* ಮಧ್ಯಾಹ್ನ 2 ಗಂಟೆಯ ವರದಿ ಪ್ರಕಾರ, ಬಿಜೆಪಿ 195 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಟಿಎಂಸಿ ಕೇವಲ 93 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

* ಪಾನಿಹಾಟ್ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿದ್ದ ಆರ್.ಟಿ.ಕರ್ ಅತ್ಯಾಚಾರ ಸಂತ್ರಸ್ತೆಯ ತಾಯಿ ರತ್ನಾ ದೇವನಾಥ್ ಮುನ್ನಡೆ ಕಾಯ್ದುಕೊಂಡಿದ್ದಾರೆ.

* ಖರಗ್ಪುರದಲ್ಲಿ ಬಿಜೆಪಿಯ ಮಾಜಿ ಸಂಸದ ದಿಲೀಪ್ ಘೋಷ್ ಮುನ್ನಡೆ ಕಾಯ್ದುಕೊಂಡಿದ್ದಾರೆ.

* ಪಶ್ಚಿಮ ಬಂಗಾಳದ ಭವಾನಿಪುರ ಕ್ಷೇತ್ರದಲ್ಲಿ ಹಾವು ಏಣಿಯಾಟ ಮುಂದುವರಿದಿದ್ದು, ಆರಂಭದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಸುವೇಂದು ಮತ್ತೆ ಹಿನ್ನಡೆ ಅನುಭವಿಸಿದ್ದಾರೆ. ಮಮತಾ ಬ್ಯಾನರ್ಜಿ 16 ಸಾವಿರಕ್ಕೂ ಅಧಿಕ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಈ ನಡುವೆ ಮಾತನಾಡಿರುವ ಸುವೇಂದು ಅಧಿಕಾರಿ, ಪಶ್ಚಿಮ ಬಂಗಾಳದಲ್ಲಿ ಹಿಂದುಗಳು ಟಿಎಂಸಿ ವಿರುದ್ಧ ಮತ ಹಾಕಿದ್ದಾರೆ ಎಂದು ಹೇಳಿದ್ದಾರೆ. ಇತ್ತ, ನಂದಿ ಗ್ರಾಮ ಕ್ಷೇತ್ರದಲ್ಲೂ ಸ್ಪರ್ಧಿಸಿರುವ ಸುವೇಂದು ಅಧಿಕಾರಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಟಿಎಂಸಿಯ ಪ್ರತಿಭಾ ಕರ್ ವಿರುದ್ಧ ಮುನ್ನಡೆ ಕಾಯ್ದುಕೊಂಡಿದ್ದಾರೆ.

* ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 150ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುಂದಿದ್ದು, ಅಧಿಕಾರಕ್ಕೇರಲು ಬೇಕಾಗಿರುವ 148ಕ್ಕೂ ಅದಿಕ ಸ್ಥಾನಗಳಲ್ಲಿ ಮುನ್ನಡೆ ಪಡೆದಿದೆ. ಟಿಎಂಸಿ 110ಕ್ಕೂ ಅಧಿಕ ಕ್ಷೇತ್ರಗಳಲ್ಲೇ ಮುನ್ನಡೆ ಪಡೆದಿದ್ದು, ಅಧಿಕಾರ ಕಳೆದುಕೊಳ್ಳುವ ಸೂಚನೆ ಸಿಕ್ಕಿದೆ.

* ಪಶ್ಚಿಮ ಬಂಗಾಳದಲ್ಲಿ ಮತದಾನೋತ್ತರ ಸಮೀಕ್ಷೆಗಳ ಸಮೀಪದಲ್ಲೇ ಫಲಿತಾಂಶದ ಟ್ರೆಂಡ್ ಇದೆ. 10 ಗಂಟೆ ಸುಮಾರಿಗೆ ಬಿಜೆಪಿ 150ಕ್ಕೂ ಹೆಚ್ಚು, ಟಿಎಂಸಿ 110ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುಂದಿದೆ.

* ಕಳೆದ ಬಾರಿ ನಂದಿ ಗ್ರಾಮದಲ್ಲಿ ಮಮತಾ ಅವರಿಗೆ ಸೋಲುಣಿಸಿದ್ದ ಸುವೇಂದು ಅಧಿಕಾರಿ ಭವಾನಿಪುರದಲ್ಲೂ ಮಮತಾ ಬೆನ್ನಟ್ಟಿದ್ದಾರೆ. ಆರಂಭಿಕ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ.

* ಬಿಜೆಪಿ, ಟಿಎಂಸಿ ನಡುವೆ ಸಮಬಲದ ಹೋರಾಟ ಮುಂದುವರಿದಿದ್ದು, 8.30ರ ಸುಮಾರಿಗೆ ಬಿಜೆಪಿ 71, ಟಿಎಂಸಿ 67 ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿವೆ.

* ಭವಾನಿಪುರ–ನಂದಿ ಗ್ರಾಮ ಕ್ಷೇತ್ರಗಳಲ್ಲಿ ಮಮತಾ ಬ್ಯಾನರ್ಜಿ ಮತ್ತು ಸುವೇಂದು ಅಧಿಕಾರಿ ನಡುವೆ ಜಿದ್ದಾಜಿದ್ದಿನ ಹಣಾಹಣಿ

* ಟಿಎಂಸಿ 27 ಮತ್ತು ಬಿಜೆಪಿ 32 ಕ್ಷೇತ್ರಗಳಲ್ಲಿ ಮುನ್ನಡೆ

ಪಶ್ವಿಮ ಬಂಗಾಳದಲ್ಲಿ ಅಂಚೆ ಮತ ಎಣಿಕೆ ಆರಂಭವಾಗಿದ್ದು, ಬಿಜೆಪಿ ಮತ್ತು ಟಿಎಂಸಿ ನಡುವೆ ಸಮಬಲದ ಹೋರಾಟ ಕಂಡುಬಂದಿದೆ.

ಭಾರಿ ಪ್ರಮಾಣದ ಮತದಾನ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್), ದಾಖಲೆ ಪ್ರಮಾಣದ ಮತದಾನದಿಂದಾಗಿ ಗಮನ ಸೆಳೆದಿರುವ ಪಶ್ಚಿಮ ಬಂಗಾಳದತ್ತ ದೇಶವೇ ಕುತೂಹಲದಿಂದ ಫಲಿತಾಂಶವನ್ನು ಎದುರು ನೋಡುತ್ತಿದೆ.

294 ಸದಸ್ಯ ಬಲದ ಪಶ್ಚಿಮ ಬಂಗಾಳದಲ್ಲಿ ಎರಡು ಹಂತಗಳಲ್ಲಿ ಮತದಾನವಾಗಿತ್ತು. ಒಟ್ಟಾರೆ ಮತದಾನ ಪ್ರಮಾಣ ಶೇ92.47ರಷ್ಟು ದಾಖಲಾಗಿದೆ. ಇದು ಸ್ವಾತಂತ್ರ್ಯ ನಂತರ ರಾಜ್ಯದಲ್ಲಿ ದಾಖಲಾಗಿರುವ ಅತ್ಯಂತ ಗರಿಷ್ಠ ಪ್ರಮಾಣದ ಮತದಾನವಾಗಿದೆ.

2.5 ಲಕ್ಷಕ್ಕೂ ಅಧಿಕ ಕೇಂದ್ರೀಯ ಅರೆಸೇನಾ ಪಡೆ ಸಿಬ್ಬಂದಿ ನಿಯೋಜನೆ ಮೂಲಕ ಚುನಾವಣಾ ಆಯೋಗವು ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಭದ್ರತೆಗೆ ಕ್ರಮ ಕೈಗೊಂಡಿತ್ತು. ಬಹಳಷ್ಟು ಅಳೆದು ತೂಗಿದ ಬಳಿಕ ರಾಜ್ಯದ ಪೊಲೀಸ್ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಈ ಬಾರಿ ಚುನಾವಣೆ ಸಂಬಂಧಿತ ಹಿಂಸಾಚಾರ ಅತ್ಯಂತ ಕಡಿಮೆ ಕಂಡುಬರಲು ಆಯೋಗದ ಈ ಕಠಿಣ ಕ್ರಮ ಕಾರಣ ಎನ್ನಲಾಗುತ್ತಿದೆ. ಅಲ್ಲದೇ, ಪಶ್ಚಿಮ ಬಂಗಾಳದ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಾವುಗಳು ವರದಿಯಾಗಿಲ್ಲ.

ಎಸ್ಐಆರ್ ಪರಿಣಾಮ

ಪಶ್ಚಿಮ ಬಂಗಾಳದಲ್ಲಿ 21 ವರ್ಷಗಳ ಬಳಿಕ ಎಸ್ಐಆರ್ ನಡೆಸಲಾಗಿದೆ. ಈ ಪ್ರಕ್ರಿಯೆ ಸಾಕಷ್ಟು ವಿವಾದಕ್ಕೆ ಒಳಗಾಗಿತ್ತು. ವ್ಯಾಪಕ ವಿರೋಧವೂ ವ್ಯಕ್ತವಾಗಿತ್ತು. ಎಸ್ಐಆರ್ ಬಳಿಕ 90 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರು ರಾಜ್ಯದಾದ್ಯಂತ ಬಿರುಸಿನ ಪ್ರಚಾರ ಕೈಗೊಂಡು, ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಭ್ರಷ್ಟಾಚಾರ, ಕಾನೂನು–ಸುವ್ಯವಸ್ಥೆ ಕುಸಿತ, ಮಹಿಳೆಯರ ಸುರಕ್ಷತೆ ಹಾಗೂ ನಿರುದ್ಯೋಗದಂತಹ ವಿಚಾರಗಳನ್ನು ಪ್ರಸ್ತಾಪಿಸಿ ಟಿಎಂಸಿ ವಿರುದ್ಧ ಹರಿಹಾಯ್ದಿದ್ದ ಕೇಸರಿ ಪಕ್ಷದ ನಾಯಕರು, ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸಿದ್ದರು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಮುಂಚೂಣಿಯಲ್ಲಿ ನಿಂತು ಬಿಜೆಪಿಗೆ ತಿರುಗೇಟು ನೀಡಿದ್ದರು. ಎಸ್ಐಆರ್ ವೇಳೆ ಕಂಡುಬಂದಿತ್ತು ಎನ್ನಲಾದ ಕಿರುಕುಳ, ಇತರ ರಾಜ್ಯಗಳಲ್ಲಿ ಬಂಗಾಳಿ ಭಾಷಿಕರಿಗೆ ನೀಡುತ್ತಿರುವ ಕಿರುಕುಳ ಹಾಗೂ ‘ಹೊರಗಿನವರು’ ಎಂಬ ವಿಚಾರಗಳನ್ನು ಮುಂದಿಟ್ಟುಕೊಂಡು ಟಿಎಂಸಿ ನಾಯಕರು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು.

ಈ ರಾಜಕೀಯ ಸಂಕಥನಗಳು ಯಾರಿಗೆ ಮತ ಫಸಲು ತಂದುಕೊಡಲಿವೆ ಹಾಗೂ ಯಾರಿಗೆ ದುಬಾರಿಯಾಗಲಿವೆ ಎಂಬುದು ಗೊತ್ತಾಗಲಿದೆ.

ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲೂ ಪಶ್ಚಿಮ ಬಂಗಾಳ ರಾಜಕೀಯ ಕೂತೂಹಲದ ಕೇಂದ್ರವಾಗಿತ್ತು. ಈ ಬಾರಿ ಕೂಡ ಅಧಿಕಾರ ಹಿಡಿಯಲು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹವಣಿಸುತ್ತಿದ್ದರೇ, ಐತಿಹಾಸಿಕ ಬದಲಾವಣೆ ತರಲು ಬಿಜೆಪಿ ಸಜ್ಜಾಗಿದೆ.

ತೀವ್ರ ಜಿದ್ದಾಜಿದ್ದಿ, ಹಲವೆಡೆ ಘರ್ಷಣೆಗೆ ಸಾಕ್ಷಿಯಾದ ಈ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಹೊರ ಬಿದ್ದಿದ್ದು, ಬಿಜೆಪಿಗೆ ಅಲ್ಪ ಮುನ್ನಡೆ ಅಥವಾ ಅತಂತ್ರ ವಿಧಾನಸಭೆ ರಚನೆಯಾಗಲಿದೆ ಎಂದು ಭವಿಷ್ಯ ನುಡಿದಿದೆ.

ಈ ಭವಿಷ್ಯವು, ಸತತ ಮೂರು ಅವಧಿಗೆ ಅಂದರೆ, 2011ರಿಂದಲೂ ಅಧಿಕಾರದಲ್ಲಿರುವ ಟಿಎಂಸಿಗೆ ಆಘಾತ ಎದುರಾಗುವ ಸೂಚನೆ ನೀಡಿವೆ.

ಮಮತಾ ವರ್ಸಸ್ ಸುವೇಂದು

ಈ ಬಾರಿ ಭವಾನಿಪುರ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಸ್ಪರ್ಧಿಸಿದ್ದು, ಎದುರಾಗಿಯಾಗಿ ಬಿಜೆಪಿಯ ಸುವೇಂದು ಅಧಿಕಾರಿ ಸ್ಪರ್ಧಿಸಿದ್ದಾರೆ. ಜಿದ್ದಾಜಿದ್ದಿನ ಹೋರಾಟವಿದೆ.

ಕಳೆದ ಬಾರಿ ನಂದಿಗ್ರಾಮದಲ್ಲಿ ಮಮತಾ ಅವರನ್ನು ಸೋಲಿಸಿದ್ದ ಸುವೇಂದು, ಭವಾನಿಪಪುರ ಮರುಚುನಾವಣೆಯಲ್ಲೂ ಸ್ಪರ್ಧೆ ನೀಡಿದ್ದರು.

ಸಮೀಕ್ಷೆ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸೀಟು?

P-MARQ ಸಮೀಕ್ಷೆಯು ಟಿಎಂಸಿ 118-138, ಬಿಜೆಪಿ 150-175, ಇತರೆ 02-06ರ ಸ್ಥಾನಗಳನ್ನು ಪಡೆಯಲಿವೆ ಎಂದು ಹೇಳಿವೆ. ಮ್ಯಾಟ್ರೈಜ್ ಕೂಡ ಟಿಎಂಸಿ 125-140, ಬಿಜೆಪಿ 146-161 ಸ್ಥಾನಗಳನ್ನು ಪಡೆಯಲಿವೆ ಎಂದು ಭವಿಷ್ಯ ನುಡಿದಿವೆ. ಅದೇ ರೀತಿ ಚಾಣಾಕ್ಯ ಸ್ಟ್ರಾಟರ್ಜೀಸ್, JVC ಸಮೀಕ್ಷೆಗಳು ಕೂಡ ಬಿಜೆಪಿ ಪರವಾಗಿ ಭವಿಷ್ಯ ನುಡಿದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.