ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಮತದಾನದ ವೇಳೆ ಸುಮಾರು 4.87 ಕೋಟಿ ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಶನಿವಾರ ತಡರಾತ್ರಿ ಬಿಡುಗಡೆಯಾಗಿರುವ ಅಂಕಿ–ಅಂಶಗಳ ಪ್ರಕಾರ, ಒಟ್ಟು 4,87,98,833 ಮಂದಿ ಮತದಾನದಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ 2.52 ಕೋಟಿ (2,52,59,596) ಮಹಿಳೆಯರು ಮತ್ತು 2.35 ಕೋಟಿ (2,35,34,720) ಪುರುಷರು. ಉಳಿದ 4,517 ಮಂದಿ ತೃತೀಯ ಲಿಂಗಿಗಳು.

ರಾಜ್ಯದಲ್ಲಿ ಶೇ 85.10 ರಷ್ಟು ಮತದಾನವಾಗಿದೆ. ಕರೂರು ಕ್ಷೇತ್ರದಲ್ಲಿ ಅತಿಹೆಚ್ಚು ಅಂದರೆ, ಶೇ 93.41 ರಷ್ಟು ಮತದಾನವಾಗಿದೆ. ಸೇಲಂ ಜಿಲ್ಲೆಯ ವೀರಪಾಂಡಿ ಕ್ಷೇತ್ರದಲ್ಲಿ ಶೇ. 93.36 ರಷ್ಟು ಮತದಾನವಾಗಿದೆ. ಕನ್ಯಾಕುಮಾರಿ ಜಿಲ್ಲೆಯ ಕಿಳ್ಳಿಯೂರು ಕ್ಷೇತ್ರದಲ್ಲಿ ಅತಿಕಡಿಮೆ (ಶೇ 71.26) ಮತದಾನವಾಗಿದೆ ಎಂದು ಆಯೋಗ ತಿಳಿಸಿದೆ.

234 ಸದಸ್ಯ ಬಲ ಹೊಂದಿರುವ ತಮಿಳುನಾಡು ವಿಧಾನಸಭೆಗೆ ಏಪ್ರಿಲ್ 23ರಂದು ಮತದಾನ ನಡೆದಿದೆ. ರಾಜ್ಯದ ಸುಮಾರು 62 ಕೇಂದ್ರಗಳಲ್ಲಿ, ಮೇ 4ರಂದು ಮತ ಎಣಿಕೆ ನಡೆಯಲಿದ್ದು, ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ.

ಸದ್ಯ ಅಧಿಕಾರದಲ್ಲಿರುವ ಡಿಎಂಕೆ ಮೈತ್ರಿಕೂಟ ಮತ್ತು ವಿರೋಧ ಪಕ್ಷ ಎಐಎಡಿಎಂಕೆ ಮಿತ್ರ ಪಕ್ಷಗಳ ನಡುವೆ ಪೈಪೋಟಿ ಇದೆ. ನಟ, ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಕೂಡ ಪೈಪೋಟಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.