ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಮತದಾರರ ಮತದಾನ ಪ್ರಮಾಣ ಹೆಚ್ಚಳಕ್ಕೆ 'ಸಖಿ ಪಿಂಕ್ ಬೂತ್'

Published 3 ಮೇ 2023, 12:48 IST
Last Updated 3 ಮೇ 2023, 12:48 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಮಹಿಳೆಯರಲ್ಲಿ ಮತದಾನ ಜಾಗೃತಿ ಮತ್ತು ಮಹಿಳಾ ಮತದಾನ ಪ್ರಮಾಣ ಹೆಚ್ಚಿಸಲು ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ 'ಸಖಿ ಪಿಂಕ್‌ ಬೂತ್‌' (ಗುಲಾಬಿ ಬಣ್ಣದ ಮತಗಟ್ಟೆ) ತೆರೆಯಲು ಭಾರತೀಯ ಚುನಾವಣೆ ಆಯೋಗ ನಿರ್ಧರಿಸಿರುವ ಹಿನ್ನೆಲೆ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ 'ಪಿಂಕ್ ಬೂತ್' ತೆರೆಯಲಾಗಿದೆ.

ಇದರ ಜೊತೆಯಲ್ಲಿ ಯತನಿಕ್ ಮತಗಟ್ಟೆ, ಮಾದರಿ ಮತಗಟ್ಟೆಗಳನ್ನು ತೆರೆಯಲಾಗಿದೆ. ಪಿಂಕ್ ಬೂತ್ ಹೊರಗೆ ಮಹಿಳೆಯರ ಮನಸ್ಸಿಗೆ ಮುದ ನೀಡುವಂತಹ, ಅವರನ್ನು ಮತಗಟ್ಟೆಗೆ ಆಹ್ವಾನಿಸುವಂತಹ ಚಿತ್ತಾಕರ್ಷಕವಾದ ಚಿತ್ರಗಳನ್ನು ಬಿಡಿಸಲಾಗಿದೆ.

ಮತಗಟ್ಟೆ ಸಂಖ್ಯೆ 103ರಲ್ಲಿ ಮಹಿಳಾ ಮತದಾರರು ಒಂದು ಸಾವಿರಕ್ಕೂ ಹೆಚ್ಚು ಮಂದಿ ಇರುವ ಕಾರಣ, ಇಲ್ಲಿ ತೆರೆಯಲಾಗಿದೆ. ಎಲ್ಲಾ ಮಹಿಳಾ ಮತದಾರರು ಬಂದು ಮತದಾನ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ. ಈ ಮತಗಟ್ಟೆಯು ಆಕರ್ಷಣಿಯವಾಗಿರುತ್ತದೆ. ಈ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿಯಿಂದ ಹಿಡಿದು ಮತಗಟ್ಟೆ ಸಹಾಯಕಿ, ಕಾವಲು ಸಿಬ್ಬಂದಿವರೆಗೂ ಸಂಪೂರ್ಣವಾಗಿ ಮಹಿಳೆಯರಿಂದಲೇ ನಿರ್ವಹಿಸಲ್ಪಡುತ್ತದೆ. ಈ ಕಾರಣದಿಂದ ಮತದಾನದ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆಗಳಿವೆ.

ವಿಶೇಷವಾಗಿ ಗಾಲಿಕುರ್ಚಿಯ ಸಹಾಯದಿಂದ ಬರುವ ಮಹಿಳೆಯರು, ದೃಷ್ಟಿದೋಷ ಸೇರಿದಂತೆ ಅಂಗವಿಕಲ ಮಹಿಳೆಯರಿಗೆ ಈ ‘ಪಿಂಕ್‌ ಬೂತ್‌‘ಗಳಲ್ಲಿ ವಿಶೇಷ ಅತಿಥ್ಯ ದೊರೆಯಲಿದೆ. ಇಂಥ ಮಹಿಳೆಯರು ಸರತಿ ಸಾಲಿನಲ್ಲಿ ನಿಲ್ಲದೇ ನೇರವಾಗಿ ಮತಗಟ್ಟೆ ಕೇಂದ್ರಕ್ಕೆ ಪ್ರವೇಶಿಸಿ ಮತದಾನ ಮಾಡುವ ಅವಕಾಶವನ್ನೂ ಕಲ್ಪಿಸಲಾಗುವುದು ಎಂದು ಚುನಾವಣೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮತದಾರರೆಲ್ಲರೂ ಮತದಾನವನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಬೇಕು. ಬಂದು ಮತ ಹಾಕುವುದರ ಜೊತೆಗೆ ಮತದಾನ ಮಾಡಿಸುವಂತಹ ಬದ್ಧತೆಯನ್ನು ತೋರಿಸಬೇಕು. ಮೇ. 9 ರಂದು ರಂಗೋಲಿ ಬಿಡಿಸಲಾಗುತ್ತದೆ. ಸೆಲ್ಫಿ ಸ್ಟ್ಯಾಂಡ್ ಕೂಡಾ ಇರುತ್ತದೆ ಎಂದು ಅಧಿಕಾರಿ ತ್ಯಾಗರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT