ತಿರುವನಂತಪುರ: ಕೇರಳದ ವಿಧಾನಸಭಾ ಚುನಾವಣೆಯಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್(ಯುಡಿಎಫ್) 102 ಸ್ಥಾನಗಳೊಂದಿಗೆ ಐತಿಹಾಸಿಕ ಗೆಲುವು ದಾಖಲಿಸಿರುವುದರ ಹಿಂದೆ ರಾಜ್ಯ ಕಾಂಗ್ರೆಸ್ನ ‘ವಾರ್ ರೂಮ್’ನ ಪಾತ್ರ ಪ್ರಮುಖವಾಗಿದೆ.

ಸಾಮಾಜಿಕ ಮಾಧ್ಯಮದ ಮೂಲಕ ಪಕ್ಷದ ಕಾರ್ಯಕರ್ತರನ್ನು ತಳಮಟ್ಟದವರೆಗೆ ಸಕ್ರಿಯವಾಗಿಟ್ಟಿದ್ದ ಈ ‘ವಾರ್ ರೂಮ್’ ನೇತೃತ್ವವಹಿಸಿದ್ದವರು ಕರ್ನಾಟಕ ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅವರ ಪುತ್ರ ಹರ್ಷ ಕನಡಂ.

ಚುನಾವಣೆ ಆರಂಭಕ್ಕೂ ಮುಂಚಿತವಾಗಿ ಈ ವಾರ್ ರೂಮ್ ಸಕ್ರಿಯವಾಗಿತ್ತು. ರಾಜ್ಯಮಟ್ಟದ ನಾಯಕರಿಂದ ಹಿಡಿದು ತಳಮಟ್ಟದ ಕಾರ್ಯಕರ್ತರವರೆಗೆ ನಿರಂತರ ಸಂವಹನ ಸಾಧಿಸಿಸುವುದು, ಮಾಧ್ಯಮಗಳಿಗೆ ಅಗತ್ಯ ಪ್ರಚಾರ ಸಾಮಗ್ರಿ ಸಿದ್ಧಪಡಿಸುವುದು, ವಿರೋಧ ಪಕ್ಷಗಳ ಹೇಳಿಕೆಗಳಿಗೆ ಪ್ರತಿಕ್ರಿಯೆಗಳನ್ನು ತಯಾರಿಸುವುದು, ಪಕ್ಷದ ನಾಯಕರು ನೀಡುವ ಸಂದೇಶವನ್ನು ತಳಮಟ್ಟದ ಕಾರ್ಯಕರ್ತರಿಗೆ, ಮತದಾರರಿಗೆ ಪರಿಣಾಮಕಾರಿಯಾಗಿ ತಲುಪಿಸುವುದು ‘ವಾರ್ರೂಮ್‘ನ ಪ್ರಮುಖ ಉದ್ದೇಶಗಳಾಗಿದ್ದವು.

55 ಸದಸ್ಯರಿದ್ದ ಈ ವಾರ್ ರೂಮ್ನಲ್ಲಿ ಹೆಚ್ಚಿನವರು ಮಹಿಳೆಯರು. ಇವರೊಂದಿಗೆ ಅನೇಕ ಸಂಸ್ಥೆಗಳು ಮತ್ತು ಸ್ವಯಂಸೇವಕರೂ ಸಹ ವಿಷಯಗಳನ್ನು ಸಿದ್ಧಪಡಿಸಿಕೊಡುತ್ತಿದ್ದರು.

'ಸಾಮಾಜಿಕ ಮಾಧ್ಯಮಗಳ ಮೂಲಕ ಮಾನವ -ಪ್ರಾಣಿ ಸಂಘರ್ಷ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಕುಟುಂಬದ ವಿರುದ್ಧದ ಆರೋಪಗಳು, ವಿವಿಧ ಇಲಾಖೆಗಳಲ್ಲಿನ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದಂತಹ ವಿಷಯಗಳಿಗೆ ಪ್ರಚಾರ ನೀಡಲಾಯಿತು. ಇವೆಲ್ಲವುಗಳಿಗಿಂತ ಶಬರಿಮಲೆ ಅಯ್ಯಪ್ಪ ದೇವಾಲಯದ ಚಿನ್ನದ ದರೋಡೆಗೆ ಸಂಬಂಧಿಸಿದ ವಿಷಯಗಳು ಸಾಮಾಜಿಕ ಮಾಧ್ಯಮ ಪ್ರಚಾರಗಳಲ್ಲಿ ಹೆಚ್ಚು ಪ್ರಾಬಲ್ಯ ಮೆರೆದವು’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ವಾರ್ ರೂಮ್ ಉಪಾಧ್ಯಕ್ಷ ಪಿ.ಎಂ.ನಿಯಾಸ್ ಹೇಳಿದರು.

ಕೇರಳದಲ್ಲಿ ನಡೆದ ಎಸ್ಐಆರ್ ಪ್ರಕ್ರಿಯೆಯಲ್ಲಿ ಮತಪಟ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ಹೆಸರುಗಳು ಅಳಿಸಿ ಹೋಗದಂತೆ ತಡೆಯುವಲ್ಲಿ ವಾರ್ ರೂಮ್ ನೆರವಾಯಿತು’ ಎಂದು ನಿಯಾಸ್ ಹೇಳಿದರು.

‘ಎಸ್ಐಆರ್ ಪ್ರಕ್ರಿಯೆಯಲ್ಲಿ ಪ್ರತಿ ಪ್ರಕರಣದ ಪ್ರಕ್ರಿಯೆಯನ್ನೂ ಪರಿಶೀಲಿಸುತ್ತಿದ್ದೆವು. ನೈಜ ಮತದಾರರು ಹೊರಗುಳಿಯದಂತೆ ನೋಡಿಕೊಳ್ಳಲು ಬೂತ್ ಮಟ್ಟದ ಏಜೆಂಟ್ ಮತ್ತು ಕಾರ್ಯಕರ್ತರನ್ನು ಎಚ್ಚರಿಸುತ್ತಿದ್ದವು. ಸ್ಥಳೀಯ ಮಟ್ಟದ ನಾಯಕರಿಂದ ಪಡೆದ ಮಾಹಿತಿಗಳನ್ನು ಪಡೆದು ಪರಿಶೀಲಿಸುವ ಕಾರ್ಯವಿಧಾನವನ್ನೂ ಜಾರಿಗೆ ತಂದಿದ್ದೆವು’ ಎಂದು ಅವರು ವಿವರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-51-1713615633

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.