ಕೋಲ್ಕತ್ತ (ಪಿಟಿಐ): ಸುವೇಂದು ಅಧಿಕಾರಿ ಅವರು ಬಂಗಾಳ ರಾಜಕೀಯ ಮುನ್ನೆಲೆಗೆ ಬಂದಿದ್ದು ಕಳೆದ ಐದು ವರ್ಷಗಳಲ್ಲಿ. ಈ ಅಲ್ಪಾವಧಿಯಲ್ಲೇ ಅವರು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಎರಡು ದೊಡ್ಡ ರಾಜಕೀಯ ಆಘಾತಗಳನ್ನು ನೀಡಿದ್ದಾರೆ.

ಮೊದಲನೆಯದು 2021ರ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಲ್ಲಿ ಅವರ ವಿರುದ್ಧದ ಗೆಲುವು. ಎರಡನೆಯದು ಬ್ಯಾನರ್ಜಿಯವರ ‘ಅಜೇಯ ಕೋಟೆ’ ಎಂದೇ ಹೆಸರಾದ ಭವಾನಿಪುರದಲ್ಲಿ 2026ರ ವಿಧಾನಸಭಾ ಚುನಾವಣೆಯಲ್ಲಿನ ಗೆಲುವು. ಈ ಎರಡು ಗೆಲುವುಗಳು ಅಧಿಕಾರಿ ಅವರ ರಾಜಕೀಯ ಪಯಣದ ಪಥವನ್ನೇ ಬದಲಿಸಿದೆ.

ಸುವೇಂದು ಅವರ ಗೆಲುವನ್ನು ಬಂಗಾಳದಲ್ಲಿ ಮಮತಾ (ಟಿಎಂಸಿ) ವಿರುದ್ಧದ ಬಿಜೆಪಿಯ ಗೆಲುವು ಎಂದೇ ವಿಶ್ಲೇಷಿಸಲಾಗುತ್ತಿದೆ. ಮುಖ್ಯಮಂತ್ರಿ ಹುದ್ದೆಗೇರುವ ಮೂಲಕ ಬಂಗಾಳದಲ್ಲಿ ಬಿಜೆಪಿ ಯುಗಾರಂಭದ ಪ್ರಾಥಮಿಕ ಶಿಲ್ಪಿಗಳಲ್ಲಿ ಒಬ್ಬರಾಗಿಯೂ ಸುವೇಂದು ಗುರುತಿಸಿಕೊಳ್ಳಲಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ವಿರೋಧ ಪಕ್ಷದ ಮುಖಂಡರಾಗಿದ್ದುಕೊಂಡು ಅಧಿಕಾರಿ ಅವರು, ಮಮತಾ ಬ್ಯಾನರ್ಜಿ ಆಡಳಿತಕ್ಕೆ ಬಹುದೊಡ್ಡ ರಾಜಕೀಯ ಸವಾಲಾಗಿ ಹೊರಹೊಮ್ಮಿದ್ದರು. ತೀವ್ರವಾದ ಶಾಸಕಾಂಗ ಹೋರಾಟಗಳಿಂದ ಹಿಡಿದು ವಿಧಾನಸಭೆ ಆವರಣದಲ್ಲಿ ನಡೆದ ಪ್ರತಿಭಟನೆವರೆಗೆ ಮುಂಚೂಣಿಯಲ್ಲಿ ನಿಂತ ಅವರು, ಅಂತಿಮವಾಗಿ ದೀದಿಯ ಕೈಯಿಂದ ಅಧಿಕಾರ ಕೈಜಾರಿ ಹೋಗುವಂತೆ ನೋಡಿಕೊಂಡರು.

2021ರ ವಿಧಾನಸಭಾ ಚುನಾವಣೆಯ ನಂತರದ ಸರ್ಕಾರ ವಿರುದ್ಧ ನಡೆದ ರ್ಯಾಲಿ, ಪ್ರತಿಭಟನೆ, ಚಳವಳಿ ಮೂಲಕ ಅಧಿಕಾರಿಯು, ಟಿಎಂಸಿ ವಿರುದ್ಧದ ಬಿಜೆಪಿಯ ರಾಜಕೀಯ ದಾಳಿಯ ಕೇಂದ್ರಸ್ಥಾನದಲ್ಲಿ ನಿಂತರು. ಶಾಲಾ ಸೇವಾ ಆಯೋಗ (ಎಸ್ಎಸ್ಸಿ) ನೇಮಕಾತಿ ಹಗರಣದ ವಿರುದ್ಧದ ಪ್ರತಿಭಟನೆಯ ನಾಯಕತ್ವವನ್ನು ವಹಿಸಿಕೊಂಡರು.ಬಂಗಾಳ ರಾಜಕೀಯದ ಉದ್ವಿಗ್ನ ಪರಿಸ್ಥಿತಿಗಳಲ್ಲಿ ಅಧಿಕಾರಿಯು ಬಿಜೆಪಿಯ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದರು. ಚುನಾವಣಾ ಪೂರ್ವದಲ್ಲಿ, ಆರ್.ಜಿ.ಕರ್ಅತ್ಯಾಚಾರ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳುವಲ್ಲಿ ಟಿಎಂಸಿ ವಿಫಲವಾಗಿದ್ದನ್ನು ಅಧಿಕಾರಿಯು, ಜನಾಕ್ರೋಶದ ಚಳವಳಿಯನ್ನಾಗಿ ರೂಪಿಸಿದರು. ಟಿಎಂಸಿ ಸೋಲಿನಲ್ಲಿ ಈ ಅಂಶವೂ ಪ್ರಮುಖ ಕಾರಣವಾಗಿದೆ.

‘ಬಂಗಾಳದಲ್ಲಿ ಬಿಜೆಪಿಯ ಮುಂದಿನ ಮುಖ್ಯಮಂತ್ರಿ ಈ ಮಣ್ಣಿನ ಮಗನಾಗಿರುತ್ತಾನೆ, ಇದೇ ರಾಜ್ಯದಲ್ಲಿ ಹುಟ್ಟಿ, ಇಲ್ಲಿನ ಸಂಸ್ಕೃತಿಯಿಂದ ರೂಪುಗೊಂಡ ಬಂಗಾಳಿ ಭಾಷಿಕನಾಗಿರುತ್ತಾನೆ’ ಎಂದು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಅಮಿತ್ ಶಾ ಹೇಳಿದ್ದರು. ಸುವೇಂದು ಅಧಿಕಾರಿ ಇದನ್ನು ಸಾಕಾರಗೊಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-51-2057071463

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.