ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಮಂಜೇಶ್ವರ ಮತ್ತು ಕಾಸರಗೋಡು ಕ್ಷೇತ್ರಗಳು ಹೆಚ್ಚಿನ ಕುತೂಹಲ ಕೆರಳಿಸಿತ್ತು.

ಕೇರಳದ ಅತ್ಯಂತ ಉತ್ತರದಲ್ಲಿರುವ ಮಂಜೇಶ್ವರ ಮತ್ತು ಕಾಸರಗೋಡು ಕ್ಷೇತ್ರದಲ್ಲಿ ಯುಡಿಎಫ್ ಗಮನಾರ್ಹ ಸಾಧನೆ ಮಾಡಿದ್ದು, ಗೆಲ್ಲುವುದು ಬಹುತೇಕ ಖಚಿತವೆನಿಸಿದೆ.

ಇದರೊಂದಿಗೆ ಕನ್ನಡಿಗರು ನಿರ್ಣಾಯಕ ಮತಗಳನ್ನು ಹೊಂದಿರುವ ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಎರಡೂ ಕ್ಷೇತ್ರಗಳಲ್ಲಿ ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ.

ಗೆಲುವಿನತ್ತ ಎ.ಕೆ.ಎಂ. ಅಶ್ರಫ್

ಮಂಜೇಶ್ವರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ತಮ್ಮ ನಿಕಟ ಸ್ಪರ್ಧಿ ಬಿಜೆಪಿಯ ಕೆ. ಸುರೇಂದ್ರನ್ ವಿರುದ್ಧ ಹಾಲಿ ಶಾಸಕ, ಯುಡಿಎಫ್ನ ಎ.ಕೆ.ಎಂ. ಅಶ್ರಫ್ ಮೇಲುಗೈ ಸಾಧಿಸಿದ್ದಾರೆ.

ಚುನಾವಣಾ ಆಯೋಗದ ಮಾಹಿತಿ ಪ್ರಕಾರ, 12 ಸುತ್ತಿನ ಮತ ಎಣಿಕೆ ವೇಳೆ ಅಶ್ರಫ್ 75 ಸಾವಿರಕ್ಕೂ ಅಧಿಕ ಮತ ಗಳಿಸಿದ್ದಾರೆ. ಅಲ್ಲದೆ 26 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಅಲ್ಲಿ ಎಲ್ಡಿಎಫ್ನ ಕೆ.ಆರ್. ಜಯನಂದ ಮೂರನೇ ಸ್ಥಾನದಲ್ಲಿದ್ದಾರೆ.
.Kerala Results: ಮತದಾನೋತ್ತರ ಸಮೀಕ್ಷೆಗೂ ಮೀರಿದ ಯುಡಿಎಫ್ ಸಾಧನೆ.Kerala Election: ಎಲ್ಡಿಎಫ್ಗೆ ಬಲವಾದ ಪೆಟ್ಟು ಕೊಟ್ಟ ಬಂಡಾಯ ನಾಯಕರು.
ಕಾಸರಗೋಡಿನಲ್ಲೂ ಜಯದತ್ತ ಯುಡಿಎಫ್...

ಅತ್ತ ತನ್ನ ಭದ್ರಕೋಟೆ ಎನಿಸಿರುವ ಕಾಸರಗೋಡಿನಲ್ಲೂ ಯುಡಿಎಫ್ ಜಯದತ್ತ ಮುನ್ನುಗ್ಗುತ್ತಿದೆ.

ಬಿಜೆಪಿಯ ಅಶ್ವಿನಿ ಎಂ.ಎಲ್ ವಿರುದ್ಧ ಯುಡಿಎಫ್ನ ಕಲ್ಲಟ್ರ ಮಾಹೀನ್ ಹಾಜಿ 22 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ಗಳಿಸಿದ್ದಾರೆ.

ಮಂಜೇಶ್ವರ ಹಾಗೂ ಕಾಸರಗೋಡಿನಲ್ಲಿ ಯುಡಿಎಫ್ನಿಂದ ಐಯುಎಂಎಲ್ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಕೇರಳದಲ್ಲಿ ಬಿಜೆಪಿ ಗೆಲ್ಲುವ ಅತಿ ಹೆಚ್ಚು ನಿರೀಕ್ಷೆ ಹೊಂದಿರುವ ಕ್ಷೇತ್ರಗಳಲ್ಲಿ ಮಂಜೇಶ್ವರ ಒಂದಾಗಿತ್ತು. 2016ರಲ್ಲಿ ಕೆ. ಸುರೇಂದ್ರನ್ ಕೇವಲ 89 ಮತಗಳಿಂದ ಸೋತಿದ್ದರು. 2021ರಲ್ಲಿ ಅಶ್ರಫ್ ವಿರುದ್ಧ ಸುರೇಂದ್ರನ್ 745 ಮತಗಳ ಅಂತರದಿಂದ ಪರಾಭವಗೊಂಡಿದ್ದರು.
.Kerala Election Results: ಸಿಎಂ ಪಿಣರಾಯಿ ವಿಜಯನ್ 'ಹ್ಯಾಟ್ರಿಕ್' ಕನಸು ಭಗ್ನ.Kerala Results: ಯುಡಿಎಫ್ ಅಭೂತಪೂರ್ವ ಸಾಧನೆ, ಯಾರಾಗಲಿದ್ದಾರೆ ಕೇರಳ ಸಿಎಂ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.