ಕೋಲ್ಕತ್ತ: ತಾವು ಸ್ಪರ್ಧಿಸಿದ್ದ ಭವಾನಿಪುರ ಕ್ಷೇತ್ರದಲ್ಲಿನ ಬಿಜೆಪಿ ಅಭ್ಯರ್ಥಿಯ ಗೆಲುವನ್ನು ‘ಕದ್ದದ್ದು’ ಮತ್ತು ಚುನಾವಣಾ ಆಯೋಗದ ಅನೈತಿಕ ಕೊಳಕು ಆಟ ಎಂದು ಪಶ್ಚಿಮ ಬಂಗಾಳದ ನಿರ್ಗಮಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.

ತೃಣಮೂಲ ಕಾಂಗ್ರೆಸ್ ಸಂಸದ ಮತ್ತು ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಕಲ್ಯಾಣ್ ಬ್ಯಾನರ್ಜಿ ಅವರು ತಮ್ಮ ಫೇಸ್ಬುಕ್ ಪುಟದಲ್ಲಿ ಮಮತಾ ಬ್ಯಾನರ್ಜಿ ಅವರೊಂದಿಗಿನ ದೂರವಾಣಿ ಸಂಭಾಷಣೆಯ ಆಡಿಯೊವನ್ನು ಹಂಚಿಕೊಂಡಿದ್ದು, ಅದರಲ್ಲಿ ಮಮತಾ ಗಂಭೀರ ಆರೋಪ ಮಾಡಿದ್ದಾರೆ.

16ನೇ ಸುತ್ತಿನ ಎಣಿಕೆಯವರೆಗೆ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಮುನ್ನಡೆಯಲ್ಲಿದ್ದೆ. ಕೆಲವೇ ಸುತ್ತುಗಳ ಎಣಿಕೆ ಬಾಕಿ ಉಳಿದಿತ್ತು. ಎಣಿಕೆ ಕೇಂದ್ರದಲ್ಲಿದ್ದ ಟಿಎಂಸಿ ಏಜೆಂಟ್ಗಳನ್ನು ಹೊರಗೆ ಕಳುಹಿಸಿ, ವಿರೋಧ ಪಕ್ಷದ ಏಜೆಂಟ್ಗಳನ್ನು ಅವರ ಸ್ಥಾನದಲ್ಲಿ ಕೂರಿಸಲಾಗಿದೆ. ಚುನಾವಣಾ ಆಯೋಗ, ಸಿಆರ್ಪಿಎಫ್ ಮತ್ತು ಸ್ಥಳೀಯ ಚುನಾವಣಾ ಅಧಿಕಾರಿಗಳು ದೆಹಲಿಯ ಬಿಜೆಪಿ ನಾಯಕರ ಸೂಚನೆಗಳ ಮೇರೆಗೆ ಅವರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

‘16ನೇ ಸುತ್ತಿನ ಬಳಿಕ ಮತ ಎಣಿಕೆ ನಡೆದ ಪ್ರದೇಶಗಳು ಸಂಪೂರ್ಣ ನಮ್ಮ ಪಕ್ಷದ ಬೆಂಬಲಿತ ಪ್ರದೇಶಗಳಾಗಿದ್ದವು. ಈ ಸಂದರ್ಭ ಕೆಲ ಗೂಂಡಾಗಳು ಚುನಾವಣಾ ಅಧಿಕಾರಿಗಳ ಜೊತೆ ಮತ ಎಣಿಕೆ ಕೇಂದ್ರಕ್ಕೆ ಬಂದು, ಸಿಆರ್ಪಿಎಫ್ ಬೆಂಬಲದೊಂದಿಗೆ ನನ್ನ ಮೇಲೆ ಹಲ್ಲೆ ನಡೆಸಿ, ಏಜೆಂಟ್ಗಳನ್ನು ಹೊರಹಾಕಿದರು’ಎಂದು ಆರೋಪಿಸಿದ್ದಾರೆ.

ಅಂತಿಮ ಸುತ್ತುಗಳಲ್ಲಿ ಎಣಿಕೆ ಕೇಂದ್ರದಲ್ಲಿ ನಮ್ಮ ಪಕ್ಷದ ಯಾವುದೇ ಪ್ರತಿನಿಧಿ ಇರಲಿಲ್ಲ. ಸರಿಯಾದ ಸೀಲಿಂಗ್ ಕೂಡ ಇಲ್ಲದೇ ಇವಿಎಂಗಳನ್ನು ಸ್ಟ್ರಾಂಗ್ ರೂಮ್ಗಳಿಗೆ ತೆಗೆದುಕೊಂಡು ಹೋಗಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಸಂದರ್ಭ ಮತಕೇಂದ್ರದ ಹೊರಗೆ ಇದ್ದೆ. ನನ್ನನ್ನು ಒಳಗೆ ಬಿಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಮೊದಲು ಎಸ್ಐಆರ್ ಮೂಲಕ ಮತದಾರರ ಹೆಸರನ್ನು ತೆಗೆದುಹಾಕಲಾಯಿತು. ಬಳಿಕ, ವಿದ್ಯುತ್ ಕಡಿತ ಮತ್ತು ಎಣಿಕೆ ಕೇಂದ್ರಗಳೊಳಗಿನ ಅವ್ಯವಸ್ಥೆಯ ನಡುವೆ ನಮ್ಮ ಮತಗಳನ್ನು ಕದಿಯಲಾಯಿತು ಎಂದು ದೂಷಿಸಿದ್ದಾರೆ.

ಫಲಿತಾಂಶವು ಬಿಜೆಪಿಯ ವಿಜಯವಲ್ಲ, ಬದಲಾಗಿ ಅನೈತಿಕ ಕೊಳಕು ಆಟ ಮತ್ತು ವಿರೋಧ ಪಕ್ಷದ ನೈತಿಕ ಸೋಲು ಎಂದು ಕರೆದಿದ್ದಾರೆ. ಈ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.