ಮಹಾಲಿಂಗಪುರ: ‘ದೇಶದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಸಂವಿಧಾನಬದ್ಧ ಪ್ರಕ್ರಿಯೆಯು ಕೆಲವೊಂದು ವೈಯಕ್ತಿಕ ರಾಜಕೀಯ ಹಿತಾಸಕ್ತಿಗಳಿಂದಾಗಿ ದುರ್ಬಳಕೆ ಆಗುತ್ತಿದೆ’ ಎಂದು ಆಮ್ ಆದ್ಮಿ ಪಕ್ಷದ ಉತ್ತರ ಕರ್ನಾಟಕ ಸಂಘಟನೆ ಕಾರ್ಯದರ್ಶಿ ಅರ್ಜುನ ಹಲಗಿಗೌಡರ ಆರೋಪಿಸಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉದ್ದೇಶ ಪೂರ್ವಕವಾಗಿ ಕೆಲವೊಂದು ಪಂಗಡಗಳನ್ನು, ವಿಶೇಷವಾಗಿ ಮುಸ್ಲಿಂ ಸಮಾಜ ಮತ್ತು ಅನಕ್ಷರಸ್ಥರು, ಕೂಲಿ ಕಾರ್ಮಿಕರನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗುತ್ತಿದೆ. 2002ರ ಮ್ಯಾಪಿಂಗ್ನಲ್ಲಿ ತಂದೆ ಅಥವಾ ಮುತ್ತಾತನ ಹೆಸರು ಇಲ್ಲದಿದ್ದರೆ ತೊಂದರೆಯಾಗುವ ಸಾಧ್ಯತೆ ಇದೆ’ ಎಂದರು.

‘ಈ ಕಾನೂನಿನಲ್ಲಿ ಅಜ್ಜ ಮತ್ತು ಮೊಮ್ಮಗನಿಗೆ ಕನಿಷ್ಠ 40 ವರ್ಷ ಹಾಗೂ ತಂದೆ ಮತ್ತು ಮಗನಿಗೆ 15 ವರ್ಷ ವಯಸ್ಸಿನ ವ್ಯತ್ಯಾಸ ಇರಬೇಕೆಂಬ ನಿಯಮವಿದೆ. ಇದರಲ್ಲಿ ಒಂದು ದಿನ ಮಿಸ್ ಆದರೂ ಅವರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಸಾಧ್ಯತೆಯಿದೆ. ಇದನ್ನು ತಡೆಗಟ್ಟಲು ಆಮ್ ಆದ್ಮಿ ಪಕ್ಷದಿಂದ ಪ್ರತಿ ಬೂತ್ಗೆ ಅಧಿಕೃತವಾಗಿ ಒಬ್ಬರು ಬಿ.ಎಲ್.ಎ ಅನ್ನು ನೇಮಕ ಮಾಡಲಾಗುತ್ತಿದೆ’ ಎಂದರು.

‘ಸಾರ್ವಜನಿಕರು ಮತ್ತು ಕಾರ್ಯಕರ್ತರಲ್ಲಿ ಜಾಗೃತಿ ಮೂಡಿಸಲು ಪಟ್ಟಣದ ಶರಣ ಆಸ್ಪತ್ರೆ ಆವರಣದಲ್ಲಿ ಮೇ 26ರಂದು ಬೆಳಿಗ್ಗೆ 10 ಗಂಟೆಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಹಿರಿಯ ವಕೀಲರಾದ ಪ್ರಕಾಶ ವಸ್ತ್ರದ, ಅಂಬಿ ಅವರು ಸಂವಿಧಾನದಡಿಯಲ್ಲಿ ಎಸ್ಐಆರ್ ಮ್ಯಾಪಿಂಗ್ ವಿಷಯದ ಬಗ್ಗೆ ಮಾಹಿತಿ ನೀಡುವರು. ಎಸ್ಐಆರ್ ಸಂಯೋಜಕರಾದ ಬಸವರಾಜ ಮುರಗೋಡ, ಲಕ್ಷ್ಮಣ ಮಾಂಡಲಗೇರಿ, ಪವಿತ್ರಾ ಬಾಗಲಕೋಟೆ ತರಬೇತಿ ನೀಡಲಿದ್ದಾರೆ’ ಎಂದರು.

ಸೈಯದ ಹಳಿಂಗಳಿ, ಇನ್ನುಸ ಬೀಳಗಿ, ಕುತುಬುದ್ದೀನ ಲಗೇರಿ, ಸೈಯದ ಅಂಬಿ, ಸಮೀರ ಅಂಬಿ, ಮುಬಾರಕ ಎಕ್ಸಂಬಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-19-417597168

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.