ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಸಿದ್ದರಾಮಯ್ಯ-ಡಿಕೆ ಶಿವಕುಮಾರ್: ಸಾಮರ್ಥ್ಯಗಳೇನು? CM ಆಗಲು ಇರುವ ತೊಡಕುಗಳು ಏನು?
ಸಿದ್ದರಾಮಯ್ಯ-ಡಿಕೆ ಶಿವಕುಮಾರ್: ಸಾಮರ್ಥ್ಯಗಳೇನು? CM ಆಗಲು ಇರುವ ತೊಡಕುಗಳು ಏನು?
ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್‌ ಅವರ SWOT analysis
Published 15 ಮೇ 2023, 12:57 IST
Last Updated 15 ಮೇ 2023, 12:57 IST
ಅಕ್ಷರ ಗಾತ್ರ

ಬೆಂಗಳೂರು: ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ನಲ್ಲಿ ಇದೀಗ ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದರ ಬಗ್ಗೆ ತೀವ್ರ ಚರ್ಚೆ ನಡೆಯತ್ತಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್‌ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ತೀವ್ರ ಪೈಪೋಟಿ ಇದೆ. ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಶಾಸಕರಿಂದ ಅಭಿಪ್ರಾಯ ಪಡೆದು, ಅಂತಿಮ ನಿರ್ಧಾರ ಕೈಗೊಳ್ಳಯವ ಅಧಿಕಾರವನ್ನು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಲಾಗಿದೆ.

ಈ ನಡುವೆ ಸಿಎಂ ರೇಸ್‌ನಲ್ಲಿರುವ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಅವರ ಸಾಮರ್ಥ್ಯ, ದೌರ್ಬಲ್ಯಗಳ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಈ ಇಬ್ಬರ ಬಗ್ಗೆ SWOT ವಿಶ್ಲೇಷಣೆ (Strengths, Weaknesses, Opportunities and Threats) ಇಲ್ಲಿದೆ.

ಸಿದ್ದರಾಮಯ್ಯ

Strengths: ಸಾಮರ್ಥ್ಯ

  • ರಾಜ್ಯದಾದ್ಯಂತ ಮಾಸ್ ಲೀಡರ್ ಎನ್ನುವ ಹೆಗ್ಗಳಿಕೆ

  • ಸಿದ್ದರಾಮಯ್ಯ ಪರ ಹೆಚ್ಚಿನ ಶಾಸಕರ ಒಲವು

  • 2013 ರಿಂದ 2018ರ ವರೆಗೆ ಪೂರ್ಣ ಪ್ರಮಾಣದ ಸರ್ಕಾರ ನಡೆಸಿದ ಹೆಗ್ಗಳಿಕೆ

  • 13 ಬಜೆಟ್‌ ಮಂಡಿಸಿ ಉತ್ತಮ ಆಡಳಿತಗಾರ ಎನ್ನುವ ಖ್ಯಾತಿ

  • ರಾಜ್ಯದ ಅಹಿಂದ ವರ್ಗದಲ್ಲಿ ಖ್ಯಾತಿ

  • ಬಿಜೆಪಿ, ಜೆಡಿಎಸ್‌ ಅದರಲ್ಲೂ ಪ್ರಧಾನಿ ಮೋದಿ ಅವರನ್ನು ಎದುರಿಸಲು ಶಕ್ತ ಎನ್ನುವ ಹೆಗ್ಗಳಿಕೆ

  • ರಾಹುಲ್‌ ಗಾಂಧಿಗೆ ಆಪ್ತ

Weaknesses: ದೌರ್ಬಲ್ಯಗಳು

  • ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳದಿರುವುದು

  • 5 ವರ್ಷ ಮುಖ್ಯಮಂತ್ರಿಯಾಗಿದ್ದರೂ 2018ರಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ವಿಫಲ

  • ಈಗಲೂ ವಲಸಿಗ ಎನ್ನುವ ಪಟ್ಟ

  • ವಯಸ್ಸು 75 ದಾಟಿರುವುದು

Opportunities: ಅವಕಾಶಗಳು

  • ಭಾರೀ ಬಹುಮತ ಇರುವ ಕಾರಣ ಸ್ಥಿರ ಸರ್ಕಾರ ನೀಡುವ ಅವಕಾಶ ಹಾಗೂ ಅನುಭವ

  • ತಮ್ಮ ಜತೆ ಸಿಎಂ ಹುದ್ದೆಯ ಸ್ಪರ್ಧೆಯಲ್ಲಿರುವ ಡಿಕೆ ಶಿವಕುಮಾರ್‌ ಮೇಲೆ ಐಟಿ, ಇ.ಡಿ ಕೇಸುಗಳು

  • ಕೊನೆಯ ಚುನಾವಣೆ, ಸಿಎಂ ಆಗಲು ಕೊನೆಯ ಅವಕಾಶ

Threats: ಅಪಾಯ

  • ಈ ಹಿಂದೆ ಸಿದ್ದರಾಮಯ್ಯ ಅವರಿಂದ ಮಖ್ಯಮಂತ್ರಿ ಸ್ಥಾನ ತಪ್ಪಿದ ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ ಅವರ ಒಗ್ಗಟ್ಟು

  • ಹಿರಿಯ ನಾಯಕರಾದ ಬಿ.ಕೆ ಹರಿಪ್ರಸಾದ್‌ ಹಾಗೂ ಮುನಿಯಪ್ಪ ಅವರ ವಿರೋಧ

  • ದಲಿತ ಸಿಎಂ ಕೂಗು

  • ಡಿಕೆ ಶಿವಕುಮಾರ್‌ಗೆ ಟ್ರಬಲ್‌ ಶೂಟರ್‌ ಎನ್ನುವ ಹೆಗ್ಗಳಿಕೆ, ದೇಶದಾದ್ಯಂತ ಡಿ.ಕೆ ಶಿವಕುಮಾರ್‌ಗೆ ಇರುವ ಹೆಸರು ಹಾಗೂ ಗಾಂಧಿ ಕುಟುಂಬದ ಬೆಂಬಲ

ಡಿ.ಕೆ ಶಿವಕುಮಾರ್

Strengths: ಸಾಮರ್ಥ್ಯ

  • ಗಟ್ಟಿ ಪಕ್ಷ ಸಂಘಟನೆ ಹಾಗೂ ಪಕ್ಷವನ್ನು ಅಧಿಕಾರಕ್ಕೆ ತಂದ ಶ್ರೇಯ

  • ಪಕ್ಷ ನಿಷ್ಠೆಗೆ ಹೆಸರುವಾಸಿ

  • ಪಕ್ಷದ ಕಷ್ಟದ ಸಮಯದಲ್ಲಿ ಪಕ್ಷದ ಜತೆ ನಿಂತುಕೊಂಡು ಟ್ರಬಲ್ ಶೂಟರ್‌ ಎನಿಸಿಕೊಂಡಿದ್ದು

  • ಪಕ್ಷಕ್ಕೆ ಸಂಪನ್ಮೂಲದ ಕೊಡುಗೆ

  • ರಾಜ್ಯದ ಪ್ರಬಲ ಸಮುದಾಯಗಳಲ್ಲಿ ಒಂದಾದ ಒಕ್ಕಲಿಗರ ಬೆಂಬಲ

  • ಗಾಂಧಿ ಕುಟುಂಬದ ಬೆಂಬಲ

  • ಅಗಾಧ ರಾಜಕೀಯ ಅನುಭವ ಹಾಗೂ ವಿವಿಧ ಖಾತೆಗಳನ್ನು ನಿಭಾಯಿಸಿದ ಅನುಭವ

Weaknesses: ದೌರ್ಬಲ್ಯಗಳು

  • ಇ.ಡಿ, ಐಟಿ, ಸಿಬಿಐನಲ್ಲಿ ಇರುವ ಪ್ರಕರಣಗಳು

  • ತಿಹಾರ್‌ನಲ್ಲಿ ಜೈಲುವಾಸ

  • ಸಿದ್ದರಾಮಯ್ಯ ಅವರಿಗೆ ಹೋಲಿಕೆ ಮಾಡಿದರೆ ಕಡಿಮೆ ರಾಜಕೀಯ ಅನುಭವ ಹಾಗೂ ಪ್ರಭಾವ

  • ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಪ್ರಭಾವ

  • ಇತರೆ ಸಮುದಾಯಗಳಿಂದ ಬೆಂಬಲ ಇರದಿರುವುದು

Opportunities: ಅವಕಾಶಗಳು

  • ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ನ ಸಾಧನೆ

  • ಸಾಮಾನ್ಯವಾಗಿ KPCC ಅಧ್ಯಕ್ಷರಾದವರೆ ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಕಾಂಗ್ರೆಸ್ ಸಂಪ್ರದಾಯ

  • ಪಕ್ಷದ ಹಿರಿಯ ತಲೆಗಳ ಬೆಂಬಲ

Threats: ಅಪಾಯ

  • ಸಿದ್ದರಾಮಯ್ಯ ಅವರ ರಾಜಕೀಯ ಅನುಭವ, ಹಿರಿತನ, ಪ್ರಭಾವ

  • ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಶಾಸಕರ ಬೆಂಬಲ

  • ಹಲವು ಕೇಸುಗಳು ಇರುವುದರಿಂದ ಕಾನೂನಿನ ತೊಡಕು

  • ದಲಿತ ಸಿಎಂ ಕೂಗು

  • ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ ಬೆಂಬಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT