ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಕೋಳಿ ಫಾರ್ಮ್ ಸ್ಥಗಿತ ಮಾಡದಿದ್ದರೆ ಮತದಾನ ಬಹಿಷ್ಕಾರಕ್ಕೆ ತೀರ್ಮಾನ

Published 29 ಏಪ್ರಿಲ್ 2023, 7:16 IST
Last Updated 29 ಏಪ್ರಿಲ್ 2023, 7:16 IST
ಅಕ್ಷರ ಗಾತ್ರ

ಶಿರಸಿ: ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಜನವಸತಿ ಪ್ರದೇಶದಲ್ಲಿರುವ ಕೋಳಿ ಫಾರ್ಮ್ ತೆರವು ಮಾಡಬೇಕು. ಇಲ್ಲವಾದರೆ ಮತದಾನದಿಂದ ದೂರ ಉಳಿಯುವುದಾಗಿ ಇಲ್ಲಿನ ಹುತ್ಗಾರ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಶನಿವಾರ ಪಂಚಾಯ್ತಿ ಎದುರು ಸೇರಿದ ಗ್ರಾಮಸ್ಥರು, ಆಡಳಿತ ವ್ಯವಸ್ಥೆ ವಿರುದ್ಧ ಕಿಡಿಕಾರಿದರು.

ನಗರ ತ್ಯಾಜ್ಯ ತಂದು ಪಂಚಾಯ್ತಿ ವ್ಯಾಪ್ತಿಯಲ್ಲಿ ಹಾಕಲಾಗುತ್ತಿದೆ. ಕಸದ ವಾಹನ ಬಂದು ಒಂದುವರೆ ವರ್ಷವಾಯಿತು. ಆದರೂ ಬಳಕೆಯಿಲ್ಲ. ಜನವಸತಿ ಪ್ರದೇಶದಲ್ಲಿರುವ ಕೋಳಿ ಫಾರ್ಮ್ ದಿಂದ ತ್ಯಾಜ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ತೆರವು ಮಾಡಬೇಕು ಎಂದು ಆದೇಶವಾಗಿದ್ದರೂ ಇನ್ನೂ ಅನುಷ್ಠಾನ ಆಗಿಲ್ಲ. ಫಾರ್ಮ್ ನ ತ್ಯಾಜ್ಯ ನೀರು ಕೆಂಗ್ರೆ ಹೊಳೆ ಸೇರುತ್ತಿದೆ. ಇದೇ ನೀರು ನಗರಕ್ಕೆ ಸರಬರಾಜು ಆಗುತ್ತಿದೆ. ಫಾರ್ಮ್ ಸಮೀಪದ ಶಾಲೆಯ ಬಾವಿ ನೀರು, ಸುತ್ತಮುತ್ತಲ ಬಾವಿಗಳ ನೀರು ಹಾಳಾಗಿದೆ. ಇಷ್ಟಾದರೂ ಇನ್ನು ಅದನ್ನು ತೆರವು ಮಾಡಿಲ್ಲ. ಹೀಗಾಗಿ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ತೆರವು ಕಾರ್ಯ ಮಾಡಬೇಕು. ಇಲ್ಲವಾದಲ್ಲಿ ಚುನಾವಣೆ ವೇಳೆ ಮತದಾನ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಗ್ರಾಮದ 50ಕ್ಕಿಂತ ಹೆಚ್ಚು ಜನರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT