ತಿರುವನಂತಪುರ: ಕೇರಳದ ರಾಜಕೀಯ ಇತಿಹಾಸದಲ್ಲಿ ಈ ಬಾರಿಯ ಚುನಾವಣೆ ಹಿಂದೆಂದೂ ಕಾಣದ ಕುತೂಹಲಕ್ಕೆ ಸಾಕ್ಷಿಯಾಗಿತ್ತು. ಇದರಂತೆ ಬಹುತೇಕ ಮತದಾನೋತ್ತರ ಸಮೀಕ್ಷೆಗಳನ್ನು ಮೀರಿ ಯುಡಿಎಫ್ ಸಾಧನೆ ಮಾಡಿದೆ.

ಬಹುತೇಕ ಸಮೀಕ್ಷೆಗಳು ಕೇರಳದಲ್ಲಿ ಜನರು ಈ ಬಾರಿ ಯುಡಿಎಫ್ಗೆ ಮಣೆ ಹಾಕಲಿರುವುದು ನಿಚ್ಚಳ ಎಂದು ಹೇಳಿತ್ತು. ಈ ಭವಿಷ್ಯವೀಗ ನಿಜವಾಗಿದೆ.

140 ಸದಸ್ಯ ಬಲದ ಕೇರಳದಲ್ಲಿ ಯುಡಿಎಫ್ 100ರಷ್ಟು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎಲ್ಡಿಎಫ್ 37 ಸ್ಥಾನಗಳಿಗಷ್ಟೇ ಸೀಮಿತಗೊಂಡಿದೆ. ಇದರೊಂದಿಗೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ರಚಿಸುವುದು ಖಚಿತವೆನಿಸಿದೆ.
.Kerala Election: ಎಲ್ಡಿಎಫ್ಗೆ ಬಲವಾದ ಪೆಟ್ಟು ಕೊಟ್ಟ ಬಂಡಾಯ ನಾಯಕರು.Kerala Election Results: ಸಿಎಂ ಪಿಣರಾಯಿ ವಿಜಯನ್ 'ಹ್ಯಾಟ್ರಿಕ್' ಕನಸು ಭಗ್ನ.
ದಶಕಗಳ ಕಾಲ ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಿಸುತ್ತಿದ್ದ ಕೇರಳದ ಮತದಾರರು, ಕಳೆದ 2021ರಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗಕ್ಕೆ (ಎಲ್ಡಿಎಫ್) ಸತತ ಎರಡನೇ ಬಾರಿಗೆ ಅಧಿಕಾರ ನೀಡುವ ಮೂಲಕ ಇತಿಹಾಸ ಬರೆದಿದ್ದರು. ಆದರೆ ಹ್ಯಾಟ್ರಿಕ್ ಕನಸು ಕಾಣುತ್ತಿದ್ದ ಪಿಣರಾಯಿ ವಿಜಯನ್ಗೆ ಹಿನ್ನಡೆ ಎದುರಾಗಿದೆ. ಇದರೊಂದಿಗೆ ಹಳೆಯ ಪದ್ಧತಿಗೆ ಮರಳಿದೆ.

ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ಈ ಬಾರಿ ಆಡಳಿತ ವಿರೋಧಿ ಅಲೆ ಇರುವುದು ಕಂಡುಬಂದಿದೆ. ಪಿ-ಮಾರ್ಕ್ ಪ್ರಕಾರ 71ರಿಂದ 79, ಮ್ಯಾಟ್ರಿಜ್ ಪ್ರಕಾರ 70ರಿಂದ 75, ಪೀಪಲ್ಸ್ ಪಲ್ಸ್ ಪ್ರಕಾರ 75ರಿಂದ 85, ಆ್ಯಕ್ಸಿಸ್ ಮೈಇಂಡಿಯಾ ಪ್ರಕಾರ 78ರಿಂದ 90 ಮತ್ತು ಜೆವಿಸಿ ಪ್ರಕಾರ 72ರಿಂದ 84 ಸ್ಥಾನಗಳನ್ನು ಯುಡಿಎಫ್ ಪಡೆಯಲಿದೆ ಎಂದಿತ್ತು. ಪಿ-ಮಾರ್ಕ್ ಹಾಗೂ ಮ್ಯಾಟ್ರಿಜ್ ಸರಳ ಬಹುಮತವನ್ನು ನೀಡಿದ್ದರೆ ಉಳಿದ ಮೂರು ಸಮೀಕ್ಷೆಗಳು ಸ್ಪಷ್ಟ ಬಹುಮತವನ್ನು ಯುಡಿಎಫ್ಗೆ ನೀಡಿತ್ತು.

ಎಲ್ಡಿಎಫ್ ಭದ್ರಕೋಟೆಗಳಲ್ಲೂ ಯುಡಿಎಫ್ ಗಮನಾರ್ಹ ಸಾಧನೆ ಮಾಡಲು ಯಶಸ್ವಿಯಾಗಿದೆ. ಮತ್ತೊಂದೆಡೆ ಬಿಜೆಪಿ ನೇತೃತ್ವದ ಎನ್ಡಿಎ ತೀವ್ರ ಸ್ಪರ್ಧೆ ಒಡ್ಡಿದ್ದು, ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಕೇರಳ ಚುನಾವಣಾ ಫಲಿತಾಂಶ: ವಿವಿಧ ರಾಜಕೀಯ ಪಕ್ಷಗಳ ಸಾಧನೆ (ಮಧ್ಯಾಹ್ನ 1.55ರ ವೇಳೆಗೆ)
.Kerala Results: ಯುಡಿಎಫ್ ಅಭೂತಪೂರ್ವ ಸಾಧನೆ, ಯಾರಾಗಲಿದ್ದಾರೆ ಕೇರಳ ಸಿಎಂ?.Kerala Exit Poll 2026: ಪಿಣರಾಯಿ 'ಹ್ಯಾಟ್ರಿಕ್' ಕನಸಿಗೆ ಯುಡಿಎಫ್ ಅಡ್ಡಗಾಲು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.