ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಯವರೇ, ಗೋಳಾಡುವ ಬದಲು ರಾಹುಲ್ ಗಾಂಧಿಯನ್ನು ನೋಡಿ ಕಲಿಯಿರಿ: ಪ್ರಿಯಾಂಕಾ ಗಾಂಧಿ

Published 30 ಏಪ್ರಿಲ್ 2023, 13:31 IST
Last Updated 30 ಏಪ್ರಿಲ್ 2023, 13:31 IST
ಅಕ್ಷರ ಗಾತ್ರ

ಬೆಂಗಳೂರು: ಮೋದಿಯವರೇ, ಗೋಳಾಡುವ ಬದಲು ನನ್ನ ಸೋದರನನ್ನು ನೋಡಿ ಕಲಿಯಿರಿ ಎಂದು ಕಾಂಗ್ರೆಸ್‌ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿದ್ದಾರೆ.

ಕುಡಚಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ನನ್ನನ್ನು ನಿಂದಿಸುತ್ತಿದ್ದಾರೆ ಎಂದು ಜನರ ಮುಂದೆ ಗೋಳಾಡುವ ಮೊದಲ ಪ್ರಧಾನಿಯನ್ನು ನೋಡುತ್ತಿದ್ದೇನೆ. ಪ್ರಧಾನಿಗಳ ಬಳಿ ಸಾರ್ವಜನಿಕರ ಸಮಸ್ಯೆಗಳ ಪಟ್ಟಿ ಇಲ್ಲ, ಬೈಗುಳಗಳ ಪಟ್ಟಿ ಇದೆ. ಮೋದಿಯವರೇ, ನನ್ನ ಸಹೋದರನಿಂದ ಕಲಿಯಿರಿ,ಅವನು ಹೇಳುತ್ತೇನೆ - ನಾನು ದೇಶಕ್ಕಾಗಿ ಬೈಗುಳವನ್ನಲ್ಲ ಗುಂಡೇಟು‌ ತಿನ್ನಲೂ ಸಿದ್ಧನಿದ್ದೇನೆ‘ ಎಂದು ಪ್ರಿಯಾಂಕ ಹೇಳಿದ್ದಾರೆ.

ಈ ವಿಡಿಯೊವನ್ನು ರಾಜ್ಯ ಕಾಂಗ್ರೆಸ್‌ನ ಟ್ವಿಟರ್‌ ಖಾತೆಯಲ್ಲಿ ಹಾಕಲಾಗಿದೆ.

‘ಈ ಚುನಾವಣೆಯ ನಿಜವಾದ ವಿಷಯಗಳೆಂದರೆ ಹಣದುಬ್ಬರ, ನಿರುದ್ಯೋಗ, ಭ್ರಷ್ಟಾಚಾರ, 40% ಕಮಿಷನ್. ನೈಜ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯುವುದೇ ಮೋದಿ ಮತ್ತು ಬಿಜೆಪಿ ನಾಯಕರ ಕೆಲಸವಾಗಿದೆ.

ಆದರೆ, ನಮ್ಮ ವಿಷಯಗಳು ಸ್ಪಷ್ಟವಾಗಿವೆ ಮತ್ತು ಇದು ಜನರ ಚುನಾವಣೆಯಾಗಿದೆ‘ ಎಂದು ಪ್ರಿಯಾಂಕಾ ಗಾಂಧಿ ಹೇಳಿರುವ ವಿಡಿಯೊವನ್ನು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT