ತ್ರಿಶ್ಶೂರ್ (ಪಿಟಿಐ): ಮಣಲೂರು ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಮತದಾರರಿಗೆ ಆಹಾರ ಕಿಟ್ ವಿತರಣೆ ಆರೋಪಗಳು ಭಾನುವಾರ ವ್ಯಕ್ತವಾಗಿದ್ದು ಗದ್ದಲಕ್ಕೆ ಕಾರಣವಾಯಿತು. ಈ ವೇಳೆ ಕೇಸರಿ ಪಕ್ಷ, ಯುಡಿಎಫ್ ಮತ್ತು ಎಲ್ಡಿಎಫ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯಿತು.

ಮಣಲೂರಿನ ವಡನಪ್ಪಳ್ಳಿಯಲ್ಲಿನ ಗೋದಾಮಿನಲ್ಲಿ ಕಿಟ್ಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂಬ ಮಾಹಿತಿ ಬಂದ ಕೂಡಲೇ ಎಲ್ಡಿಎಫ್ ಮತ್ತು ಯುಡಿಎಫ್ ಕೂಟಗಳ ಕಾರ್ಯಕರ್ತರು ಜಮಾಯಿಸಿ ಮುತ್ತಿಗೆ ಹಾಕಿದರು. ಅಲ್ಲಿದ್ದ ಬಿಜೆಪಿ ನಾಯಕ ಮತ್ತು ನಟ ದೇವನ್ ಅವರನ್ನು ಸ್ಥಳದಿಂದ ಹೋಗದಂತೆ ತಡೆದರು.

ಗೋದಾಮಿನ ಬಳಿ ಬಂದ ಯುಡಿಎಫ್ ಅಭ್ಯರ್ಥಿ ಟಿ.ಎನ್.ಪ್ರತಾಪನ್ ಅವರು ಬಿಜೆಪಿ ವಿರುದ್ಧ ಕಿಡಿಕಾರಿದರು. ‘ಬಿಜೆಪಿಯು ಮತದಾರರಿಗೆ ಹಂಚಲು 4,000 ಕಿಟ್ಗಳನ್ನು ಸಿದ್ಧಪಡಿಸಿದೆ ಮತ್ತು ಇನ್ನೂ 10,000 ಕಿಟ್ಗಳನ್ನು ತಯಾರಿಸಲು ಅಗತ್ಯವಾದ ವಸ್ತುಗಳನ್ನು ಗೋದಾಮಿನಲ್ಲಿ ಸಂಗ್ರಹಿಸಿದೆ’ ಎಂದು ಅವರು ದೂರಿದರು.

ಗೋದಾಮಿನಲ್ಲಿರುವ ಬಿಜೆಪಿ ನಾಯಕರನ್ನು ಬಂಧಿಸುವಂತೆ ಯುಡಿಎಫ್ ಕಾರ್ಯಕರ್ತರು ಆಗ್ರಹಿಸಿದರು. ಎಲ್ಡಿಎಫ್ ಕಾರ್ಯಕರ್ತರು ಇದೇ ರೀತಿ ಬೇಡಿಕೆಗಳನ್ನು ಮುಂದಿಟ್ಟರು. ತಮ್ಮ ನಾಯಕ ಗೋದಾಮಿನಲ್ಲಿ ಸಿಲುಕಿರುವುದನ್ನು ತಿಳಿದು ಸ್ಥಳಕ್ಕೆ ಬಂದ ಬಿಜೆಪಿ ಕಾರ್ಯಕರ್ತರು ಯುಡಿಎಫ್ ಮತ್ತು ಎಲ್ಡಿಎಫ್ ಕಾರ್ಯಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

ಪರಿಸ್ಥಿತಿ ಕೈಮೀರದಂತೆ ಪೊಲೀಸರು ಎಚ್ಚರವಹಿಸಿದರು. ಚುನಾವಣಾ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-51-1831783742

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.