ಸಿಂಧನೂರು: ‘2023ರ ವಿಧಾನಸಭಾ ಚುನಾವಣೆಯಲ್ಲಿ ಹಂಪನಗೌಡ ಬಾದರ್ಲಿ ಅವರು ಶಾಸಕರಾಗಿ ಬಹುಮತದಿಂದ ಗೆಲುವು ಸಾಧಿಸುವಲ್ಲಿ ಎಂಎಲ್ಸಿ ಬಸನಗೌಡ ಬಾದರ್ಲಿ ಮತ್ತು ಅವರ ಬೆಂಬಲಿಗರ ಶ್ರಮ ಬಹಳಷ್ಟಿದೆ’ ಎಂದು ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯಕ ರಾಗಲಪರ್ವಿ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಸನಗೌಡ ಬಾದರ್ಲಿ ಅವರು ಸಹ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತು. ಇದರಿಂದ ಬೇಸರಗೊಂಡ ಅವರು ಕಾರ್ಯಕರ್ತರ ಒತ್ತಾಯದ ಮೇರೆಗೆ ಪಕ್ಷಾಂತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು’ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಹಾನಿಯಾಗಬಾರದೆಂಬ ದೃಷ್ಟಿಯಿಂದ ಬಸನಗೌಡರು ನಾಮಪತ್ರ ಹಿಂದಕ್ಕೆ ತೆಗೆದುಕೊಂಡು, ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಬೆಂಬಲಿಗರು ಹಾಗೂ ಕಾರ್ಯಕರ್ತರಿಗೆ ಬಹಿರಂಗವಾಗಿ ಹೇಳಿದ್ದರು. ಅದರಂತೆ ಕಾರ್ಯನಿರ್ವಹಿಸಿದ್ದೇವೆ. ಕಾಂಗ್ರೆಸ್ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಆದರೆ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಎಂ.ಲಿಂಗಪ್ಪ ದಢೇಸುಗೂರು ಅವರು ಸುಳ್ಳು ಆರೋಪ ಮಾಡಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಇದು ಒಳ್ಳೆಯದಲ್ಲ ಎಂದು ದೂರಿದರು.

‘ಹಂಪನಗೌಡರ ವಿರುದ್ಧವಾಗಿ ಚುನಾವಣೆ ನಡೆಸಿದ್ದರೆ, ದಾಖಲೆ ತೆಗೆದುಕೊಂಡು ಬರಲಿ ಬಹಿರಂಗ ಚರ್ಚೆಗೆ ಸಿದ್ಧರಿದ್ದೇವೆ. ಆರೋಪ-ಪ್ರತ್ಯಾರೋಪಗಳ ವಿರುದ್ಧ ಮುಖಾಮುಖಿ ಚರ್ಚಿಸೋಣ. ಆದರೆ, ಅಣಕ ಮಾಡುವುದು ಸರಿಯಲ್ಲ’ ಎಂದರು. ಮುಖಂಡರಾದ ವೀರರಾಜು, ವಿರೂಪಣ್ಣ ಚನ್ನಳ್ಳಿ, ಮಂಜುನಾಥ ಜವಳಗೇರಾ ಮಾತನಾಡಿದರು. ಶಿವಕುಮಾರ ಜವಳಿ, ಶರಣಯ್ಯ ಸ್ವಾಮಿ ಕೋಟೆ, ಮೋಯಿನುದ್ದೀನ್ ಖಾದ್ರಿ, ಖಾಜಾಹುಸೇನ್ ರೌಡಕುಂದಾ, ಅಮರೇಶ ಗಿರಿಜಾಲಿ, ಹಂಪಮ್ಮ, ಯೂಸುಫ್ ಏತ್ಮಾರಿ, ಹಬೀಬ್ ಖಾಜಿ, ಹನಮೇಶ ಕರ್ನಿ, ಫಕೀರಪ್ಪ ರಾಮತ್ನಾಳ, ಮಲ್ಲಯ್ಯ ಮ್ಯಾಕಲ್, ದೇವೇಂದ್ರಪ್ಪ, ಶಹಬಾಜ್, ರಫಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-32-2023394149

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.