ಕೇರಳದಲ್ಲಿ ಸಿಪಿಐ(ಎಂ) ನೇತೃತ್ವದ ಎಲ್ಡಿಎಫ್ ಸೋಲು ಕಾಣುವುದರೊಂದಿಗೆ ಕಳೆದ 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಡೀ ದೇಶದಲ್ಲಿ ಎಡರಂಗದ ಸರ್ಕಾರ ಇಲ್ಲದಂತಾಗಿದೆ.

2016ರಲ್ಲಿ ಕೇರಳದಲ್ಲಿ ಅಧಿಕಾರಕ್ಕೆ ಬಂದಿದ್ದ ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ ಸರ್ಕಾರವು ಸತತ ಎರಡು ಬಾರಿ ಅಧಿಕಾರ ಅನುಭವಿಸಿತ್ತು. 2026ರ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಬರುವ ಮೂಲಕ ಎಡರಂಗವನ್ನು ಅಧಿಕಾರದಿಂದ ಹೊರದಬ್ಬಿದೆ.

ಹೀಗಾಗಿ 1977ರಿಂದ ಇದೇ ಮೊದಲ ಬಾರಿಗೆ ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷದ ಮುಖ್ಯಮಂತ್ರಿ ಇಲ್ಲದಂತಾಗಿದೆ. ಪಶ್ಚಿಮ ಬಂಗಾಳದಲ್ಲಿ 1977ರಿಂದ 2011 ರವರೆಗೆ ಎಡರಂಗದ ಮುಖ್ಯಮಂತ್ರಿ ಇದ್ದರು. 34 ವರ್ಷಗಳ ಎಡಪಕ್ಷಗಳ ಆಡಳಿತವನ್ನು ಮಮತಾ ಬ್ಯಾನರ್ಜಿ ಅಂತ್ಯಗೊಳಿಸಿದ್ದರು. 1993ರಿಂದ 2018ರವರೆಗೆ ತ್ರಿಪುರಾದಲ್ಲಿ ಆಡಳಿತ ನಡೆಸಿದ್ದ ಎಡಪಕ್ಷವನ್ನು 2018 ರಲ್ಲಿ ಬಿಜೆಪಿ ಸೋಲಿಸಿತ್ತು.

2009ರ ಲೋಕಸಭೆ ಚುನಾವಣೆ ಮತ್ತು 2026ರ ವಿಧಾನಸಭೆ ಚುನಾವಣೆಯಲ್ಲಿ ಎಡಪಕ್ಷಗಳು ಭಾರಿ ಹಿನ್ನಡೆ ಅನುಭವಿಸಿವೆ.

ಮಧ್ಯಾಹ್ನ 3 ಗಂಟೆಯ ವರದಿಯ ಪ್ರಕಾರ, ಕೇರಳದಲ್ಲಿ ಯುಡಿಎಫ್ 101 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎಲ್ಡಿಎಫ್ ಕೇವಲ 34 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.