ನವದೆಹಲಿ (ಪಿಟಿಐ): ತಮ್ಮ ಪಕ್ಷದ ಕಾರ್ಯಕರ್ತ ದೇವದೀಪ್ ಚಟರ್ಜಿ ಅವರನ್ನು ಶಂಕಿತ ಟಿಎಂಸಿ ಗೂಂಡಾಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಈ ಘಟನೆಯನ್ನು ಖಂಡಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ ನಡೆದ ನಂತರ ಆಸಾನ್ಸೋಲ್ ಎಂಬಲ್ಲಿ ದೇವದೀಪ್ ಅವರ ಹತ್ಯೆಯಾಯಿತು. ಅದಕ್ಕೂ ಮೊದಲು, ಉತ್ತರ ಆಸಾನ್ಸೋಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸೇನ್ಜಿತ್ ಪುಯಿತಾಂಡಿ ಅವರೊಟ್ಟಿಗೆ ಚುನಾವಣಾ ಪ್ರಚಾರದಲ್ಲಿ ದೇವದೀಪ್ ತೊಡಗಿಕೊಂಡಿದ್ದರು ಎಂದು ಪಕ್ಷ ತಿಳಿಸಿದೆ.

‘ಪಶ್ಚಿಮ ಬಂಗಾಳದಲ್ಲಿ ಈಗ ಪ್ರಜಾಪ್ರಭುತ್ವ ಇಲ್ಲ. ಟಿಎಂಸಿ ನೇತೃತ್ವದ ಉಗ್ರವಾದ ತಾಂಡವವಾಡುತ್ತಿದೆ. ಪ್ರಶ್ನಿಸುವ ಯಾರದೇ ದನಿಯನ್ನು ಉಡುಗಿಸುವುದು, ಪ್ರಶ್ನಿಸುವವರನ್ನು ಮುಗಿಸಿಹಾಕುವುದು ಟಿಎಂಸಿ ಜಾಯಮಾನವಾಗಿಬಿಟ್ಟಿದೆ. ದೇವದೀಪ್ ಹತ್ಯೆ ಖಂಡನಾರ್ಹ. ಅವರ ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳುವೆ’ ಎಂದು ರಾಹುಲ್ ಗಾಂಧಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಕಾಂಗ್ರೆಸ್ ಎಂದಿಗೂ ಹಿಂಸಾ ರಾಜಕೀಯವನ್ನು ಮಾಡಿಲ್ಲ, ಮಾಡುವುದೂ ಇಲ್ಲ’ ಎಂದು ಪಶ್ಚಿಮ ಬಂಗಾಳ ಕಾಂಗ್ರೆಸ್ ಪ್ರತ್ಯೇಕವಾಗಿ ‘ಎಕ್ಸ್’ ಪೋಸ್ಟ್ ಹಾಕಿದ್ದು, ಪಶ್ಚಿಮ ಬಂಗಾಳದಲ್ಲಿ ಕಾನೂನು–ಸುವ್ಯವಸ್ಥೆ ಇಲ್ಲವಾಗಿದೆ ಎನ್ನುವುದಕ್ಕೆ ಈ ಹತ್ಯೆಯೇ ಉದಾಹರಣೆ ಎಂದು ಟೀಕಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-51-1938945324

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.