ಕಣ್ಣೂರು:‘ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಲ್ಡಿಎಫ್ ಜತೆಗೆ ಬಿಜೆಪಿ ಪಾಲುದಾರಿಕೆ ಮಾಡಿಕೊಂಡಿದೆ. ಎಲ್ಡಿಎಫ್ ಗೆಲ್ಲಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಬಯಸುತ್ತಿದ್ದಾರೆ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದರು.

ಮಂಗಳವಾರ ಇಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್, ‘ಕೇರಳದಲ್ಲಿ ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಎಲ್ಡಿಎಫ್ ವಿರುದ್ಧ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹೋರಾಟ ನಡೆಸಲಿದೆ’ ಎಂದರು.

ಯುಡಿಎಫ್ ಬೆಂಬಲದೊಂದಿಗೆ ಸ್ಪರ್ಧಿಸುತ್ತಿರುವ ಇಬ್ಬರು ಮಾಜಿ ಸಿಪಿಎಂ ಮುಖಂಡರಾದ ವಿ.ಕುಞಿಕೃಷ್ಣನ್ ಮತ್ತು ಟಿ.ಕೆ ಗೋವಿಂದನ್ ಸಹ ರಾಹುಲ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.

‘ಆಶ್ಚರ್ಯವೆಂದರೆ, ಇದೇ ಮೊದಲ ಬಾರಿಗೆ ಕೇರಳದಲ್ಲಿ ಸಂಪೂರ್ಣ ಭಿನ್ನ ಸಿದ್ಧಾಂತಗಳ ಬಿಜೆಪಿ ಮತ್ತು ಎಲ್ಡಿಎಫ್ ನಡುವೆ ಒಪ್ಪಂದ ಆಗಿದೆ. ಪ್ರಧಾನಿ ಮೋದಿ ಅವರು ಚುನಾವಣಾ ಭಾಷಣದಲ್ಲಿ ಧರ್ಮ, ದೇವರ ಬಗ್ಗೆ ಮಾತನಾಡುತ್ತಾರೆ. ಆದರೆ, ಕೇರಳಕ್ಕೆ ಬಂದಾಗ ಎಲ್ಲಿಯೂ ಅವರು ಶಬರಿಮಲೆ ಚಿನ್ನ ಕಳವು ಪ್ರಕರಣವನ್ನು ಪ್ರಸ್ತಾಪಿಸಿಲ್ಲ, ಏಕೆಂದರೆ, ಎಲ್ಡಿಎಫ್ ಮುಖಂಡರು ಚಿನ್ನ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ, ಬಿಜೆಪಿ ಇದರ ಬಗ್ಗೆ ಮೌನ ವಹಿಸಿದೆ’ ಎಂದು ದೂರಿದರು.

‘ಹಿಂದೂ ಧರ್ಮದ ಸ್ವಯಂಘೋಷಿತ ರಕ್ಷಕರು’ ಕೇರಳಕ್ಕೆ ಬಂದಾಗ ಯಾಕೆ ಶಬರಿಮಲೆ ಚಿನ್ನ ಕಳವು ಪ್ರಕರಣದ ಬಗ್ಗೆ ಮಾತನಾಡಿಲ್ಲ’ ಎಂದು ರಾಹುಲ್ ಪ್ರಶ್ನಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-51-1011367751

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.