ಚೆನ್ನೈ: ಸಿನಿಮಾದ ಗ್ಲಾಮರಸ್ ಜಗತ್ತಿನಿಂದ ರಾಜಕೀಯಕ್ಕೆ ಕಾಲಿರಿಸಿ, ಮುಖ್ಯಮಂತ್ರಿ ಹುದ್ದೆಗೆ ಏರಿರುವ ಸಿ. ಜೋಸೆಫ್ ವಿಜಯ್ ಅವರ ಪಯಣವು ಒಂದು ‘ಬ್ಲಾಕ್ಬಸ್ಟರ್’ ಸಿನಿಮಾಕ್ಕಿಂತ ಕಡಿಮೆಯಲ್ಲ.

ರಾಜಕೀಯ ಪಕ್ಷ ಸ್ಥಾಪಿಸಿ, ಎದುರಿಸಿದ ಮೊದಲ ಚುನಾವಣೆಯಲ್ಲಿಯೇ ಮುಖ್ಯಮಂತ್ರಿಯಾದ ಎಂ.ಜಿ. ರಾಮಚಂದ್ರನ್ ಮತ್ತು ಎನ್.ಟಿ. ರಾಮರಾವ್ ಅವರಂತಹ ಗಣ್ಯರ ಸಾಲಿಗೆ 51 ವರ್ಷದ ವಿಜಯ್ ಅವರು ಸೇರಿದ್ದಾರೆ.

ಕೇವಲ ಎರಡು ವರ್ಷಗಳ ಹಿಂದೆ (2024ರಲ್ಲಿ) ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷ ಸ್ಥಾಪಿಸಿ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ 234 ಕ್ಷೇತ್ರಗಳಲ್ಲಿ ಮೊದಲ ಬಾರಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಅವರು, ತಮ್ಮ ಪ್ರಥಮ ಪ್ರಯತ್ನದಲ್ಲೇ ಅಚ್ಚರಿಯ ಗೆಲುವು ದಕ್ಕಿಸಿಕೊಂಡಿದ್ದಾರೆ.

ದ್ರಾವಿಡ ರಾಜಕಾರಣದ ಹೆಸರಿನಲ್ಲಿ ರಾಜ್ಯದಲ್ಲಿ ಪಾರಮ್ಯ ಸಾಧಿಸಿದ್ದ ಡಿಎಂಕೆ, ಎಐಎಡಿಎಂಕೆಯಂಥ ಪಕ್ಷಗಳನ್ನು ಮತ್ತು ಅವುಗಳ ಅನುಭವಿ ನಾಯಕರನ್ನು ಮಣಿಸಿ, ತಮಿಳುನಾಡಿನ ಮುಖ್ಯಮಂತ್ರಿ ಗಾದಿ ಏರಿರುವುದು ಕಡಿಮೆ ಸಾಧನೆಯೇನಲ್ಲ.

ವಿಜಯ್ ಅವರು ಪ್ರಚಾರದ ವೇಳೆ ತಮ್ಮ ಎದುರಾಳಿಗಳಂತೆ ಬಿಸಿಲಿನಲ್ಲಿ ಬೆವರು ಸುರಿಸಲಿಲ್ಲ. ದೀರ್ಘ ರಾಜಕೀಯ ಭಾಷಣಗಳನ್ನೂ ಮಾಡಲಿಲ್ಲ. ದೂರದರ್ಶನ ಮತ್ತು ಡಿಜಿಟಲ್ ವೇದಿಕೆಗಳಲ್ಲಿ ಜಾಹೀರಾತು ನೀಡಲು ಹಣ ಖರ್ಚು ಮಾಡಲಿಲ್ಲ. ನಟರಾಗಿ ಗಳಿಸಿದ ಜನಪ್ರಿಯತೆಯೊಂದಿಗೆ ಅವರು ಜನರೊಂದಿಗೆ ಭಾವನಾತ್ಮಕ ಸಂಪರ್ಕ ಸಾಧಿಸಿದರು. ‘ಪಕ್ಕದ ಮನೆಯ ಹುಡುಗ’ನ ರೀತಿಯಲ್ಲಿ ‘ನನಗೆ ಒಂದೇ ಒಂದು ಅವಕಾಶ ಕೊಡಿ’ ಎಂದು ಮತದಾರರಿಗೆ ಮನವಿ ಮಾಡಿದರು. ಇದರಿಂದ ಯುವಜನರು ಮತ್ತು ಮಹಿಳೆಯರ ಮನ ಗೆಲ್ಲುವಲ್ಲಿ ಯಶಸ್ವಿಯಾದರು.

‘ಟಿವಿಕೆ ಪ್ರಾರಂಭಿಸಿದ ಬಳಿಕ ಯಾವುದೇ ಮನೆಗೆ ಭೇಟಿ ನೀಡುವುದಿಲ್ಲ. ಪ್ರತಿ ಮನೆಗೆ ಪ್ರವೇಶಿಸಿದ ನಂತರವೇ ರಾಜಕೀಯಕ್ಕೆ ಧುಮುಕಿದ್ದೇನೆ’ ಎಂದು ನಿರಂತರವಾಗಿ ಹೇಳಿಕೊಂಡದ್ದು ಕೂಡಾ ಅವರಿಗೆ ಜನರ ಜತೆ ಭಾವನಾತ್ಮಕ ಸಂಬಂಧ ಬೆಳೆಸಲು ಸಾಧ್ಯವಾಯಿತು.

ವಿಜಯ್ ಅವರು ಸರ್ಕಾರವನ್ನು ಮುನ್ನಡೆಸುವಾಗ ಹಲವು ಸವಾಲು ಎದುರಿಸಬೇಕಾಗುತ್ತದೆ. ಚುನಾವಣಾ ಭರವಸೆಗಳನ್ನು ಈಡೇರಿಸುವುದು ಪ್ರಮುಖವಾದುದು. ಇದು ಸರ್ಕಾರದ ಬೊಕ್ಕಸಕ್ಕೆ ಮತ್ತಷ್ಟು ಹೊರೆಯಾಗಲಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಮತ್ತು ರಾಜ್ಯದಲ್ಲಿ ವ್ಯಾಪಕವಾಗಿರುವ ಮಾದಕ ವಸ್ತು ಪಿಡುಗನ್ನು ನಿಲ್ಲಿಸುವ ಸವಾಲು ಅವರ ಮುಂದಿದೆ.

ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿದರೆ, ಭರವಸೆ ನೀಡಿರುವ ಎಲ್ಲ ಯೋಜನೆಗಳನ್ನು ಜಾರಿಗೊಳಿಸಲು ಸ್ವಲ್ಪ ಸಮಯ ಬೇಕಾಗುತ್ತದೆ. ಈ ಸತ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡಲು ವಿಜಯ್ ಅವರು ತಮ್ಮ ವರ್ಚಸ್ಸು ಮತ್ತು ಜನರೊಂದಿಗಿನ ಭಾವನಾತ್ಮಕ ಸಂಬಂಧವನ್ನು ಬಳಸಿಕೊಳ್ಳಬೇಕಾಗುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-51-2138260869

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.