ಎನ್.ಆನಂದ್

‘ಬುಸ್ಸಿ’ ಎಂದೇ ಖ್ಯಾತರಾದ ಎನ್. ಆನಂದ್ 15 ವರ್ಷಗಳಿಂದ ಟಿವಿಕೆ ಮುಖ್ಯಸ್ಥ ವಿಜಯ್ ಅವರ ಅತ್ಯಂತ ನಿಕಟವರ್ತಿ. 2006ರಿಂದ 2011ರವರೆಗೆ ಪುದುಚೆರಿ ಮುನ್ನೇತ್ರ ಕಾಂಗ್ರೆಸ್ನಿಂದ ಪುದುಚೆರಿಯ ಬುಸ್ಸಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ವಿಜಯ್ ಮಕ್ಕಳ ಇಯಕ್ಕಂ (ವಿಎಂಐ) ಮುಖ್ಯಸ್ಥರಾಗಿದ್ದ ಆನಂದ್, ವಿಎಂಐ ಅನ್ನು ಟಿವಿಕೆಯಾಗಿ ಪರಿವರ್ತಿಸುವಲ್ಲಿ ಮತ್ತು ಪಕ್ಷದ ಅಭ್ಯರ್ಥಿಗಳ ಆಯ್ಕೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಟಿವಿಕೆ ನಾಯಕರಲ್ಲಿ ಎರಡನೇ ಸ್ಥಾನದಲ್ಲಿರುವ ಅವರು ತಮಿಳುನಾಡಿನ 17ನೇ ವಿಧಾನಸಭೆಯ ಸದಸ್ಯರಾಗಿ ವಿಜಯ್ ಸಂಪುಟ ಸೇರಿದ್ದಾರೆ.

ಆಧವ್ ಅರ್ಜುನ

ಬ್ಯಾಸ್ಕೆಟ್ ಬಾಲ್ ಪಟು, ಭಾರತೀಯ ಬ್ಯಾಸ್ಕೆಟ್ ಬಾಲ್ ಫೆಡರೇಷನ್ನ ಹಾಲಿ ಅಧ್ಯಕ್ಷರೂ ಹೌದು. ರಾಜಕೀಯ ತಂತ್ರಗಾರನಾದ ಆಧವ್, ಅಲ್ಪಾವಧಿಗೆ ವಿಡುತಲೈ ಚಿರುತೈಗಳ್ ಕಚ್ಚಿ (ವಿಸಿಕೆ) ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಆಗಿದ್ದರು. ವಿಸಿಕೆ ಮುಖ್ಯಸ್ಥ ತೋಳ್ ತಿರುಮಾವಳವನ್ ಸಖ್ಯ ತೊರೆದು ಟಿವಿಕೆ ಸೇರಿದ್ದ ಅವರು, ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿಯಂತಹ ಪ್ರಭಾವಿ ಹುದ್ದೆಯಲ್ಲಿದ್ದರು. ವಿಜಯ್ ಅವರಿಗೆ ಹೆಚ್ಚು ಆಪ್ತರಾಗಿದ್ದು, ಟಿವಿಕೆ ಬೆಳವಣಿಗೆಯಲ್ಲಿ ಗಣನೀಯ ಕೆಲಸ ಮಾಡಿದ್ದರು. ವಿಳ್ಳಿವಾಕ್ಕಂ ಕ್ಷೇತ್ರದಿಂದ ಆಯ್ಕೆಯಾಗಿರುವ ಆಧವ್ ‘ಲಾಟರಿ ದೊರೆ’ ಎಂದೇ ಹೆಸರಾಗಿರುವ ಸ್ಯಾಂಟಿಯಾಗೋ ಮಾರ್ಟಿನ್ ಅವರ ಅಳಿಯ.

ಅರುಣ್ರಾಜ್

ವೃತ್ತಿಯಿಂದ ವೈದ್ಯರಾದ ಕೆ.ಜಿ. ಅರುಣ್ರಾಜ್, ಭಾರತೀಯ ರೆವೆನ್ಯೂ ಸೇವೆಯ (ಐಆರ್ಎಸ್) ಅಧಿಕಾರಿಯಾಗಿದ್ದರು. ಐಆರ್ಎಸ್ ಅಧಿಕಾರಿ ಹುದ್ದೆಗೆ 2025ರಲ್ಲಿ ರಾಜೀನಾಮೆ ನೀಡಿದ್ದ ಅವರು, ವಿಜಯ್ ನೇತೃತ್ವದ ಟಿವಿಕೆ ಸೇರಿದ್ದರು. ಪಕ್ಷದ ನೀತಿ ಮತ್ತು ಪ್ರಚಾರ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಕೃಷ್ಣಗಿರಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲಿ ಕೆಲ ಕಾಲ ಸರ್ಕಾರಿ ವೈದ್ಯಾಧಿಕಾರಿಯಾಗಿಯೂ ಕೆಲಸ ಮಾಡಿದ್ದರು. ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳ ಸದಸ್ಯರಿಗೆ ವಿಜಯ್ ಅವರ ಸಂದೇಶ ತಲುಪಿಸಿ, ಮನವೊಲಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ವೆಂಕಟರಮಣನ್

ಮೈಲಾಪೋರ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಪಿ. ವೆಂಕಟರಮಣನ್, ಟಿವಿಕೆ ಪಕ್ಷದ ಖಜಾಂಚಿ. ವೃತ್ತಿಯಿಂದ ವಕೀಲರಾಗಿರುವ ಇವರು, ಹಲವು ವರ್ಷಗಳಿಂದ ವಿಜಯ್ ಅವರೊಂದಿಗೆ ಗುರುತಿಸಿಕೊಂಡಿದ್ದರು. ಪಕ್ಷದ ಬ್ರಾಹ್ಮಣ ನಾಯಕರಲ್ಲಿ ಪ್ರಮುಖರು. ವಿಜಯ್ ಅವರ ಆತ್ಮೀಯ ಗೆಳೆಯನಾದ ಕಾರಣದಿಂದಲೇ ಪಕ್ಷದ ಮುಂಚೂಣಿ ನಾಯಕರಾಗಿ ಹೊರಹೊಮ್ಮಿದ್ದರು.

ನಿರ್ಮಲ್ ಕುಮಾರ್

ಟಿವಿಕೆಯ ಮಾಹಿತಿ ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮ ವಿಭಾಗಗಳ ಉಸ್ತುವಾರಿ ಹೊಂದಿದ್ದ ನಿರ್ಮಲ್ ಕುಮಾರ್, ಅದಕ್ಕೂ ಮುನ್ನ ಬಿಜೆಪಿ ಮತ್ತು ಎಐಎಡಿಎಂಕೆ ಪಕ್ಷಗಳ ಐಟಿ ಘಟಕಗಳಲ್ಲಿ ಕೆಲಸ ಮಾಡಿದ್ದರು. ಮದುರೈನ ತಿರುಪ್ಪಾರಕುಂದ್ರಂ ಕ್ಷೇತ್ರದಿಂದ ಆಯ್ಕೆಯಾಗಿರುವ ಇವರು, ಚುನಾವಣೋತ್ತರ ಮೈತ್ರಿಯ ಮಾತುಕತೆಗಳಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದರು. ಎಡ ಪಕ್ಷಗಳ ನಾಯಕರ ಮನವೊಲಿಸಿ ಟಿವಿಕೆ ನೇತೃತ್ವದ ಸರ್ಕಾರಕ್ಕೆ ಅವರ ಬೆಂಬಲ ಪಡೆಯಲು ಕಾರಣಕರ್ತರು. ಎಂಜಿನಿಯರಿಂಗ್ ಮತ್ತು ಕಾನೂನು ಪದವೀಧರರಾಗಿರುವ ಇವರು, ಡಿಜಿಟಲ್ ಮಾಧ್ಯಮಗಳ ಮೂಲಕ ಟಿವಿಕೆಯು ಜನರನ್ನು ತಲುಪುವಲ್ಲಿ ಯಶಸ್ವಿಯಾಗುವಂತಹ ಕಾರ್ಯತಂತ್ರ ರೂಪಿಸಿದ್ದರು.

ರಾಜ್ಮೋಹನ್

2008–09ರಲ್ಲಿ ‘ತಮಿಳ್ ಪೆಚ್ಚು ಎಂಗಳ್ ಮೂಚ್ಚು’ (ತಮಿಳ್ ನಮ್ಮ ಉಸಿರು) ಶೀರ್ಷಿಕೆಯ ಟೆಲಿವಿಷನ್ ರಿಯಾಲಿಟಿ ಶೋ ಮೂಲಕ ಎ. ರಾಜ್ಮೋಹನ್ ಜನಪ್ರಿಯರಾದರು. ಬಳಿಕ ಜನಪ್ರಿಯ ಮಾಧ್ಯಮ ವ್ಯಕ್ತಿತ್ಟ ಹಾಗೂ ಯೂಟ್ಯೂಬರ್ ಆಗಿ ಹೊರಹೊಮ್ಮಿದ ಅವರು, ‘ಪುಟ್ ಚಟ್ನಿ’ ರಾಜ್ಮೋಹನ್ ಎಂದೇ ಖ್ಯಾತರಾದರು. ನೀಟ್ ವಿರುದ್ಧ ಮಾತನಾಡುವ ಮೂಲಕ ತಮಿಳುನಾಡಿನಲ್ಲಿ ಜನಪ್ರಿಯತೆ ಗಳಿಸಿದರು. ಕೆಲ ಕಾಲ ಸಿನಿಮಾ ನಿರ್ದೇಶನ ಮಾಡಿದ ರಾಜ್ಮೋಹನ್, ಬಳಿಕ ಟಿವಿಕೆ ಸೇರಿ ಪಕ್ಷದ ಪ್ರಚಾರ ವಿಭಾಗದ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಎಗ್ಮೋರ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

ಡಾ.ಕೆ.ಟಿ. ಪ್ರಭು

ಶಿವಗಂಗಾ ಜಿಲ್ಲೆಯ ಕಾರೈಕುಡಿ ವಿಧಾನಸಭಾ ಕ್ಷೇತ್ರದಿಂದ ಗೆದ್ದಿರುವ ಡಾ.ಟಿ.ಕೆ. ಪ್ರಭು ಟಿವಿಕೆಯ ಎರಡನೇ ಹಂತದ ಜನಪ್ರಿಯ ನಾಯಕರಲ್ಲಿ ಒಬ್ಬರು. ಕಾಂಗ್ರೆಸ್ ನಂಟಿನ ಕುಟುಂಬದಿಂದ ಬಂದ ಇವರು, ಟಿವಿಕೆ ಟಿಕೆಟ್ ನಿರೀಕ್ಷೆಯಲ್ಲಿ ಎರಡು ವರ್ಷಗಳಿಂದ ಸಾರ್ವಜನಿಕ ಕೆಲಸ ಮಾಡುತ್ತಾ ಬಂದಿದ್ದರು. ವೃತ್ತಿಯಿಂದ ದಂತ ವೈದ್ಯರಾದ ಇವರು, ಇನ್ಸ್ಟಾಗ್ರಾಂನಲ್ಲಿ ಹೆಚ್ಚು ಪರಿಚಿತರು.ಎನ್ಟಿಕೆ ಸಂಸ್ಥಾಪಕ, ನಟ–ನಿರ್ದೇಶಕ ಸೀಮನ್ ಅವರನ್ನು ಪರಾಭವಗೊಳಿಸಿ ತಮಿಳುನಾಡು ವಿಧಾನಸಭೆ ಪ್ರವೇಶಿಸಿದ್ದಾರೆ.

ಕೀರ್ತನಾ ಸಂಪತ್

ಶಿವಕಾಶಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೀರ್ತನಾ ಸಂಪತ್ ಅವರು ವಿಜಯ್ ಸಂಪುಟದ ಅತಿ ಕಿರಿಯ ಸದಸ್ಯೆ. ರಾಜಕೀಯ ಪ್ರವೇಶಕ್ಕೂ ಮೊದಲು ಐಪ್ಯಾಕ್ನಲ್ಲಿ ಕಾರ್ಯ
ನಿರ್ವಹಿಸಿದ್ದ ಇವರು, ರಾಜಕೀಯ ಸಲಹೆ ಮತ್ತು ಡಿಜಿಟಲ್ ಪ್ರಚಾರ ತಂತ್ರಗಾರಿಕೆಯಲ್ಲಿ ಕೆಲಸ ಮಾಡಿದ್ದರು. ಸಕ್ರಿಯ ರಾಜಕಾರಣ ಪ್ರವೇಶಿಸುವ ಮೊದಲು ಟಿಡಿಪಿ, ಟಿಎಂಸಿ ಮತ್ತು ಡಿಎಂಕೆ ಪಕ್ಷಗಳಿಗೆ ಪ್ರಚಾರ ಸಲಹೆಗಾರ್ತಿ
ಯಾಗಿಯೂ ಕೆಲಸ ಮಾಡಿದ್ದರು. ತಮಿಳು, ಇಂಗ್ಲಿಷ್, ಹಿಂದಿ ಮತ್ತು ತೆಲುಗು ಭಾಷೆಗಳ ಮೇಲೆ ಹಿಡಿತ ಹೊಂದಿರುವ ಇವರು, ‘ವಿರುಧುನಗರದ ಮಗಳು’ ಎಂದು ಬಿಂಬಿಸಿಕೊಂಡು ಚುನಾವಣೆಯಲ್ಲಿ ಗೆದ್ದು ಬೀಗಿದರು.

ಕೆ.ಎ. ಸೆಂಗೊಟೈಯನ್

ವಿಜಯ್ ಸಂಪುಟದ ಅತಿ ಹಿರಿಯ (79 ವರ್ಷ) ಸದಸ್ಯ. ತಮಿಳುನಾಡು ಮುಖ್ಯಮಂತ್ರಿಗಳಾಗಿದ್ದ ಎಂ.ಜಿ. ರಾಮಚಂದ್ರನ್ ಮತ್ತು ಜೆ. ಜಯಲಲಿತಾ ಅವರ ನಿಕಟವರ್ತಿಯಾಗಿದ್ದ ಸೆಂಗೊಟೈಯನ್, ಸಾರಿಗೆ, ಶಾಲಾ ಶಿಕ್ಷಣ ಸೇರಿದಂತೆ ಹಲವು ಖಾತೆಗಳ ಸಚಿವರಾಗಿದ್ದರು. ಪಳನಿಸ್ವಾಮಿ ಅವರೊಂದಿಗಿನ ಭಿನ್ನಾಭಿಪ್ರಾಯದ ಕಾರಣದಿಂದ 2025ರಲ್ಲಿ ಎಐಎಡಿಎಂಕೆ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಬಳಿಕ ಟಿವಿಕೆ ಸೇರಿದ್ದ ಅವರು, ಆಡಳಿತಾತ್ಮಕ ಮತ್ತು ರಾಜಕೀಯ ಅನುಭವದಿಂದ ಪಕ್ಷಕ್ಕೆ ನೆರವಾಗಿದ್ದರು. ಪಕ್ಷದ ಸಮಾವೇಶಗಳ ರೂಪುರೇಷೆ ಸಿದ್ಧಪಡಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.