ಕೊಪ್ಪಳ: ದೇಶದ 13 ರಾಜ್ಯಗಳಲ್ಲಿ ಈಗಾಗಲೇ ಎೆಸ್ಐಆರ್ ಪ್ರಕ್ರಿಯೆ ನಡೆಸಲಾಗಿದ್ದು, ಕನಿಷ್ಠ ಐದು ಕೋಟಿ ಅರ್ಹ ಮತದಾರರು ಸೇರಿದಂತೆ ಒಟ್ಟು 6.5 ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ಹೊರಹಾಕಲಾಗಿದೆ. ಆ ಮೂಲಕ ಕೋಟಿಗಟ್ಟಲೇ ಮತದಾರರನ್ನು ಮತದಾನದ ಹಕ್ಕಿನಿಂದ ವಂಚಿಸಲಾಗಿದೆ ಎಂದು ರೈತ ಸಂಘದ ಮುಖಂಡ ಜೆ.ಎಂ.ವೀರಸಂಗಯ್ಯ ಆಪಾದಿಸಿದರು.

ನಗರದ ಅಶೋಕ ವೃತ್ತದ ಬಳಿ ಶನಿವಾರ ಕೇಂದ್ರ ಚುನಾವಣಾ ಆಯೋಗ ಜಾರಿಗೆ ತರುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್.ಐ.ಆರ್) ಪ್ರಕ್ರಿಯೆಯನ್ನು ವಿರೋಧಿಸಿ ಮತ್ತು ರಾಜ್ಯದ ಮತದಾರರ ಹಕ್ಕುಗಳ ರಕ್ಷಣೆಗೆ ಒತ್ತಾಯಿಸಿ ನಡೆದ ಮೊದಲ ಸುತ್ತಿನ ಎಸ್.ಐ.ಆರ್ ಕರ್ನಾಟಕ ಪ್ರತಿರೋಧ ಎಂಬ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

‘ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಹೊಸದಾಗಿ ಹೆಸರು ನೋಂದಾಯಿಸುವ ಮತದಾರರಿಗೆ 2025ರ ಜೊತೆಗೆ 2002ರ ಮತದಾರರ ಪಟ್ಟಿಯ ದಾಖಲೆ ಅಥವಾ ಕಠಿಣವಾದ 11 ದಸ್ತಾವೇಜುಗಳನ್ನು ಕೇಳಲಾಗುತ್ತಿದೆ. ಆ ಮೂಲಕ ದಮನಿತ, ಅಲ್ಪಸಂಖ್ಯಾತ, ದಲಿತ, ಆದಿವಾಸಿಗಳ ಮತದಾನದ ಹಕ್ಕನ್ನು ಕಸಿಯಲಾಗುತ್ತಿದೆ. ಲಾಜಿಕಲ್ ಡಿಸ್ಕ್ರಿಪೆನ್ಸಿ (ಹೆಸರು, ವಿಳಾಸದ ಸಣ್ಣಪುಟ್ಟ ವ್ಯತ್ಯಾಸ) ನೆಪದಲ್ಲಿ ವಿವಾಹಿತ ಮಹಿಳೆಯರು, ಅಲೆಮಾರಿಗಳು, ದಲಿತರು, ಗ್ರಾಮೀಣ ಬಡವರು ಮತ್ತು ಅಲ್ಪಸಂಖ್ಯಾತರ ಮತಗಳನ್ನು ಉದ್ದೇಶಪೂರ್ವಕವಾಗಿ ಕಡಿತಗೊಳಿಸಲಾಗುತ್ತಿದೆ’ ಎಂದರು.

‘ಇದು ವಿರೋಧ ಪಕ್ಷಗಳ ಮತ ಬ್ಯಾಂಕ್ ಕುಗ್ಗಿಸುವ ಮತ್ತು ಜನರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡುವ ಮನುವಾದಿ ಹುನ್ನಾರವಾಗಿದೆ. ಹಾಗಾಗಿಯೇ ಕೇಂದ್ರ ಚುನಾವಣಾ ಆಯೋಗದ ಈ ಪ್ರಕ್ರಿಯೆಯನ್ನು ವಿರೋಧಿಸಿ ಮತ್ತು ರಾಜ್ಯದ ಮತದಾರರ ಹಕ್ಕುಗಳ ರಕ್ಷಣೆಗೆ ಒತ್ತಾಯಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮೊದಲ ಸುತ್ತಿನ ಎಸ್.ಐ.ಆರ್ ಕರ್ನಾಟಕ ಪ್ರತಿರೋಧ ಎಂಬ ಹಕ್ಕೊತ್ತಾಯ ಚಳುವಳಿಯನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದರು.

ಸಭೆಯ ಬಳಿಕ ಜಿಲ್ಲಾಡಳಿತ ಪರವಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಮನವಿ ಸ್ವೀಕರಿಸಿ, ಸೂಕ್ತ ಕ್ರಮ ತೆಗೆದುಕೊಳ್ಳುವದಾಗಿ ಭರವಸೆ ನೀಡಿದರು.

ಸಭೆಗೂ ಮುನ್ನ ಗಡಿಯಾರ ಕಂಬದಿಂದ ಅಶೋಕವೃತ್ತದ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಿತು. ಬಿರು ಬಿಸಿಲಿನ ನಡುವೆಯೂ ನೂರಾರು ಜನರು ಮರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಯೂಸೂಫಿಯಾ ಮಸೀದಿಯ ಮುಫ್ತಿ ನಜೀರ್ ಅಹ್ಮದ್, ಮುಖಂಡರಾದ ಆರ್.ಕೆ. ದೇಸಾಯಿ, ಸಿರಾಜ್ ಸಿದ್ದಾಪೂರ, ಜ್ಯೋತಿ ಎಂ. ಗೊಂಡಬಾಳ, ಶೈಲಜಾ ಹಿರೇಮಠ, ಸಾವಿತ್ರಿ ಮುಜುಮದಾರ, ಸಲ್ಮಾ ಜಾನ್, ರಮ್ಯಾಕೃಷ್ಣ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ವೆಲ್ಫೇರ್ ಪಕ್ಷದ ಆದಿಲ್ ಪಟೇಲ್, ಪಿಂಜಾರ ಸಮಾಜದ ರಾಜ್ಯ ಖಜಾಂಚಿ ಶಾಹಬುದ್ದೀನ್ ಸಾಬ್, ಫಾದರ್ ಚನ್ನಬಸಪ್ಪ, ಕೆ.ಬಿ.ಗೋನಾಳ, ಎಚ್.ವಿ. ರಾಜಾಬಕ್ಷಿ, ಸಲೀಂ ಖಾದ್ರಿ, ಶರಣು ಶೆಟ್ಟರ್, ಬಸವರಾಜ್ ಶೀಲವಂತರ, ಆಸಿಫ್ ಅಲಿ, ಎಸ್.ಎ.ಗಫಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-35-1284630683

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.