ಅವರ ಪುತ್ರರಾಗಿರುವ ಅನೂಪ್ ಜೇಕಬ್, ಈ ಬಾರಿ ಪಿರವಂ ವಿಧಾನಸಭಾ ಕ್ಷೇತ್ರದಿಂದ ಗೆಲ್ಲುವ ಮೂಲಕ ಪಕ್ಷದ ಏಕೈಕ ಶಾಸಕರಾಗಿ ಹೊರಹೊಮ್ಮಿದ್ದಾರೆ.

ಅಭ್ಯರ್ಥಿಗಳು, ಆಕಾಂಕ್ಷಿಗಳು ಹೆಚ್ಚಿರುವುದರಿಂದ, ಸಚಿವ ಸ್ಥಾನಗಳಿಗೆ 2.5 ವರ್ಷಗಳ ಸರದಿ ವ್ಯವಸ್ಥೆಯನ್ನು ಯುಡಿಎಫ್ ಅನುಸರಿಸಲಿದೆಯೇ ಎಂಬ ಪ್ರಶ್ನೆಗೆ, ಅಂತಹ ಯಾವುದೇ ಮಾತುಕತೆ ನಡೆದಿಲ್ಲ ಎಂದು ಅನೂಪ್ ಹೇಳಿದರು.

'ದುಂದುವೆಚ್ಚವಿಲ್ಲ, ಕನಿಷ್ಠ ಭದ್ರತೆ ಮಾತ್ರ'

'ಯಾವುದೇ ಆಡಂಬರ ಬೇಕಿಲ್ಲ, ದುಂದುವೆಚ್ಚವಿಲ್ಲ, ಕನಿಷ್ಠ ಭದ್ರತೆ ಮಾತ್ರ ಸಾಕು' ಎಂದು ಕೇರಳಂನ ನಿಯೋಜಿತ ಮುಖ್ಯಮಂತ್ರಿ ವಿ.ಡಿ. ಸತೀಶನ್ ಹೇಳಿದ್ದಾರೆ.

'ರಾಜ್ಯವು ಬಿಗಿಯಾದ ಆರ್ಥಿಕ ಪರಿಸ್ಥಿತಿ ಎದುರಿಸುತ್ತಿದೆ. ಹಾಗಾಗಿ ದುಂದುವೆಚ್ಚಕ್ಕೆ ಕಡಿವಾಣ ಹಾಕುವಂತೆ ಹೈಕಮಾಂಡ್ ಸೂಚನೆ ಇದೆ. ಹೊಸ ವಾಹನ ಖರೀದಿಸುವುದಿಲ್ಲ. ಮುಖ್ಯಮಂತ್ರಿಗೆ ಝಡ್ ಪ್ಲಸ್ ಭದ್ರತೆ ಇದ್ದರೂ, ಕನಿಷ್ಠ ಭದ್ರತೆಯನ್ನು ಮಾತ್ರ ಒದಗಿಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಭದ್ರತೆ, ದಟ್ಟಣೆ ನಿರ್ವಹಣೆ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡಬಾರದು ಎಂದೂ ಸೂಚಿಸಿದ್ದೇನೆ' ಎಂದರು.

ಚೆನ್ನಿತ್ತಲ, ಪಿಣರಾಯಿ ವಿಜಯನ್ ಭೇಟಿಯಾದ ಸತೀಶನ್

ಕೇರಳಂನ ನಿಯೋಜಿತ ಮುಖ್ಯಮಂತ್ರಿ ವಿ.ಡಿ ಸತೀಶನ್ ಅವರು ಶುಕ್ರವಾರ ಕಾಂಗ್ರೆಸ್ ಮುಖಂಡ, ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯೂ ಆಗಿದ್ದ ರಮೇಶ್ ಚೆನ್ನಿತ್ತಲ ಅವರನ್ನು ತಿರುವನಂತಪುರದ ಅವರ ನಿವಾಸದಲ್ಲಿ ಭೇಟಿಯಾದರು.

ಮುಖ್ಯಮಂತ್ರಿ ಗಾದಿಗೆ ವಿ.ಡಿ ಸತೀಶನ್ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದ ಬೆನ್ನಲ್ಲೇ, ಚೆನ್ನಿತ್ತಲ ಅವರು ಗುರುವಾಯೂರಿನ ಶ್ರೀಕೃಷ್ಣ ದೇವಸ್ಥಾನಕ್ಕೆ ಹೋಗಿದ್ದರು. ಶುಕ್ರವಾರ ಅವರನ್ನು ಭೇಟಿಯಾದ ಸತೀಶನ್ ಮಾತುಕತೆ ನಡೆಸಿದರು.

ಸಿಪಿಎಂ ಮುಖಂಡ, ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನೂ ಸತೀಶನ್ ತಿರುವನಂತಪುರದ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಸತೀಶನ್ ಅವರ ಕೈ ಹಿಡಿದು ಆತ್ಮೀಯವಾಗಿ ಮನೆಯೊಳಗೆ ಸ್ವಾಗತಿಸಿದ ಪಿಣರಾಯಿ, ಕೆಲಹೊತ್ತು ಅವರೊಂದಿಗೆ ಮಾತುಕತೆ ನಡೆಸಿದರು. ಯುಡಿಎಫ್ ಸಂಚಾಲಕ ಎಂ.ಪಿ ಅಡೂರ್ ಪ್ರಕಾಶ್ ಅವರ ನಿವಾಸಕ್ಕೆ ಸತೀಶನ್ ಭೇಟಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-51-142216275

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.