ಶೃಂಗೇರಿ: ಬಿಜೆಪಿ ಮುಖಂಡ ಡಿ.ಎನ್.ಜೀವರಾಜ್ ಅವರು ಶೃಂಗೇರಿ ಶಾರದಾ ಪೀಠಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ರಾಜಕೀಯ ಜೀವನದ ಗೆಲುವನ್ನು ಶಾರದೆ ಮತ್ತು ಗುರುಗಳಿಗೆ ಅರ್ಪಿಸಿದ್ದೇನೆ. ಸೋಲಾದಾಗ ಆಶೀರ್ವಾದ ಕೇಳಿದ್ದೇನೆ. ನನ್ನ 3 ವರ್ಷದ ಹೋರಾಟಕ್ಕೆ ಸಿಕ್ಕಿರುವ ಜಯ ಇದು. ಅವರಿಗೆ ಗೆಲವು ಆದರೆ ಸತ್ಯ ಮೇವ ಜಯತೆ, ಸಂವಿಧಾನಕ್ಕೆ ಜಯ. ನಮಗೆ ಜಯವಾದರೆ ಮತ ದರೋಡೆ ಎನ್ನುತ್ತಾರೆ. ವಿಧಾನಸಭೆ ಚುನಾವಣೆಯ ಎಣಿಕೆ ದಿನವಾದ ಮೇ 13ರಂದೇ ಎಣಿಕೆಯಲ್ಲಿ ಅನುಮಾನವಿದೆ. ಮರು ಮತ ಎಣಿಕೆ ಮಾಡಿ ಎಂದು ಮನವಿ ನೀಡಿದರೂ ಚುನಾವಣಾಧಿಕಾರಿ ನಿರಾಕರಿಸಿದರು. ಆದರೆ, ಕೊನೆಗೆ ಸತ್ಯವೇ ಗೆಲ್ಲುತ್ತದೆ ಎಂಬುದು ಸಾಬೀತಾಗಿದೆ. ಸಂವಿಧಾನಕ್ಕೆ ಜಯ ಸಿಕ್ಕಿದೆ. ಇದು ನನಗೆ ಮಾತ್ರ ಜಯವಲ್ಲ. ರಾಜ್ಯದಲ್ಲಿ ಕಡಿಮೆ ಅಂತರದಲ್ಲಿ ಸೋಲಾದಾಗದ ಮರು ಮತ ಎಣಿಕೆ ನಿರಾಕರಿಸುವ ಚುನಾವಣಾಧಿಕಾರಿಗಳಿಗೆ ಪಾಠವಾಗಬೇಕು’ ಎಂದರು.

ಬಿಜೆಪಿ ಮುಖಂಡರಾದ ತಲಗಾರು ಉಮೇಶ್, ಕೆ.ಎಸ್.ರಮೇಶ್, ವೇಣುಗೋಪಾಲ್, ಹರೀಶ್ ಶೆಟ್ಟಿ, ಪ್ರವೀಣ್ ಬಿ.ವಿ., ಅಂಗುರ್ಡಿ ದಿನೇಶ್, ನೂತನ್ ಕುಮಾರ್, ವಿಜಯ್ ತಿಪ್ಪನಮಕ್ಕಿ, ಕೂಳೆಗದ್ದೆ ಪ್ರದೀಪ್ ಜತೆಗಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-126-261211344

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.