ತಿರುವನಂತಪುರ: ಕೇರಳಂನ ನೇಮಂ, ಕಜಕ್ಕೂಟ್ಟಂ ಹಾಗೂ ಚಾತ್ತನ್ನೂರ್ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಮತ್ತೆ ಖಾತೆ ತೆರೆದಿದೆ.

ತಿರುವನಂತಪುರದ ನೇಮಂ ಕ್ಷೇತ್ರದಿಂದ ಬಿಜೆಪಿ ಕೇರಳಂ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್, ಕಜಕ್ಕೂಟ್ಟಂ ಕ್ಷೇತ್ರದಿಂದ ವಿ.ಮುರಳೀಧರನ್ ಹಾಗೂ ಕೊಲ್ಲಂ ಜಿಲ್ಲೆಯ ಚಾತ್ತನ್ನೂರ್ ಕ್ಷೇತ್ರದಿಂದ ಬಿ.ಬಿ. ಗೋಪಕುಮಾರ್ ಗೆಲುವು ಸಾಧಿಸಿದ್ದಾರೆ.

‘ಇದು ಸಿಪಿಐ ವಿರೋಧಿ ಚುನಾವಣೆ ಯಾಗಿತ್ತು. ಭ್ರಷ್ಟಾಚಾರ, ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣದಿಂದ ಜನರು ಬೇಸತ್ತಿದ್ದರು. ಹೀಗಾಗಿ, ನೇಮಂ, ಕಜಕ್ಕೂಟ್ಟಂ ಮತ್ತು ಚಾತ್ತನೂರ್ ಕ್ಷೇತ್ರಗಳ ಜನರು ಕಾಂಗ್ರೆಸ್ ಮತ್ತು ಸಿಪಿಎಂಗೆ ಸ್ಪಷ್ಟ ಉತ್ತರ ನೀಡಿದ್ದಾರೆ’ ಎಂದು ರಾಜೀವ್ ಚಂದ್ರಶೇಖರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

2016ರ ವಿಧಾನಸಭಾ ಚುನಾವಣೆಯಲ್ಲಿ ನೇಮಂ ಕ್ಷೇತ್ರದಿಂದ ಒ.ರಾಜಗೋಪಾಲ್ ಗೆಲುವ ಸಾಧಿಸುವ ಮೂಲಕ ಬಿಜೆಪಿ ಚೊಚ್ಚಲ ಸ್ಥಾನ ಪಡೆದಿತ್ತು. ಆದರೆ, 2021ರಲ್ಲಿ ಆ ಸ್ಥಾನವನ್ನು ಕಳೆದುಕೊಂಡಿತ್ತು.

ಪಕ್ಷ ಸಂಘಟಿಸಿದ ರಾಜೀವ್: ಉದ್ಯಮಿ ರಾಜೀವ್ ಚಂದ್ರಶೇಖರ್ ಅವರು ರಾಜ್ಯಸಭಾ ಸದಸ್ಯರಾಗಿ, ಕೇಂದ್ರ ಸಚಿವರಾಗಿ ಈಗ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ತಮ್ಮ ರಾಜಕೀಯ ಹಾದಿ ಯಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿಯು ನೆಲೆ ಕಂಡುಕೊಳ್ಳಲು ದೀರ್ಘಕಾಲದಿಂದ ಹೆಣಗಾಡುತ್ತಿರುವ ಕೇರಳಂನಲ್ಲಿ, ಪಕ್ಷವನ್ನು ಬಲಗೊಳಿಸುವ ಕಠಿಣ ಜವಾಬ್ದಾರಿಯನ್ನು ಪಕ್ಷದ ರಾಷ್ಟ್ರೀಯ ನಾಯಕರು ಒಂದು ವರ್ಷದ ಹಿಂದೆ ರಾಜೀವ್ ಅವರಿಗೆ ವಹಿಸಿದ್ದರು. ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವ ಮೂಲಕ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಕಾರಣರಾಗಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-51-1037611333

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.