ಆನೇಕಲ್: ತಮಿಳುನಾಡು ವಿಧಾನಸಭೆ ಚುನಾವಣೆಯ ಮತದಾನಕ್ಕೆ (ಏ.23) ಕೆಲವೇ ದಿನಗಳು ಬಾಕಿ ಉಳಿದಿದ್ದು, ಗಡಿ ಜಿಲ್ಲೆ ಕೃಷ್ಣಗಿರಿಯ ಆರು ವಿಧಾನಸಭಾ ಕ್ಷೇತ್ರ ಗಳಲ್ಲಿ ಚುನಾವಣಾ ಕಣ ರಂಗೇರಿದೆ.

ಕೊನೆಯ ಹಂತದಲ್ಲಿ ಮತದಾರರ ಮನ ಸೆಳೆಯಲು ಬಿರು ಬಿಸಿಲಿನ ನಡುವೆ ಎಲ್ಲಾ ಪಕ್ಷಗಳ ಮುಖಂಡರು, ಕಾರ್ಯಕರ್ತರು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ.

ಕೃಷ್ಣಗಿರಿ ಜಿಲ್ಲೆಯ ಥಳೀ, ಹೊಸೂರು, ವೆಪನಪಲ್ಲಿ, ಕೃಷ್ಣಗಿರಿ, ಬರಗೂರು, ಉತ್ತಂಗರೈ ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳೂ ಕನ್ನಡಿಗರ ಮನವೊಲಿಕೆಗೆ ಮುಂದಾಗಿವೆ. ಇದೇ ಕಾರಣದಿಂದ ಕೃಷ್ಣಗಿರಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಯನ್ನು ಕಾಂಗ್ರೆಸ್ ಪಕ್ಷ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ವಹಿಸಿದೆ.

ಆನೇಕಲ್ ಗಡಿಯಲ್ಲಿರುವ ಹೊಸೂರು ವಿಧಾನಸಭಾ ಕ್ಷೇತ್ರ ಕೈಗಾರಿಕೆ, ವ್ಯಾಪಾರ, ಬಹುರಾಷ್ಟ್ರೀಯ ಕಂಪನಿ ಹಾಗೂ ನೂರಾರು ಕಾರ್ಖಾನೆಗಳಿಂದಾಗಿ ‘ಮಿನಿ ಬೆಂಗಳೂರು’ ಎಂದೇ ತಮಿಳುನಾಡಿನಲ್ಲಿ ಚಿರಪರಿಚಿತ.

ಇಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ನಡುವೆ ನೇರ ಸೆಣಸಾಟ ನಡೆಯುತ್ತಿದೆ. ಎಐಎಡಿಎಂಕೆಯಿಂದ ಮಾಜಿ ಶಾಸಕ ಪಿ.ಬಾಲಕೃಷ್ಣಾ ರೆಡ್ಡಿ ಮತ್ತು ಡಿಎಂಕೆಯಿಂದ ಹೊಸೂರು ಮಾಜಿ ಮೇಯರ್ ಹಾಗೂ ಬೂತ್ ಮಟ್ಟದಿಂದ ಪಕ್ಷ ಸಂಘಟಿಸಿದ ಎಸ್.ಎ.ಸತ್ಯ ಕಣದಲ್ಲಿದ್ದಾರೆ. ಟಿವಿಕೆ ಪಕ್ಷದಿಂದ ವೆಂದಕರಸಣ್ ಮತ್ತು ಎನ್ಟಿಕೆ ಪಕ್ಷದಿಂದ ಸ್ಟಾಲಿನ್ ಕಣದಲ್ಲಿದ್ದಾರೆ.

ಎಐಎಡಿಎಂಕೆ ಅಭ್ಯರ್ಥಿ ಬಾಲಕೃಷ್ಣಾ ರೆಡ್ಡಿ ಪ್ರಬಲ ರೆಡ್ಡಿ ಸಮುದಾಯಕ್ಕೆ ಸೇರಿದ್ದು, 2016ರಲ್ಲಿ ಹೊಸೂರು ಶಾಸಕರಾಗಿದ್ದವರು. ಡಿಎಂಕೆ ಅಭ್ಯರ್ಥಿ ಹೊಸೂರು ಮಾಜಿ ಮೇಯರ್ ಆಗಿದ್ದವರು. ಹಾಗಾಗಿ ಇಬ್ಬರೂ ಕ್ಷೇತ್ರದ ಜನರಿಗೆ ಚಿರಪರಿಚಿತರು.

ಹಾಲಿ ಶಾಸಕ, ಒಕ್ಕಲಿಗ ಸಮುದಾಯದ ವೈ.ಪ್ರಕಾಶ್ ಅವರಿಗೆ ಡಿಎಂಕೆ ಈ ಬಾರಿ ಟಿಕೆಟ್ ನಿರಾಕರಿಸಿರುವುದು ಆ ಪಕ್ಷದ ಅಭ್ಯರ್ಥಿ ಗೆಲುವಿನ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ಕುತೂಹಲ ಹುಟ್ಟಿಸಿದೆ.ಆದರೆ, ಪ್ರಕಾಶ್ ನಡೆ ಇನ್ನೂ ನಿಗೂಢವಾಗಿದೆ. ಹೊಸೂರು ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಅವರು ಡಿಎಂಕೆ ವಿರುದ್ಧ ಮುನಿಸಿಕೊಂಡರೆ ಡಿಎಂಕೆ ಅಭ್ಯರ್ಥಿಗೆ ಕಷ್ಟವಾಗಲಿದೆ. ಒಕ್ಕಲಿಗರ ಮತ ಸೆಳೆಯಲು ಎಐಎಡಿಎಂಕೆ ಇನ್ನಿಲ್ಲದಂತೆ ಪ್ರಯತ್ನ ನಡೆಸಿದೆ.

ಕ್ಷೇತ್ರದಲ್ಲಿ ಒಟ್ಟು 3,28,295 ಮತದಾರರಿದ್ದು 1,69,099 ಪುರುಷರು ಮತ್ತು 1,69,124 ಮಹಿಳಾ ಮತದಾರ ರಿದ್ದಾರೆ. ಕ್ಷೇತ್ರದಲ್ಲಿ ಪುರುಷರು ಮತ್ತು ಮಹಿಳೆಯರು ಸಮ ಪ್ರಮಾಣದಲ್ಲಿದ್ದಾರೆ.

ಕೃಷ್ಣಗಿರಿ ಜಿಲ್ಲೆಯ ವೇಪನಪಲ್ಲಿ ವಿಧಾನಸಭಾ ಕ್ಷೇತ್ರದಲ್ಲೂ ಡಿಎಂಕೆ ಅಭ್ಯರ್ಥಿ ಪಿ.ಎಸ್.ಶ್ರೀನಿವಾಸನ್ ಮತ್ತು ಎಐಎಡಿಎಂಕೆ ಅಭ್ಯರ್ಥಿ ಕೆ.ಪಿ.ಮುನಿಸ್ವಾಮಿ ನಡುವೆ ಪ್ರಬಲ ಸ್ಪರ್ಧೆ ಏರ್ಪಟ್ಟಿದೆ. ಡಿಎಂಕೆ ಭದ್ರಕೋಟೆಯಾಗಿದ್ದ ವೇಪನಪಲ್ಲಿಯನ್ನು 2021ರಲ್ಲಿ ಮೊದಲ ಬಾರಿ ಎಐಎಡಿಎಂಕೆ ಪಕ್ಷದ ಕೆ.ಪಿ.ಮುನಿಸ್ವಾಮಿ ವಶಪಡಿಸಿಕೊಂಡಿದ್ದರು. ಈ ಬಾರಿ ಇವರಿಬ್ಬರ ನಡುವೆಯೇ ತೀವ್ರ ಪೈಪೋಟಿ ಏರ್ಪಟ್ಟಿದೆ.

ಕೃಷ್ಣಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾಜಿ ಸಂಸದ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಎ.ಚೆಲ್ಲಕುಮಾರ್ ಸ್ಪರ್ಧಿಸಿದ್ದರೆ, ಎಡಿಎಂಕೆ ಪಕ್ಷದಿಂದ ಕೆ.ಅಶೋಕ್ ಕುಮಾರ್ ಕಣದಲ್ಲಿದ್ದಾರೆ. ಎನ್ಟಿಕೆ ಪಕ್ಷದಿಂದ ಸುಗಂತಿ ಮತ್ತು ಟಿವಿಕೆ ಪಕ್ಷದಿಂದ ಮುಗಂದ್ ಕಣದಲ್ಲಿದ್ದಾರೆ. ಚೆಲ್ಲಕುಮಾರ್ ಕಾಂಗ್ರೆಸ್ ಹೈಕಮಾಂಡ್ನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಈ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿಯಾಗಿದ್ದಾರೆ. 2011, 2021ರಲ್ಲಿ ಎಐಎಡಿಎಂಕೆ ಮತ್ತು 2016ರಲ್ಲಿ ಡಿಎಂಕೆ ಗೆಲುವು ಸಾಧಿಸಿತ್ತು. ಕ್ಷೇತ್ರದಲ್ಲಿ ಒಟ್ಟು 2,65,037 ಮತದಾರರಿದ್ದಾರೆ. ಬರಗೂರು ವಿಧಾನಸಭಾ ಕ್ಷೇತ್ರದಲ್ಲಿ ಡಿಎಂಕೆ ಪಕ್ಷದ ಮತಿಯಳಗನ್ ಮತ್ತು ಎಡಿಎಂಕೆ ಪಕ್ಷದಿಂದ ಗೋವಿಂದಅರಸನ್ ಸೆಣಸಾಡುತ್ತಿ ದ್ದಾರೆ. ಎನ್ಟಿಕೆ ಪಕ್ಷದಿಂದ ಕವಿನ್ ಮತ್ತು ಟಿವಿಕೆ ಪಕ್ಷದಿಂದ ಇ.ಮುರಳೀಧರನ್ ಕಣದಲ್ಲಿದ್ದಾರೆ.

ಎಐಎಡಿಎಂಕೆ ಪಕ್ಷದ ಭದ್ರಕೋಟೆ ಉತ್ತಂಗರೈ ವಿಧಾನಸಭಾ ಕ್ಷೇತ್ರದಲ್ಲಿ ಎಐಎಡಿಎಂಕೆಯಿಂದ ಟಿ.ಎಂ.ತಮಿಳ್ ಸೆಲ್ವಂ, ಕಾಂಗ್ರೆಸ್ನಿಂದ ಕೆ.ಕುಪ್ಪುಸ್ವಾಮಿ, ಎನ್ಟಿಕೆಯಿಂದ ಮೇಗಳ ಮತ್ತು ಟಿವಿಕೆಯಿಂದ ಎಂ.ರಮೇಶ್ ಕಣದಲ್ಲಿದ್ದಾರೆ.2011, 2016, 2021 ಸತತ 3 ಅವಧಿಗೆ ಎಐಎಡಿಎಂಕೆ ಅಭ್ಯರ್ಥಿಇಲ್ಲಿಂದ ಗೆಲುವು ಸಾಧಿಸಿದ್ದಾರೆ. ಈ ಬಾರಿ ಕಾಂಗ್ರೆಸ್ ಎಐಎಡಿಎಂಕೆಕೋಟೆ ಭೇದಿಸಲು ಸಜ್ಜಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-51-376750609

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.