‘ಸಿನಿಮಾ ಮಾಡಿಕೊಂಡು ಇರೋದು ಬಿಟ್ಟು ರಾಜಕೀಯ ಮಾಡೋದು ವಿಜಯ್ಗೆ ಬೇಕಿರಲಿಲ್ಲ’. ‘ಸಿನಿಮಾ ನೋಡಿ ವೋಟ್ ಹಾಕೋಕೆ ಇದು ಎಂ.ಜಿ. ರಾಮಚಂದ್ರನ್, ಜಯಲಲಿತಾ ಕಾಲವಲ್ಲ. ಈಗ ಎಲ್ಲವೂ ಬದಲಾಗಿದೆ’. ‘ರಾಜಕೀಯದಲ್ಲಿ ಯಶಸ್ಸು ಸಾಧಿಸಲು ಜನಪ್ರಿಯತೆಯೊಂದೇ ಸಾಲದು. ತಂತ್ರಗಾರಿಕೆಯೂ ಗೊತ್ತಿರಬೇಕು’

ಇಳಯ ದಳಪತಿ ವಿಜಯ್ ಅವರು 2024ರ ಫೆಬ್ರುವರಿಯಲ್ಲಿ ರಾಜಕೀಯ ಪಕ್ಷ ಘೋಷಿಸಿದಾಗ ಕೇಳಿ ಬಂದ ಮಾತುಗಳಿವು. ಅವುಗಳಲ್ಲಿದ್ದ ಗತ್ತು, ಗಾಂಭೀರ್ಯ ಮೊನ್ನೆ (ಮೇ 4ರಂದು) ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುವವರೆಗೂ ಕುಗ್ಗಿರಲಿಲ್ಲ.

ಸಿನಿಮಾ ಸಂಭಾಷಣೆಗಳನ್ನೇ ಭಾಷಣಗಳಲ್ಲಿ ಬೆರೆಸಿ, ಖ್ಯಾತನಾಮರು ಈಗಾಗಲೇ ಉದುರಿಸಿ ಹೋಗಿರುವ ಮಾತುಗಳನ್ನು ಹೆಕ್ಕಿ ತಮ್ಮದೇ ಶೈಲಿಯಲ್ಲಿ ಪೋಣಿಸಿ, ಪಾಂಡಿತ್ಯ ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳಲು ಸರ್ಕಸ್ ಮಾಡುತ್ತಿದ್ದುದನ್ನು ಸೂಕ್ಷ್ಮವಾಗಿ ಗಮನಿಸಿದವರು, ‘ವಿಜಯ್ ಹತ್ತರಲ್ಲಿ ಒಬ್ಬನಾಗುತ್ತಾನೆ’ ಎಂದು ಟ್ರೋಲ್ ಮಾಡಿದ್ದರು. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನು ಘೋಷಿಸಲು ಕರ್ನಾಟಕದಿಂದ ಹೋಗಿದ್ದ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಹಾಗೂ ‘ಸಂಘಟನಾ ಚತುರ’ ಡಿ.ಕೆ. ಶಿವಕುಮಾರ್ ಅವರಿಗೂ, ವಿಜಯ್ ಅವರಲ್ಲೇನೂ ‘ಮೆಚ್ಯುರಿಟಿ’ ಕಂಡಿರಲಿಲ್ಲ.

ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಚಿತ್ರರಂಗ ತೊರೆದು, ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದಾಗಿ ಅಚ್ಚರಿಯ ಘೋಷಣೆ ಮಾಡಿದ್ದ ವಿಜಯ್, 10 ತಿಂಗಳ ನಂತರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮೊದಲ ಸಮಾವೇಶ ನಡೆಸಿದ್ದರು. ರಾಜಧಾನಿ ಚೆನ್ನೈನಿಂದ ಸುಮಾರು 150 ಕಿ.ಮೀ. ದೂರದ ವಿಕ್ರಮಾಂಡಿಯಲ್ಲಿ ನಡೆದ ಆ ಸಮಾವೇಶದಲ್ಲಿ 8 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಎನ್ನಲಾಗಿದೆ. ಅದೊಂದೇ ಅಲ್ಲ. ಅವರು ಸಮಾವೇಶ ನಡೆಸಿದ ಪ್ರತಿಯೊಂದು ಕಡೆಯೂ ಜನಸಾಗರವೇ ತುಂಬಿರುತ್ತಿತ್ತು. ಅದು, ಇತರ ಪಕ್ಷಗಳ ಕಣ್ಣು ಕುಕ್ಕಿದ್ದು ಸುಳ್ಳಲ್ಲ. ಆದಾಗ್ಯೂ, ಸಿನಿಮಾಗಳಲ್ಲಿ ಸಂಭಾಷಣೆ, ವೇದಿಕೆ ಮೇಲೆ ಭಾಷಣ ಕೇಳಿ ಸೀಟಿ ಹೊಡೆದವರೆಲ್ಲ ವೋಟ್ ಹಾಕುತ್ತಾರೆಂದುಕೊಳ್ಳುವುದು ಭ್ರಮೆ ಎಂದು ಷರಾ ಬರೆಯಲಾಗಿದ್ದ ತಜ್ಞರ ಸಮೀಕ್ಷೆಗಳಲ್ಲೂ ‘ದಳಪತಿ’ಗೆ ಸಮಾಧಾನಕರ ಅಂಕ ಸಿಕ್ಕಿರಲಿಲ್ಲ.
.Tamil Nadu Election: ಡಿಎಂಕೆ ಭದ್ರಕೋಟೆಗೆ ನುಗ್ಗುವ ಧೈರ್ಯ ಮಾಡಿದ್ದೇಕೆ ವಿಜಯ್?.ದಳಪತಿ ವಿಜಯ್, ಟಿವಿಕೆಯನ್ನು ಪಟ್ಟಕ್ಕೇರಿಸಲಿವೆಯೇ ಅಭಿಮಾನಿ ಸಂಘಗಳು?.
ಆದರೀಗ ತಮಿಳಿಗರ ಕಣ್ಮಣಿ ಎಲ್ಲಾ ಲೆಕ್ಕಾಚಾರಗಳನ್ನೂ, ಎಲ್ಲರ ಉಡಾಫೆಗಳನ್ನೂ ಉಲ್ಟಾ ಮಾಡಿದ್ದಾರೆ. ಅದರ ಹಿಂದೆ, ಪಕ್ಷ ಘೋಷಣೆಯಾಗುತ್ತಿದ್ದಂತೆ ವಿದೇಶಗಳಿಂದಲೂ ಬಂದು ಪ್ರಚಾರಕ್ಕಿಳಿದವರು, ಲಕ್ಷಾಂತರ ಅಭಿಮಾನಿಗಳ ಶ್ರಮವಿದೆ. ನೆರೆ ರಾಜ್ಯಗಳಲ್ಲಿ ಬದುಕು ಕಟ್ಟಿಕೊಂಡಿದ್ದ - ಕಾಫಿ ತೋಟಗಳು, ಬೀದಿ ಬದಿಯ ಅಂಗಡಿ-ಮಳಿಗೆಗಳು, ಹೋಟೆಲ್ಗಳು, ಕಾರ್ಪೊರೆಟ್ ವಲಯದ ಕೆಲಸಗಳಿಂದ ಬಿಡುವು ಮಾಡಿಕೊಂಡು ತವರಿಗೆ ಹೋಗಿ ಹಕ್ಕು ಚಲಾಯಿಸಿದವರ ಆಶೀರ್ವಾದವಿದೆ.

ವಿಜಯ್ ಅವರೊಳಗಿದ್ದ ತಂತ್ರಗಾರ ಈಗ ಹೊರಗೆ ಬಂದಿದ್ದಾನೆ. ಎಲ್ಲರನ್ನೂ ತನ್ನತ್ತ ತಿರುಗಿಸಲು ‘ಸೀಟಿ’ ಹೊಡೆಯುತ್ತಿದ್ದಾನೆ. ಆ ಸದ್ದಿನ ಮೊರೆತದಲ್ಲಿ, ಇಳಯ ದಳಪತಿಯ ಒಂದೊಂದು ಪಟ್ಟುಗಳೂ ಪ್ರತಿಧ್ವನಿಸುತ್ತಿವೆ.

ಪೆರಿಯಾರ್ ಅವರ ತತ್ವ ಹಾಗೂ ದ್ರಾವಿಡ ಸಿದ್ಧಾಂತಕ್ಕೆ ಅನುಗುಣವಾಗಿಯೇ ಪಕ್ಷ ಮುನ್ನಡೆಸುವುದಾಗಿ ಹೇಳಿದರೂ, ದೈತ್ಯರಂತಿದ್ದ ದ್ರಾವಿಡ ಪಕ್ಷಗಳ ಹತ್ತಿರಕ್ಕೆ ಹೋಗದೆ, ಕಮ್ಯುನಿಸ್ಟರ ನೆರಳು ಸೋಕಿಸಿಕೊಳ್ಳದೆ, ರಾಷ್ಟ್ರೀಯ ಪಕ್ಷಗಳಿಂದ ಸಮಾನ ಅಂತರ ಕಾಯ್ದುಕೊಂಡ ವಿಜಯ್ ನಡೆ ಇತರರಿಗೆ ಪಾಠ.

ಕಾಗದದ ಮೇಲೆ ಕಾಣುತ್ತಿರುವಂತೆ, ಟಿವಿಕೆ ನಿಜವಾಗಿಯೂ ಎರಡೂವರೆ ವರ್ಷದ ಹಸುಗೂಸೇ. ಆದರೆ, ಅದನ್ನು ಸ್ಥಾಪಿಸುವ ಮುನ್ನ ವಿಜಯ್ ಮಾಡಿಕೊಂಡಿದ್ದ ತಯಾರಿ ಸಣ್ಣದಲ್ಲ. ರಾಜ್ಯದಾದ್ಯಂತ ನಾಯಿಕೊಡೆಗಳಂತೆ ಹರಡಿ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ 80 ಸಾವಿರಕ್ಕೂ ಹೆಚ್ಚು ಅಭಿಮಾನಿ ಸಂಘಗಳನ್ನು ಪ್ರಚಾರಕ್ಕಿಳಿಸಿ ಮತಬೇಟೆಯಾಡಿದ್ದು ತಮಾಷೆಯಲ್ಲ.

ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ನಿಧನದ ನಂತರ ಸಮರ್ಥ ನಾಯಕತ್ವವಿಲ್ಲದೆ ಕಂಗೆಟ್ಟಿರುವ ಎಐಎಡಿಎಂಕೆಯನ್ನು ಬದಿಗೆ ಸರಿಸಿ, ಡಿಎಂಕೆಗೆ ಎದುರಾಳಿಯಾಗಿ ನಿಲ್ಲಲು ಈ ಅವಕಾಶವನ್ನು ಬೆಳೆಸಿಕೊಂಡಿದ್ದು ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯೇ ನಮ್ಮ ಎದುರಾಳಿ ಎಂದು ಸಾರುವ ಮೂಲಕ ಪರ್ಯಾಯ ಶಕ್ತಿಯನ್ನು ಎದುರು ನೋಡುತ್ತಿದ್ದವರನ್ನು ಸೆಳೆದದ್ದು ಚತುರ ನಡೆಯಲ್ಲದೆ ಇನ್ನೇನು.
.ತಮಿಳುನಾಡಿನ 'ಅಕ್ಕಿ ಪಾತ್ರೆ'ಯಲ್ಲಿ ಮತ ಲೆಕ್ಕಾಚಾರ: ಡಿಎಂಕೆಗೆ ರೈತರ ಚಾಟಿ ಏಟು?.ತಮಿಳುನಾಡು ಫಲಿತಾಂಶ: ಮತ್ತೊಬ್ಬ ಎಂಜಿಆರ್ ಆಗುವರೇ ವಿಜಯ್?.
ಪ್ರತಿ ಚುನಾವಣಾ ಸಮಾವೇಶದಲ್ಲಿ ಎದುರಾಳಿಗಳ ಬೆವರಳಿಸುವಂತಹ ಅಂಶಗಳನ್ನು ಪ್ರಸ್ತಾಪಿಸಿದರೂ, ಆ ಪಕ್ಷಗಳ ನಾಯಕರನ್ನು ತಮ್ಮ ಮಾರ್ಗದರ್ಶಿಗಳೆಂದೇ ಒತ್ತಿ ಒತ್ತಿ ಹೇಳಿದ್ದರು. ಕೆ. ಕಾಮರಾಜರಾದಿಯಾಗಿ ಹಿರಿಯರೆಲ್ಲ ನಮ್ಮವರೇ ಎನ್ನುತ್ತಾ ಬಂದ ವಿಜಯ್, ಆ ನಾಯಕರನ್ನು ಈಗಲೂ ಆರಾಧಿಸುತ್ತಿರುವವರ ಭಾವನೆಗಳನ್ನು ಕೆರಳಿಸುವ ಪುಂಡಾಟ ತೋರಲಿಲ್ಲ. ಇದು, ಎದುರಾಳಿಯ ಜೋಳಿಗೆಗೆ ಕೈಹಾಕುವ ನಾಜೂಕು ನಡೆ.

ಆಯೋಗ ಊದಿದ ‘ಸೀಟಿ’ಗೆ ಬಲ ತುಂಬಿದ್ದು ಸಿಎಸ್ಕೆ ಕ್ರೇಜ್!
ಸಿನಿಮಾ ರಂಗದಿಂದ ಬಂದವರು ರಾಜಕೀಯ ವೇದಿಕೆಯಲ್ಲಿ ಮಿನುಗಿದ್ದು ತಮಿಳುನಾಡಲ್ಲಿ ಹೊಸದೇನಲ್ಲ. ಆದರೆ, ಈ ಹಿಂದೆ ಯಶಸ್ಸು ಸಾಧಿಸಿದವರು ಕಲಿತಿದ್ದ ಅನುಭವದ ಪಾಠವನ್ನು ವಿಜಯ್ ಕೇಳಿರಲಿಲ್ಲ.

ಡಿಎಂಕೆಯಿಂದ ಮುಖ್ಯಮಂತ್ರಿಯಾದ ಮೊದಲಿಗ ಸಿ.ಎನ್. ಅಣ್ಣಾದೊರೈ ಅವರು ಸಿನಿಮಾಗಳಿಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿದ್ದವರು. ಮದ್ರಾಸ್ ರಾಜ್ಯವು ತಮಿಳುನಾಡಾಗಿ ಬದಲಾದ ಕಾಲಘಟ್ಟದಲ್ಲಿ ಮುಖ್ಯಮಂತ್ರಿಯಾಗಿದ್ದ ಅವರಿಂದ ರಾಜಕೀಯದ ಪಟ್ಟುಗಳನ್ನು ಕಲಿತು ಅಧಿಕಾರಕ್ಕೇರಿದವರು ಕರುಣಾನಿಧಿ. ಅವರೊಂದಿಗೇ ಇದ್ದು, ಪಳಗಿ ನಂತರ ತಿರುಮಂತ್ರ ಹಾಕಿ, ಹೊಸ ಪಕ್ಷ (ಎಐಎಡಿಎಂಕೆ) ಕಟ್ಟಿ ಯಶಸ್ವಿಯಾದವರು ಎಂ.ಜಿ.ರಾಮಚಂದ್ರನ್. ಅವರ ನೆರಳಲ್ಲೇ ಅರಳಿದವರು ಜಯಲಲಿತಾ.

ಹೀಗೆ ಪಾಠ ಕಲಿತು ‘ಪರೀಕ್ಷೆ’ ಎದುರಿಸುವ ಅವಕಾಶ ವಿಜಯ್ಗೆ ಸಿಗಲಿಲ್ಲ ಅಥವಾ ಅದನ್ನು ಅರಸಿ ಹೋಗಲಿಲ್ಲ ಅವರು. ಬದಲಾಗಿ, ಒಂಟಿಯಾಗಿಯೇ ‘ಸಿಂಹದಂತೆ’ ನುಗ್ಗುವ ಧೈರ್ಯ ತೋರಿದರು.

ಒಂದು ಹಂತದಲ್ಲಿ, ಕರೂರು ಕಾಲ್ತುಳಿತ ದುರಂತ ಸಂಬಂಧ ತನಿಖಾ ಸಂಸ್ಥೆಗಳಿಂದ ಪದೇ ಪದೇ ವಿಚಾರಣೆ, ತಮ್ಮ ನಟನೆಯ ಕೊನೇ ಸಿನಿಮಾದ (ಜನನಾಯಗನ್) ಅಂತಿಮ ಹಂತದ ಕಾರ್ಯಗಳು, ಅದರ ಬಿಡುಗಡೆಗೆ ಎದುರಾದ ಕಾನೂನಾತ್ಮಕ ತೊಡಕು ಹಾಗೂ ಪಕ್ಷವನ್ನು ಏಕಾಂಗಿಯಾಗಿ ಮುನ್ನಡೆಸುವ ಸವಾಲುಗಳು ವಿಜಯ್ ಅವರನ್ನು ಹೈರಾಣಾಗಿಸಿದ್ದವು.

ಇಂತಹ ಸಂದರ್ಭದಲ್ಲಿ ಚುನಾವಣಾ ಆಯೋಗ ಹೊರಡಿಸಿದ ಆ ಒಂದು ಆದೇಶ, ಇಡೀ ಟಿವಿಕೆ ಬಳಗದಲ್ಲಿ ನವಚೈತನ್ಯ ತುಂಬಿತು. ಆಯೋಗವು ಇದೇ ಜನವರಿಯಲ್ಲಿ, ವಿಸಿಲ್ ಅನ್ನು ಪಕ್ಷದ ಚಿಹ್ನೆಯನ್ನಾಗಿ ಘೋಷಿಸಿತ್ತು.

ಐಪಿಎಲ್ನಲ್ಲಿ ಆಡುವ ತವರಿನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕಾರಣದಿಂದಾಗಿ ‘ವಿಸಿಲ್ ಪೋಡು’ (ಸೀಟಿ ಹೊಡಿ) ಎಂಬ ಪದಪುಂಜ ತಮಿಳುನಾಡಿನಾದ್ಯಂತ ಹರಡಿದೆ. ಅದರ ಜನಪ್ರಿಯತೆ ಎಷ್ಟೆಂದರೆ, 2024ರಲ್ಲಿ ತೆರೆಕಂಡ ವಿಜಯ್ ಅಭಿನಯದ ‘ಗೋಟ್’ ಸಿನಿಮಾದಲ್ಲೂ ಇದೇ ಸಾಲುಗಳುಳ್ಳ ಹಾಡನ್ನು ಅಳವಡಿಸಿಕೊಳ್ಳಲಾಗಿತ್ತು. ತಮಿಳುನಾಡಿನಲ್ಲಿ ‘ತಲಾ’ (ನಾಯಕ) ಎಂದೇ ಖ್ಯಾತರಾಗಿರುವ ಎಂ.ಎಸ್. ಧೋನಿ, ಕ್ರಿಕೆಟ್ಗೆ ಸಂಬಂಧಿಸಿದ ಕೆಲ ದೃಶ್ಯಗಳೂ ಆ ಸಿನಿಮಾದಲ್ಲಿವೆ.
.ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ '3D ದಳಪತಿ'ಯ ಸದ್ದು! ಟಿವಿಕೆಗೆ ವರ?.ಡಿಎಂಕೆ ಮೈತ್ರಿ ತೊರೆದು ವಿಜಯ್ 'ಕೈ' ಹಿಡಿದ ಕಾಂಗ್ರೆಸ್: ಏನಿದು ಬದಲಾದ ರಾಜಕೀಯ?.
ಪ್ರತಿ ಬಾರಿ ಚೆನ್ನೈನಲ್ಲಿ ಐಪಿಎಲ್ ಪಂದ್ಯಗಳು ನಡೆಯುವಾಗ ‘ವಿಸಿಲ್ ಪೋಡು’ ಮಾರ್ಧನಿಸುತ್ತದೆ. ಈ ಕಾರಣಕ್ಕೆ ಪ್ರಚಾರದ ಕೆಲಸ ಸಲೀಸಾಯಿತು. ಎಲ್ಲೆಲ್ಲೂ ‘ಸೀಟಿ’ ಮೊಳಗಿತು.

2019ರಲ್ಲಿ ದಳಪತಿಯ ‘ಬಿಗಿಲ್’ ಸಿನಿಮಾ ತೆರೆಗಪ್ಪಳಿಸಿತ್ತು. ತಮಿಳಿನಲ್ಲಿ ಬಿಗಿಲ್ ಎಂದರೆ ಸೀಟಿ/ವಿಸಿಲ್ ಎಂದರ್ಥ. ಬರೋಬ್ಬರಿ ₹ 300 ಕೋಟಿ ಗಳಿಕೆ ಕಂಡಿರುವ ಆ ಸಿನಿಮಾದಲ್ಲಿ ವಿಜಯ್ ದ್ವಿಪಾತ್ರಗಳಲ್ಲಿ ನಟಿಸಿದ್ದರು. ರೌಡಿ ರಾಯಪ್ಪ ಹಾಗೂ ಆತನ ಮಗ ಫುಟ್ಬಾಲ್ ಆಟಗಾರ, ಕೋಚ್ ಮೈಕಲ್ ಆಗಿ ಅವರ ನಟನೆಗೆ ಅಭಿಮಾನಿಗಳು ತಲೆ ಬಾಗಿದ್ದರು. ತಮಿಳುನಾಡು ರಾಜ್ಯ ಮಹಿಳಾ ಫುಟ್ಬಾಲ್ ತಂಡದ ಕೋಚ್ ಆಗಿ ದಳಪತಿ ಆಗಲೂ ಸೀಟಿ ಹೊಡೆದಿದ್ದರು.

ಇವಷ್ಟೇ ಅಲ್ಲ. ಸಿನಿ ತಾರೆಯನ್ನು ಅತಿಯಾಗಿಯೇ ಆರಾಧಿಸುವ ತಮಿಳಿಗರಲ್ಲಿ ಸೀಟಿ/ಶಿಳ್ಳೆ ಬಗ್ಗೆ ವಿಶೇಷ ಭಾವವಿದೆ. ಚಿತ್ರಮಂದಿರಗಳಲ್ಲಿ ಕೂತು ಸಿನಿಮಾಗಳಲ್ಲಿ ವಿಜಯ್ ಅವರನ್ನು ಕಣ್ತುಂಬಿಕೊಳ್ಳುವಾಗ ಅವರ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ, ಹರ್ಷೋಧ್ಗಾರೊಂದಿಗೆ ಸಂಭ್ರಮಿಸುವುದುಂಟು. ಹಾಗಾಗಿ, ಬಾಲ್ಯದಲ್ಲೇ ನಟನೆಗೆ ಧುಮುಕಿದ ವಿಜಯ್ಗೆ ಸೀಟಿಯೊಂದಿಗಿನ ನಂಟು ಹೊಸದಲ್ಲ.

ಈ ಎಲ್ಲ ಕಾರಣದಿಂದಾಗಿ, ಪಕ್ಷದ ಚಿಹ್ನೆಯಾಗಿ ‘ಸೀಟಿ’ ಘೋಷಣೆಯಾದದ್ದು, ಟಿವಿಕೆ ಪ್ರಚಾರಕ್ಕೆ ಹೊಸ ಹುರುಪು ನೀಡಿತು. ಆತ್ಮವಿಶ್ವಾಸದ ಒರತೆಗಳನ್ನು ಮೂಡಿಸಿತು.

ಇದುವರೆಗೆ ವಿಜಯ್ಗೆ ಬದುಕು ಕಟ್ಟಿಕೊಟ್ಟಿದ್ದ ‘ಸೀಟಿ’, ಇನ್ನು ಮುಂದೆ ಅವರ ಪಕ್ಷವನ್ನು, ಅದರ ಮೂಲಕ ತಮಿಳುನಾಡನ್ನು ಮುನ್ನಡೆಸುವ ಸಾರಥಿಯಾಗುವ ಅವಕಾಶ ಗಿಟ್ಟಿಸಿಕೊಂಡಿದೆ.

ಟಿವಿಕೆಯನ್ನು ಅಧಿಕಾರದತ್ತ ತಂದ ವಿಜಯ್ ಕುರಿತ ಮಾತಿನ ವರಸೆ ಈಗ ಕೊಂಚ ಬದಲಾಗಿದೆ. ‘ಚುನಾವಣೆಯಲ್ಲಿ ಗೆದ್ದರಷ್ಟೇ ಸಾಲದು. ರಾಜ್ಯದ ಆಡಳಿತ ನಡೆಸುವುದು ತೆರೆಯ ಮೇಲೆ ಬಣ್ಣ ಹಚ್ಚಿದಂತಲ್ಲ. ನಟನೆ ಮಾಡಿಕೊಂಡು ಎಲ್ಲವನ್ನೂ ಸರಿದೂಗಿಸಿಕೊಂಡು ನಡೆಯಲು ಆಗದು ಅದಕ್ಕೆ ಅನುಭವ ಬೇಕು’ ಎಂಬ ಕೊಂಕು ಮಾತುಗಳಿಗೆ ದಳಪತಿ ಹೇಗೆ ಉತ್ತರಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.