ತಿರುವನಂತಪುರ: ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಭರ್ಜರಿ ಗೆಲುವಿನತ್ತ ಸಾಗುತ್ತಿದೆ. 140 ಸದಸ್ಯ ಬಲದ ಕೇರಳ ವಿಧಾನಸಭೆಯಲ್ಲಿ ಯುಡಿಎಫ್ 104 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಮತ್ತೊಂದೆಡೆ ಆಡಳಿತರೂಢ ಎಲ್ಡಿಎಫ್ ಹೀನಾಯ ಸೋಲಿನತ್ತ ಮುಖ ಮಾಡಿದೆ. 34 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಗಳಿಸಿದೆ. ಅತ್ತ ಎನ್ಡಿಎ ಎರಡು ಸ್ಥಾನಗಳಲ್ಲಿ ಗೆಲುವಿನತ್ತ ಮುನ್ನಡೆದಿದೆ.
.Kerala Results: ಕೇರಳದಲ್ಲಿ ಆಡಳಿತ ವಿರೋಧಿ ಅಲೆ, UDFಗೆ ವರದಾನವಾಗಿದ್ದೇನು?.Kerala Results: ಕಾಸರಗೋಡು-ಮಂಜೇಶ್ವರದಲ್ಲಿ ಬಿಜೆಪಿಗೆ ಹಿನ್ನಡೆ,ಯುಡಿಎಫ್ಗೆ ಜಯ.
ಸೋಲಿನ ಭೀತಿಯಿಂದ ಪಾರಾದ ಸಿಎಂ...

ಮೊದಲ ಐದು ಸುತ್ತಿನ ಮತ ಎಣಿಕೆ ವೇಳೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಿನ್ನಡೆಯಲ್ಲಿದ್ದರು. ಆದರೆ 13ನೇ ಸುತ್ತಿನ ವೇಳೆಗೆ ತಮ್ಮ ನಿಕಟ ಸ್ಪರ್ಧಿ ವಿ.ಪಿ. ಅಬ್ದುಲ್ ರಶೀದ್ ಅವರಿಗಿಂತ 11 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ನೆಲಕಚ್ಚಿದ ಸಚಿವರು....

ಆಡಳಿತರೂಡ ಎಲ್ಡಿಫ್ ಮೈತ್ರಿಕೂಟ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಸಚಿವರಾದ ವೀಣಾ ಜಾರ್ಜ್, ಎಂ.ಬಿ. ರಾಜೇಶ್, ಒ.ಆರ್. ಕೇಲು, ಆರ್. ಬಿಂದು, ಜೆ. ಚಿಂಚುರಾಣಿ, ಪಿ. ರಾಜೀವ್, ಕೆ.ಬಿ. ಗಣೇಶ್ ಕುಮಾರ್, ವಿ.ಎನ್. ವಾಸವನ್, ವಿ. ಶಿವನ್ಕುಟ್ಟಿ, ವಿ. ಅಬ್ದುರಹೀಮಾನ್, ಕಡನ್ನಪಳ್ಳಿ ರಾಮಚಂದ್ರನ್, ಕೆ. ಶಶೀಂದ್ರನ್ ಹಾಗೂ ರೋಶಿ ಆಗಸ್ಟಿನ್ ಹಿನ್ನಡೆಯಲ್ಲಿದ್ದಾರೆ.

ವೀಣಾ ಜಾರ್ಜ್: ಅರನ್ಮುಲ ಕ್ಷೇತ್ರದಲ್ಲಿ ತಮ್ಮ ನಿಕಟ ಸ್ಪರ್ಧಿ ಕಾಂಗ್ರೆಸ್ನ ಅಬಿನ್ ವರ್ಕಿ ಕೋಡಿಯಟ್ಟು ವಿರುದ್ಧ ವೀಣಾ 18 ಸಾವಿರಕ್ಕೂ ಅಧಿಕ ಮತಗಳ ಹಿನ್ನಡೆಯಲ್ಲಿದ್ದಾರೆ.

ಎಂ.ಬಿ. ರಾಜೇಶ್: ತಿರ್ಥಲ ಕ್ಷೇತ್ರದಲ್ಲಿ ತಮ್ಮ ನಿಕಟ ಸ್ಪರ್ಧಿ ಕಾಂಗ್ರೆಸ್ನ ವಿ.ಟಿ. ಬಲರಾಂ ವಿರುದ್ಧ ಎಂ.ಬಿ. ರಾಜೇಶ್ 8 ಸಾವಿರಕ್ಕೂ ಅಧಿಕ ಮತಗಳ ಹಿನ್ನಡೆಯಲ್ಲಿದ್ದಾರೆ.

ಒ.ಆರ್. ಕೇಲು: ಮಾನಂದವಾಡಿ ಕ್ಷೇತ್ರದಲ್ಲಿ ತಮ್ಮ ನಿಕಟ ಸ್ಪರ್ಧಿ ಕಾಂಗ್ರೆಸ್ನ ಉಷಾ ವಿಜಯನ್ ವಿರುದ್ಧ ಒ.ಆರ್. ಕೇಲು 10 ಸಾವಿರಕ್ಕೂ ಅಧಿಕ ಮತಗಳ ಹಿನ್ನಡೆಯಲ್ಲಿದ್ದಾರೆ.

ಆರ್. ಬಿಂದು: ಇರಿಞಾಲಕೂಡ ಕ್ಷೇತ್ರದಲ್ಲಿ ಕೇರಳ ಕಾಂಗ್ರೆಸ್ನ ಥಾಮಸ್ ಉಣ್ಣಿಯಾಡನ್ ವಿರುದ್ಧ ಆರ್. ಬಿಂದು 66 ಸಾವಿರಕ್ಕೂ ಅಧಿಕ ಮತಗಳ ಅಂತರಿಂದ ಸೋಲನುಭವಿಸಿದ್ದಾರೆ.

ಜೆ. ಚಿಂಚುರಾಣಿ: ಚದಯಮಂಗಳಂ ಕ್ಷೇತ್ರದಲ್ಲಿ ತಮ್ಮ ನಿಕಟ ಸ್ಪರ್ಧಿ ಕಾಂಗ್ರೆಸ್ನ ಎಂ.ಎಂ. ನಸೀರ್ ವಿರುದ್ಧ ಜೆ. ಚಿಂಚುರಾಣಿ 6 ಸಾವಿರಕ್ಕೂ ಅಧಿಕ ಮತಗಳ ಹಿನ್ನಡೆಯಲ್ಲಿದ್ದಾರೆ.

ಪಿ.ರಾಜೀವ್: ಕಲಮಶ್ಶೇರಿ ಕ್ಷೇತ್ರದಲ್ಲಿ ತಮ್ಮ ನಿಕಟ ಸ್ಪರ್ಧಿ ಐಯುಎಂಎಲ್ನ ವಿ.ಇ. ಅಬ್ದುಲ್ ಗಫೂರ್ ವಿರುದ್ಧ ಪಿ. ರಾಜೀವ್ 15 ಸಾವಿರಕ್ಕೂ ಅಧಿಕ ಮತಗಳ ಹಿನ್ನಡೆಯಲ್ಲಿದ್ದಾರೆ.

ಕೆ.ಬಿ ಗಣೇಶ್ ಕುಮಾರ್: ಪಥನಾಪುರಂ ಕ್ಷೇತ್ರದಲ್ಲಿ ತಮ್ಮ ನಿಕಟ ಸ್ಪರ್ಧಿ ಕಾಂಗ್ರೆಸ್ನ ಜ್ಯೋತಿ ಕುಮಾರ್ ಚಾಮಕ್ಕಳ ವಿರುದ್ಧ ಕೆ.ಬಿ ಗಣೇಶ್ ಕುಮಾರ್ 8 ಸಾವಿರಕ್ಕೂ ಅಧಿಕ ಮತಗಳ ಹಿನ್ನಡೆಯಲ್ಲಿದ್ದಾರೆ.

ವಿ.ಎನ್. ವಾಸವನ್: ಎಟ್ಟುಮಾನೂರ್ ಕ್ಷೇತ್ರದಲ್ಲಿ ತಮ್ಮ ನಿಕಟ ಸ್ಪರ್ಧಿ ಕಾಂಗ್ರೆಸ್ನ ಎನ್. ಸುರೇಶ್ ವಿರುದ್ಧ ವಿ.ಎನ್. ವಾಸವನ್ 19 ಸಾವಿರಕ್ಕೂ ಅಧಿಕ ಮತಗಳ ಅಂತರಿಂದ ಸೋಲನುಭವಿಸಿದ್ದಾರೆ.

ವಿ. ಶಿವನ್ಕುಟ್ಟಿ: ನೇಮಮ್ ಕ್ಷೇತ್ರದಲ್ಲಿ ತಮ್ಮ ನಿಕಟ ಸ್ಪರ್ಧಿ ಬಿಜೆಪಿಯ ರಾಜೀವ್ ಚಂದ್ರಶೇಖರ್ ವಿರುದ್ಧ ವಿ. ಶಿವನ್ಕುಟ್ಟಿ 3 ಸಾವಿರಕ್ಕೂ ಅಧಿಕ ಮತಗಳ ಹಿನ್ನಡೆಯಲ್ಲಿದ್ದಾರೆ.

ವಿ. ಅಬ್ದುರಹೀಮಾನ್: ತಿರೂರು ಕ್ಷೇತ್ರದಲ್ಲಿ ತಮ್ಮ ನಿಕಟ ಸ್ಪರ್ಧಿ ಐಯುಎಲ್ಎಂನ ಕುರುಕ್ಕೊಲಿ ಮೊಯಿದಿನ್ ವಿರುದ್ಧ ವಿ. ಅಬ್ದುರಹೀಮಾನ್ 19 ಸಾವಿರಕ್ಕೂ ಅಧಿಕ ಮತಗಳ ಹಿನ್ನಡೆಯಲ್ಲಿದ್ದಾರೆ.

ಕಡನ್ನಪಳ್ಳಿ ರಾಮಚಂದ್ರನ್: ಕಣ್ಣೂರು ಕ್ಷೇತ್ರದಲ್ಲಿ ತಮ್ಮ ನಿಕಟ ಸ್ಪರ್ಧಿ ಕಾಂಗ್ರೆಸ್ನ ಟಿ.ಒ. ಮೋಹನನ್ ವಿರುದ್ಧ ಕಡನ್ನಪಳ್ಳಿ ರಾಮಚಂದ್ರನ್ 18 ಸಾವಿರಕ್ಕೂ ಅಧಿಕ ಮತಗಳ ಹಿನ್ನಡೆಯಲ್ಲಿದ್ದಾರೆ.

ಎ.ಕೆ. ಶಶೀಂದ್ರನ್: ಎಲತ್ತೂರ್ ಕ್ಷೇತ್ರದಲ್ಲಿ ತಮ್ಮ ನಿಕಟ ಸ್ಪರ್ಧಿ ಕಾಂಗ್ರೆಸ್ನ ವಿದ್ಯಾ ಬಾಲಕೃಷ್ಣನ್ ವಿರುದ್ಧ ಎ.ಕೆ. ಶಶೀಂದ್ರನ್ 12 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ.

ರೋಶಿ ಆಗಸ್ಟಿನ್: ಇಡುಕ್ಕಿ ಕ್ಷೇತ್ರದಲ್ಲಿ ತಮ್ಮ ನಿಕಟ ಸ್ಪರ್ಧಿ ಕಾಂಗ್ರೆಸ್ನ ರಾಯ್ ಕೆ. ಪೌಲೋಸ್ ವಿರುದ್ಧ ರೋಶಿ ಆಗಸ್ಟಿನ್ 23 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ.
.Kerala Results: ಮತದಾನೋತ್ತರ ಸಮೀಕ್ಷೆಗೂ ಮೀರಿದ ಯುಡಿಎಫ್ ಸಾಧನೆ.Kerala Election: ಎಲ್ಡಿಎಫ್ಗೆ ಬಲವಾದ ಪೆಟ್ಟು ಕೊಟ್ಟ ಬಂಡಾಯ ನಾಯಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.