ಚೆನ್ನೈ: ಬದಾಮಿ ಹಾಗೂ ವರುಣ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎಂದು ಸಲಹೆ ನೀಡಿದ್ದ ಜಾನ್ ಆರೋಗ್ಯಸ್ವಾಮಿ ಎಂಬ ಚುನಾವಣಾ ತಂತ್ರಜ್ಞ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ತಮಿಳುನಾಡಿನಲ್ಲಿ ಉಂಟಾದ ರಾಜಕೀಯ ಸುನಾಮಿಯ ಹಿಂದೆಯೂ ಇವರ ತಂತ್ರಗಾರಿಕೆಯೇ ಕೆಲಸ ಮಾಡಿರುವುದು ಈಗ ಚರ್ಚೆಯ ಕೇಂದ್ರಬಿಂದುವಾಗಿದೆ.

ತಮಿಳುನಾಡು ಚುನಾವಣೆಯು ಸದಾ ವ್ಯಕ್ತಿ ಕೇಂದ್ರಿತವಾಗಿಯೇ ಬೆಳೆದುಬಂದಿದೆ. ಎಂಜಿಆರ್, ಕರುಣಾನಿಧಿ, ಜಯಲಲಿತಾ ಇದೀಗ ವಿಜಯ್ ಇದೇ ರೀತಿ ಬೆಳೆದವರು. ವರ್ಷದ ಹಿಂದೆ ಅಸ್ತಿತ್ವಕ್ಕೆ ಬಂದ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು 2026ರ ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಸಿನಿಮಾ ಜನಪ್ರಿಯತೆಯನ್ನು ರಾಜಕೀಯದ ಎಂಜಿನ್ ಆಗಿ ಪರಿವರ್ತಿಸಿದ ವಿಜಯ್, ಎಲ್ಲಾ 234 ಕ್ಷೇತ್ರಗಳಲ್ಲೂ ಸ್ಪರ್ಧಿಸಿತು. ಆ ಮೂಲಕ ಕಳೆದ 59 ವರ್ಷಗಳಿಂದ ಅಧಿಕಾರದಲ್ಲಿದ್ದ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳಿಗೆ ಸೋಲುಣಿಸುವಲ್ಲಿ ಯಶಸ್ವಿಯಾಗಿದೆ. ಈ ದೊಡ್ಡ ಪರಿವರ್ತನೆಯಲ್ಲಿ ವಿಜಯ್ಗೆ ನೆರವಾದವರು ಜಾನ್ ಆರೋಗ್ಯಸ್ವಾಮಿ.
.ಕಿಂಗ್ ಮೇಕರ್ ಅಲ್ಲ 'ಕಿಂಗ್' ಆಗುವತ್ತ ದಳಪತಿ ವಿಜಯ್: TVK ಕೈ ಹಿಡಿದ ಅಂಶಗಳಿವು....
ಯಾರು ಈ ಜಾನ್ ಆರೋಗ್ಯಸ್ವಾಮಿ?

ರಾಜಕೀಯ ಸಲಹೆಗಾರ ಹಾಗೂ ಚುನಾವಣಾ ತಂತ್ರಜ್ಞ ಜಾನ್ ಆರೋಗ್ಯಸ್ವಾಮಿ ಅವರು ಟಿವಿಕೆ ಪಕ್ಷವನ್ನು ತೆರೆಮರೆಯಲ್ಲೇ ಕಟ್ಟಿದ ಶಿಲ್ಪಿ. ವಿಭಿನ್ನರೀತಿಯಲ್ಲಿ ಟಿವಿಕೆ ಪ್ರಚಾರತಂತ್ರಗಳನ್ನು ರಚಿಸಿದ ಇವರು, ವಿಜಯ್ ಅವರ ಭಾಷಣ ಮತ್ತು ವೇದಿಕೆ ಕಾರ್ಯಕ್ರಮ ಹೇಗಿರಬೇಕು ಎಂಬುದನ್ನೂ ನಿರ್ಧರಿಸುತ್ತಿದ್ದರು. ಅವೆಲ್ಲವೂ ಮತದಾರರ ಮೇಲೆ ಪ್ರಭಾವ ಬೀರುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇಷ್ಟುಮಾತ್ರವಲ್ಲ, ಆಧುನಿಕ ಚುನಾವಣಾ ರಣತಂತ್ರಗಳಾದ ಮತದಾರರ ಮಾಹಿತಿ ವಿಶ್ಲೇಷಣೆ, ಕ್ಷೇತ್ರಗಳ ಅಧ್ಯಯನ, ಅಭ್ಯರ್ಥಿಗಳ ಆಯ್ಕೆ, ಮತಯಾಚಿಸಿ ಸಂದೇಶ ಕಳುಹಿಸುವ ರೀತಿ, ಸಾಮಾಜಿಕ ಮಾಧ್ಯಮಗಳ ಪರಿಣಾಮಕಾರಿ ಬಳಕೆ, ಬೂತ್ ಮಟ್ಟದ ಸಂಘಟನೆ, ವಾರ್ ರೂಂ ನಿರ್ವಹಣೆ, ಸೆಲೆಬ್ರಿಟಿಗಳ ಮನವಿಯನ್ನೇ ಮತಗಳಾಗಿ ಪರಿವರ್ತಿಸುವ ತಂತ್ರಗಳೊಂದಿಗೆ ಜಾನ್ ಆರೋಗ್ಯಸ್ವಾಮಿ ಟಿವಿಕೆಗೆ ನೆರವಾಗಿದ್ದಾರೆ ಎಂದೇ ಹೇಳಲಾಗುತ್ತಿದೆ.

ಮೂಲತಃ ಆಂಧ್ರಪ್ರದೇಶದವರಾದ ಜಾನ್, ತಮಿಳುನಾಡಿನಲ್ಲಿ ವಿದ್ಯಾಭ್ಯಾಸ ಮಾಡಿದವರು. ಹೀಗಾಗಿ ತಮಿಳುನಾಡಿನ ಸಂಸ್ಕೃತಿ ಹಾಗೂ ಅಲ್ಲಿನ ಚುನಾವಣೆ ಅವರ ಮೇಲೆ ಅತೀವವಾಗಿ ಪ್ರಭಾವ ಬೀರಿತ್ತು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಎಂಬಿಎ ಪದವಿ ಹೊಂದಿರುವ ಅವರು ಆಧುನಿಕ ರಾಜನೀತಿಯ ಅತಿದೊಡ್ಡ ಅಂಶಗಳಾದ ಸಂವಹನ ಮತ್ತು ತಂತ್ರಗಾರಿಕೆಯಲ್ಲಿ ಪರಿಣತಿ ಸಾಧಿಸಿದರು. ಜತೆಗೆ ಮನೋವಿಜ್ಞಾನ ಹಾಗೂ ದತ್ತಾಂಶ ವಿಶ್ಲೇಷಣೆಯೂ ಕರಗತ ಮಾಡಿಕೊಂಡಿದ್ದರಿಂದ ಅವರ ಚುನಾವಣಾ ತಂತ್ರಗಳು ಟಿವಿಕೆಗೆ ನೆರವಾದವು.
.ಪಂಚ ರಾಜ್ಯ ಚುನಾವಣಾ ಫಲಿತಾಂಶ ಸೇರಿ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ....ಅಜಿತ್ ಪವಾರ್.. ಏಕನಾಥ ಶಿಂದೆ ರೀತಿ ಬಂಗಾಳದಲ್ಲಿ ಮಮತಾಗೆ ಸುವೇಂದು ಎದಿರೇಟು.
ಜಾನ್ ಅವರ ವೃತ್ತಿ ಬದುಕು

ಪರ್ಫೆಕ್ಟ್ ರಿಲೇಷನ್ಸ್, ಗುಡ್ ರಿಲೇಷನ್ಸ್ ಇಂಡಿಯಾ ಸೇರಿದಂತೆ ಪ್ರಮುಖ ಸಾರ್ವಜನಿಕ ಪಿಆರ್ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅವರ ಅನುಭವ ರಾಜಕೀಯ ಪರಿಣಿತನನ್ನಾಗಿ ರೂಪಿಸಿದವು. ಈ ಅನುಭವಗಳ ಆಧಾರದಲ್ಲೇ ಜಾನ್ ಅವರು ತಮ್ಮದೇ ಒಂದು ಸಲಹಾ ಸಂಸ್ಥೆಯನ್ನು ಆರಂಭಿಸಿದರು. ಪರ್ಸೊನಾ ಲೀಡರ್ಶಿಪ್ ಅಡ್ವೈಸರಿ ಎಂಬ ಈ ಸಂಸ್ಥೆ ಮೂಲಕ ರಾಜಕೀಯ ಸಲಹೆಗಳನ್ನು ನೀಡಲು ಆರಂಭಿಸಿದರು. ಇದಕ್ಕೆ ಅವರು ಪ್ರಶಾಂತ್ ಕಿಶೋರ್ ಅವರಂಥ ರಾಜಕೀಯ ಚಾಣಕ್ಷರೊಂದಿಗೂ ಕೈಜೋಡಿಸಿದರು.

ಜಾನ್ ಆರೋಗ್ಯಸ್ವಾಮಿ ಅವರ ಆರಂಭಿಕ ದಿನಗಳು

ರಾಜಕೀಯ ಸಲಹೆಗಾರರಾಗಿ ಜಾನ್ ಅವರ ಆರಂಭಿಕ ದಿನಗಳು ರೋಚಕತೆಯಿಂದ ಕೂಡಿದ್ದವು ಎಂಬುದನ್ನು ತಮಿಳುನಾಡಿನ ಮಾಧ್ಯಮಗಳು ವರದಿ ಮಾಡಿವೆ. ಪಿಎಂಕೆಗಾಗಿ ಪ್ರಚಾರ ಕಾರ್ಯ, ಅನ್ಬುಮಣಿ ರಾಮದಾಸ್ ಅವರ ‘ಮಾತ್ರಂ ಮುನೇತ್ರಂ ಅನ್ಬುಮಣಿ’ಗಾಗಿ ಕೆಲಸ ಮಾಡಿದರು. ಅಲ್ಲಿಯವರೆಗೂ ಜಾತಿ ಆಧಾರಿತ ರಾಜಕೀಯ ಮಾಡುತ್ತಿದ್ದ ಪಿಎಂಕೆ ಪಕ್ಷಕ್ಕೆ ಅಭಿವೃದ್ಧಿ ಕೇಂದ್ರಿತ ರಾಜಕೀಯದ ದೃಷ್ಟಿಕೋನವನ್ನು ನೀಡಿದರು.

2021ರಲ್ಲಿ ಇವರು ನಡೆಸಿದ ನಾಮ್ ತಮಿಳರ್ ಕಾಚಿ ಎಂಬ ಅಭಿಯಾನವು ಬಹಳಷ್ಟು ಜನಪ್ರಿಯತೆಯನ್ನು ಪಡೆಯಿತು. ಈ ಅಭಿಯಾನದ ಮೂಲಕ ಯುವಸಮುದಾಯವನ್ನು ಮತದಾನಕ್ಕೆ ಕರೆತರುವ ಪ್ರಯತ್ನ ನಡೆಸಿದರು.

ಕರ್ನಾಟಕದಲ್ಲೂ ಕೆಲಸ ಮಾಡಿದ ಜಾನ್ ಆರೋಗ್ಯಸ್ವಾಮಿ, ಸಿದ್ದರಾಮಯ್ಯ ಅವರ ರಾಜಕೀಯ ಸಲಹಾ ತಂಡಕ್ಕೂ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿ ಹೆಸರಾದವರು.

ಜಾನ್ ಅವರನ್ನು ವಿಜಯ್ ಆಯ್ಕೆ ಮಾಡಿದ್ದೇಕೆ?

ವಿಜಯ್ ಅವರು ಟಿವಿಕೆ ಪಕ್ಷವನ್ನು ಆರಂಭಿಸಿದಾಗ ಅವರ ಸಾಮರ್ಥ್ಯ, ಅಸಾಧಾರಣ ತಾರಾ ವರ್ಚಸ್ಸು, ಯುವ ಸಮುದಾಯವನ್ನು ಮಿಂಚಿನಂತೆ ತಲುಪುವ ಸಾಮರ್ಥ್ಯ, ಅಭಿಮಾನಿ ಸಂಘಟನೆಗಳ ಜಾಲ, ತಮಿಳುನಾಡಿನಲ್ಲಿ ಅವರಿಗಿದ್ದ ಫ್ಯಾನ್ ಬೇಸ್ಗಳನ್ನು ಪಟ್ಟಿ ಮಾಡಿದರು.

ಜತೆಗೆ, ಚುನಾವಣೆಯ ಯಾವುದೇ ಹಿನ್ನೆಲೆ ಇಲ್ಲದಿರುವುದು, ರಾಜಕೀಯ ರಚನೆಯ ಲವಲೇಶವೂ ಇಲ್ಲದಿರುವುದು, ಕಾರ್ಯಕರ್ತರ ಪಡೆ ಇಲ್ಲದಿರುವುದು, ಕ್ಷೇತ್ರಗಳ ಪರಿಚಯವಿಲ್ಲದಿರುವುದು, ಅಭ್ಯರ್ಥಿಗಳ ಯಾರೆಂಬುದೇ ಗೊತ್ತಿಲ್ಲದಿರುವುದನ್ನು ಪಟ್ಟಿ ಮಾಡಿದರು. ಈ ದೌರ್ಬಲ್ಯಗಳನ್ನು ವಿಜಯ್ ಅವರ ಸಾಮರ್ಥ್ಯದೊಂದಿಗೆ ಬೆಸೆದರು. ಆಮೂಲಕ ದೌರ್ಬಲ್ಯಗಳನ್ನೇ ಅಸ್ತ್ರವನ್ನಾಗಿ ರೂಪಿಸಿದರು.

ಜಿಲ್ಲೆಗಳಲ್ಲಿದ್ದ ಅಭಿಮಾನಿ ಬಳಗಗಳನ್ನೇ ಪಕ್ಷದ ಜಿಲ್ಲಾ ಘಟಕಗಳನ್ನಾಗಿ ಪರಿವರ್ತಿಸುವಲ್ಲಿ ಜಾನ್ ಪ್ರಮುಖಪಾತ್ರ ವಹಿಸಿದರು. ಆ ಮೂಲಕ ಪಕ್ಷವನ್ನು ಅತಿ ಕಡಿಮೆ ಸಮಯದಲ್ಲಿ ಬೇರು ಮಟ್ಟದಲ್ಲಿ ಕಟ್ಟುವಲ್ಲಿ ಯಶಸ್ವಿಯಾದರು. ಚುನಾವಣಾ ಕಾರ್ಯಕರ್ತರಾಗಿ ಶಿಸ್ತಿನಿಂದ ಹೇಗೆ ಕೆಲಸ ಮಾಡಬೇಕು ಎಂಬುದರ ತರಬೇತಿ ನೀಡಿದರು. ಗೆಲ್ಲುವವರ ಆಯ್ಕೆಯೂ ಪ್ರಮುಖ ಪಾತ್ರವಹಿಸಿದರು. ಪರಿಣಾಮಕಾರಿ ಭಾಷಣಗಳ ಮೂಲಕ ವಿಜಯ್ ಅವರಿಗೆ ತಾರಾ ವರ್ಚಸ್ಸಿನಂತೆಯೇ ರಾಜಕೀಯ ವರ್ಚಸ್ಸನ್ನೇ ತರುವಲ್ಲಿ ಪ್ರಮುಖಪಾತ್ರ ವಹಿಸಿದರು.

ಡಿಎಂಕೆ, ಎಐಎಡಿಎಂಕೆ, ಬಿಜೆಪಿ ಸೇರಿದಂತೆ ಪ್ರಮುಖ ಪಕ್ಷಗಳೊಂದಿಗೆ ರಾಜಕೀಯ ಸಂಘರ್ಷಕ್ಕೆ ಇಳಿಯುವ ಬದಲು, ಸಾಮಾಜಿಕ ನ್ಯಾಯ, ಭ್ರಷ್ಟಾಚಾರ ಮುಕ್ತ, ಆಡಳಿತ ಸುಧಾರಣೆ, ಯುವ ಕೇಂದ್ರಿತ ರಾಜಕೀಯವನ್ನೇ ವಿಷಯವನ್ನಾಗಿಸಿಕೊಂಡರು. ಹೀಗಾಗಿ ಅಭಿಮಾನಿಗಳ ಕಾರ್ಯಕ್ರಮವಾಗುವ ಬದಲು ಅವುಗಳನ್ನೇ ರಾಜಕೀಯ ವೇದಿಕೆಯನ್ನಾಗಿ ಪರಿವರ್ತಿಸಿದರು.

ಹೀಗಾಗಿ ವಿಜಯ್ ಅವರ ತಾರಾ ವರ್ಚಸ್ಸು, ಮಾಹಿತಿ, ವಿಶ್ಲೇಷಣೆ ಮತ್ತು ವ್ಯಕ್ತಿಗತ ಪ್ರಚಾರವನ್ನೇ ಚುನಾವಣಾ ತಂತ್ರವಾಗಿ ಹೆಣೆದ ಜಾನ್ ಆರೋಗ್ಯಸ್ವಾಮಿ ಈಗ ಸುದ್ದಿಯಲ್ಲಿದ್ದಾರೆ. ಆ ಮೂಲಕ ಸಿನಿಮಾ ಸೂಪರ್ಸ್ಟಾರ್ ಒಬ್ಬರನ್ನು ರಾಜಕೀಯ ನಾಯಕನನ್ನಾಗಿ ರೂಪಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.