ತಿರುವನಂತಪುರ: ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭೂತಪೂರ್ವ ಗೆಲುವಿನತ್ತ ಮುನ್ನಡೆದಿದೆ. ಮತ್ತೊಂದೆಡೆ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದ್ದ ಎಲ್ಡಿಎಫ್ಗೆ ಭಾರಿ ಹಿನ್ನಡೆಯಾಗಿದೆ.

ದಶಕಗಳ ಕಾಲ ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಿಸುತ್ತಿದ್ದ ಕೇರಳದ ಮತದಾರರು, ಕಳೆದ 2021ರಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗಕ್ಕೆ ಸತತ ಎರಡನೇ ಬಾರಿಗೆ ಅಧಿಕಾರ ನೀಡುವ ಮೂಲಕ ಇತಿಹಾಸ ಬರೆದಿದ್ದರು. ಆದರೆ 10 ವರ್ಷಗಳ ಬಳಿಕ ಕೇರಳದ ಮತದಾರರು ಮತ್ತೊಮ್ಮೆ ಹಳೆಯ ಪದ್ಧತಿಗೆ ಮರಳಿದ್ದಾರೆ.
.Kerala Results: ಕಾಸರಗೋಡು-ಮಂಜೇಶ್ವರದಲ್ಲಿ ಬಿಜೆಪಿಗೆ ಹಿನ್ನಡೆ,ಯುಡಿಎಫ್ಗೆ ಜಯ.Kerala Results: ಮತದಾನೋತ್ತರ ಸಮೀಕ್ಷೆಗೂ ಮೀರಿದ ಯುಡಿಎಫ್ ಸಾಧನೆ.
ಯುಡಿಎಫ್ ಗೆಲುವಿಗೆ ಪ್ರಮಖ ಕಾರಣಗಳು:

ಆಡಳಿತ ವಿರೋಧಿ ಅಲೆ:

ಸತತ 10 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ ಸರ್ಕಾರದ ವಿರುದ್ಧ ಜನರಲ್ಲಿ ಅಸಮಾಧಾನವಿತ್ತು. ದೀರ್ಘಕಾಲದ ಆಡಳಿತದಿಂದ ಬೇಸತ್ತ ಜನರು ಬದಲಾವಣೆಯನ್ನು ಬಯಸಿದ್ದರು.

ಭ್ರಷ್ಟಾಚಾರದ ಆರೋಪಗಳು:

ಪದೇ ಪದೇ ಸರ್ಕಾರದ ವಿರುದ್ಧ ಕೇಳಿ ಬಂದ ಭ್ರಷ್ಟಾಚಾರದ ಆರೋಪಗಳು ಎಲ್ಡಿಎಫ್ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದವು. ಶಬರಿಮಲೆ ಚಿನ್ನ ಕಳವು ಆರೋಪವು ಆಡಳಿತ ಪಕ್ಷಕ್ಕೆ ಹಿನ್ನಡೆಯನ್ನುಂಟು ಮಾಡಿತ್ತು.

ಕಾಂಗ್ರೆಸ್ ನಾಯಕರಲ್ಲಿ ಒಮ್ಮತ:

ಕಾಂಗ್ರೆಸ್ ನಾಯಕರಲ್ಲಿ ಭಿನ್ನಾಭಿಪ್ರಾಯ ಇತ್ತು. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಎಲ್ಲ ನಾಯಕರೂ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸಿದರು. ಕಾಂಗ್ರೆಸ್ ಮತ್ತು ಪ್ರಮುಖ ಮಿತ್ರಪಕ್ಷಗಳಾದ ಐಯುಎಂಎಲ್ ನಡುವೆ ಉತ್ತಮ ಸಮನ್ವಯ ಕಂಡುಬಂತು. ಸತತ ಸೋಲಿನ ನಂತರ ಈ ಬಾರಿ ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿ ಚುನಾವಣೆ ಎದುರಿಸಿದ್ದು ಗೆಲುವಿಗೆ ಪೂರಕವಾಯಿತು.

ಜನಪರ ಯೋಜನೆಗಳ ಭರವಸೆ:

ಯುಡಿಎಫ್ ಅಧಿಕಾರಕ್ಕೆ ಬಂದರೆ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿರುವುದು ಮಹಿಳೆಯರು, ಬಡವರು ಹಾಗೂ ಯುವ ಜನರನ್ನು ಗಮನ ಸೆಳೆಯುವಲ್ಲಿ ಯಶಸ್ವಿಯಾದವು.

ಎಲ್ಡಿಎಫ್ ಹೀನಾಯ ಸೋಲಿಗೆ ಕಾರಣಗಳು:

ತೆರಿಗೆ ಏರಿಕೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಜನರಲ್ಲಿದ್ದ ಆಕ್ರೋಶ ಆಡಳಿತ ಪಕ್ಷಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಸಾಂಪ್ರದಾಯಿಕವಾಗಿ ಎಡಪಕ್ಷಗಳತ್ತ ಒಲವಿದ್ದ ಅಲ್ಪಸಂಖ್ಯಾತ ಮತಗಳು ಈ ಬಾರಿ ಯುಡಿಎಫ್ ಹಾಗೂ ಎನ್ಡಿಎ ಕಡೆಗೆ ಹಂಚಿ ಹೋಗಿದ್ದು ಹಿನ್ನಡೆಯಾಯಿತು. ಯುವಜನರಿಗೆ ಉದ್ಯೋಗ ಸೃಷ್ಟಿಸಲು ವಿಫಲವಾಗಿರುವುದು ಮತದಾರರಲ್ಲಿ ಯುಡಿಎಫ್ಗೆ ಮಣೆ ಹಾಕಲು ಕಾರಣವಾಯಿತು. ಇದಲ್ಲದೆ ಬಂಡಾಯ ನಾಯಕರು ಸ್ಥಳೀಯವಾಗಿ ಎಲ್ಡಿಎಫ್ ಮತಗಳು ಸೋರಿಕೆಯಾಗುವಲ್ಲಿ ಗಮನಾರ್ಹ ಪಾತ್ರ ವಹಿಸಿದರು.

ಇಂದಿರಾ ಗ್ಯಾರಂಟಿ: ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನೀಡಿದ ಪ್ರಮುಖ ಭರವಸೆಗಳು:

ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ

ಕಾಲೇಜು ಹೋಗುವ ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು ₹1,000 ಆರ್ಥಿಕ ನೆರವು

ಕ್ಷೇಮನಿಧಿ ಮಾಸಾಶನ ತಿಂಗಳಿಗೆ ₹3,000ಕ್ಕೆ ಏರಿಕೆ

ಪ್ರತಿ ಕುಟುಂಬಕ್ಕೆ ₹25 ಲಕ್ಷಗಳ ಆರೋಗ್ಯ ವಿಮೆ ಸೌಲಭ್ಯ

ಯುವಜನರು ಸ್ವಂತ ಉದ್ಯೋಗ ಆರಂಭಿಸಲು ₹5 ಲಕ್ಷವರೆಗೆ ಬಡ್ಡಿರಹಿತ ಸಾಲ

ಕೃಷಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ

ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ

.Kerala Election: ಎಲ್ಡಿಎಫ್ಗೆ ಬಲವಾದ ಪೆಟ್ಟು ಕೊಟ್ಟ ಬಂಡಾಯ ನಾಯಕರು.Kerala Election Results: ಸಿಎಂ ಪಿಣರಾಯಿ ವಿಜಯನ್ 'ಹ್ಯಾಟ್ರಿಕ್' ಕನಸು ಭಗ್ನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.