ಬೀದರ್: ಚುನಾವಣಾ ಕೆಲಸಕ್ಕೆ ಗೈರು ಹಾಜರಾಗಿ ನಿರ್ಲಕ್ಷ್ಯ ತೋರಿದ ಚಿಟಗುಪ್ಪ ತಾಲ್ಲೂಕು ನರೇಗಾ ಸಹಾಯಕ ನಿರ್ದೇಶಕ ಮೊಹಮ್ಮದ್ ಸಲೀಂ ಅವರನ್ನು ಬಂಧಿಸಿ ಹಾಜರುಪಡಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಆದೇಶ ಹೊರಡಿಸಿದ್ದಾರೆ.
‘ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಅಕ್ರಮ ತಡೆಯಲು ಜಿಲ್ಲೆಯಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಹುಮನಾಬಾದ್ ತಾಲ್ಲೂಕಿನ ಕೊಡಂಬಲ್–ಐನಾಪುರ ಕಲಬುರಗಿ ಗಡಿ ಪ್ರದೇಶದ ಚೆಕ್‌ಪೋಸ್ಟ್‌ಗೆ ಮಾರ್ಚ್ 15ರಂದು ಭೇಟಿ ನೀಡಿದಾಗ ಮೊಹಮ್ಮದ್ ಸಲೀಂ ಗೈರು ಹಾಜರಾಗಿದ್ದರು.
ಯಾವುದೇ ಮುನ್ಸೂಚನೆ ನೀಡದೆ, ಮೇಲಧಿಕಾರಿಗಳ ಅನುಮತಿ ಪಡೆಯದೆ ಕರ್ತ್ಯವಕ್ಕೆ ಗೈರು ಹಾಜರಾಗಿದ್ದಾರೆ. ಬೇಜವಾಬ್ದಾರಿತನ ತೋರಿರುವುದರಿಂದ ಪ್ರಜಾಪ್ರತಿನಿಧಿ ಕಾಯ್ದೆಯಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಬಂಧಿಸಬೇಕು’ ಎಂದು ಗೋವಿಂದ ರೆಡ್ಡಿ ಗುರುವಾರ ಸೂಚಿಸಿದ್ದಾರೆ.