ತಿರುವನಂತಪುರ: ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು, ಧರ್ಮಡಂ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಕಠಿಣ ಸವಾಲು ಎದುರಾಗಿದೆ.

ಮೊದಲ ಐದು ಸುತ್ತಿನ ಮತ ಎಣಿಕೆಯಲ್ಲಿ 1,000ಕ್ಕೂ ಹೆಚ್ಚು ಮತಗಳ ಹಿನ್ನಡೆಯಲ್ಲಿದ್ದ ಪಿಣರಾಯಿ, ಎಂಟನೇ ಸುತ್ತಿನ ಮತ ಎಣಿಕೆಯ ವೇಳೆ ಮತ್ತೆ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ನಿಕಟ ಸ್ಪರ್ಧಿ ಕಾಂಗ್ರೆಸ್ನ ಅಬ್ದುಲ್ ರಶೀದ್ ಅವರಿಗಿಂತ 3,569 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಅಂತಿಮವಾಗಿ ತಮ್ಮ ನಿಕಟ ಸ್ಪರ್ಧಿ ವಿರುದ್ಧ ಪ್ರಯಾಸದ ಗೆಲುವು ದಾಖಲಿಸಲು ಯಶಸ್ವಿಯಾಗಿದ್ದಾರೆ.

2021ರ ಚುನಾವಣೆಯಲ್ಲಿ ಪಿಣರಾಯಿ 45 ಸಾವಿರಕ್ಕೂ ಅಧಿಕ ಮತಗಳಿಂದ ಜಯ ಗಳಿಸಿದ್ದರು.

ಹ್ಯಾಟ್ರಿಕ್ ಕನಸು ಭಗ್ನ

ಹಾಗಿದ್ದರೂ ಮೂರನೇ ಸಲ ಮುಖ್ಯಮಂತ್ರಿ ಆಗುವ ಸಿಎಂ ಪಿಣರಾಯಿ ವಿಜಯನ್ ಅವರ ಕನಸು ಭಗ್ನಗೊಂಡಿದೆ.

ಪಿಣರಾಯಿ ವಿಜಯನ್ ರಾಜಕೀಯ ಸಾಧನೆ:

ದಶಕಗಳ ಕಾಲ ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಿಸುತ್ತಿದ್ದ ಕೇರಳದ ಮತದಾರರು, ಕಳೆದ 2021ರಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗಕ್ಕೆ ಸತತ ಎರಡನೇ ಬಾರಿಗೆ ಅಧಿಕಾರ ನೀಡುವ ಮೂಲಕ ಇತಿಹಾಸ ಬರೆದಿದ್ದರು. ಆದರೆ ಹ್ಯಾಟ್ರಿಕ್ ಕನಸು ಕಾಣುತ್ತಿದ್ದ ಪಿಣರಾಯಿ ವಿಜಯನ್ಗೆ ಭಾರಿ ಹಿನ್ನಡೆಯಾಗಿದೆ.

1945, ಮೇ 24ರಂದು ಕಣ್ಣೂರು ಜಿಲ್ಲೆಯ ಪಿಣರಾಯಿ ಗ್ರಾಮದಲ್ಲಿ ಜನಿಸಿದ್ದ ಪಿಣರಾಯಿ, ತಲಶ್ಶೇರಿಯ ಬ್ರೆನ್ನನ್ ಕಾಲೇಜಿನಲ್ಲಿ ಓದುತ್ತಿರುವಾಗ ಕೇರಳ ಸ್ಟೂಡೆಂಟ್ಸ್ ಫೆಡರೇಶನ್ (KSF) ಮೂಲಕ ರಾಜಕೀಯ ಪ್ರವೇಶಿಸಿದರು. ನಂತರ ಎಸ್ಎಫ್ಐ ಮತ್ತು ಡಿವೈಎಫ್ಐ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. 1964ರಲ್ಲಿ ಸಿಪಿಐ(ಎಂ) ಪಕ್ಷವನ್ನು ಸೇರಿದರು. 1968ರಲ್ಲಿ ಕಣ್ಣೂರು ಜಿಲ್ಲಾ ಸಮಿತಿಗೆ ಆಯ್ಕೆಯಾದರು

ಪಿಣರಾಯಿ ವಿಜಯನ್ ಅವರು ಕೇರಳ ವಿಧಾನಸಭೆಗೆ ಹಲವು ಬಾರಿ ಆಯ್ಕೆಯಾಗಿದ್ದಾರೆ. 1970ರಲ್ಲಿ ಕೂತುಪರಂಬ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ಕಿರಿಯ ಶಾಸಕರೆನಿಸಿದರು. 1977 ಮತ್ತು 1991ರಲ್ಲಿ ಮತ್ತೆ ಕೂತುಪರಂಬ ಕ್ಷೇತ್ರದಿಂದ ಜಯ ಗಳಿಸಿದರು. 1996ರಲ್ಲಿ ಪಯ್ಯನ್ನೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. 2016 ಹಾಗೂ 2021ರಲ್ಲಿ ಧರ್ಮಡಂ ಕ್ಷೇತ್ರದಿಂದ ಸತತ ಎರಡು ಬಾರಿ ಜಯ ಗಳಿಸಿ ಮುಖ್ಯಮಂತ್ರಿ ಹುದ್ದೆಗೇರಿದ್ದರು.

1975-77ರ ಅವಧಿಯಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಪಿಣರಾಯಿ ವಿಜಯನ್ ಅವರನ್ನು ಬಂಧಿಸಿ ಜೈಲಿಗೆ ಹಾಕಲಾಗಿತ್ತು. ಜೈಲಿನಲ್ಲಿ ಅವರು ತೀವ್ರ ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿದ್ದರು. ಬಿಡುಗಡೆಯಾದ ನಂತರ ಅವರು ವಿಧಾನಸಭೆಗೆ ರಕ್ತಸಿಕ್ತ ಅಂಗಿಯನ್ನು ಹಿಡಿದು ಬಂದು ಭಾಷಣ ಮಾಡಿದ್ದು ಇತಿಹಾಸದಲ್ಲಿ ದಾಖಲಾಗಿದೆ.

1996ರಲ್ಲಿ ಮಾಜಿ ಮುಖ್ಯಮಂತ್ರಿ ಇ.ಕೆ. ನಾಯನಾರ್ ಸರ್ಕಾರದಲ್ಲಿ ವಿದ್ಯುತ್ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 1998ರಿಂದ 2015ರವರೆಗೆ ಸುಮಾರು 17 ವರ್ಷಗಳ ಕಾಲ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿಯಾಗಿ ಪಕ್ಷವನ್ನು ಮುನ್ನಡೆಸಿದ್ದರು. ಹಾಗೆಯೇ 2002ರಿಂದ ಸಿಪಿಐ(ಎಂ) ಪಾಲಿಟ್ ಬ್ಯುರೋ ಸದಸ್ಯರಾಗಿದ್ದರು.

ಎರಡು ಬಾರಿ ಸಿಎಂ...

2016ರಲ್ಲಿ ಎಲ್ಡಿಎಫ್ ಮೈತ್ರಿಕೂಟದ ಗೆಲುವಿನ ಬಳಿಕ ಪಿಣರಾಯಿ ವಿಜಯನ್ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಒಖಿ ಚಂಡಮಾರುತ, 2018ರ ಮಹಾ ಪ್ರವಾಹ, ನಿಫಾ ವೈರಸ್ ಹಾಗೂ ಕೋವಿಡ್-19 ಸಾಂಕ್ರಾಮಿಕ ರೋಗದ ಕಾಲಘಟ್ಟದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದರು.

2021ರಲ್ಲಿ ಸತತ ಎರಡನೇ ಬಾರಿಗೆ ಅಧಿಕಾರಕ್ಕೇರುವ ಮೂಲಕ ಇತಿಹಾಸ ಬರೆದಿದ್ದರು. ಆದರೆ ಮೂರನೇ ಅಧಿಕಾರಕ್ಕೇರುವ ಕನಸು ಭಗ್ನಗೊಂಡಿದೆ.
.Kerala Election Result: ಪಿಣರಾಯಿ 'ಹ್ಯಾಟ್ರಿಕ್' ಕನಸು ಭಗ್ನ; ಅಧಿಕಾರದತ್ತ UDF.Kerala Election Results Highlights: LDFಗೆ ಹೀನಾಯ ಸೋಲು, UDF ಅಮೋಘ ಸಾಧನೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.