ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Interview : ಯುವ ರಾಹುಲ್‌ ಆಲೋಚನೆಗಳಲ್ಲಿ ‘ತಾರುಣ್ಯ’ವಿಲ್ಲ: ತೇಜಸ್ವಿ ಸೂರ್ಯ

Published 5 ಮೇ 2023, 23:09 IST
Last Updated 5 ಮೇ 2023, 23:09 IST
ಅಕ್ಷರ ಗಾತ್ರ

ಸಂದರ್ಶನ– ಎಸ್‌. ರವಿಪ್ರಕಾಶ್

ಕರ್ನಾಟಕ ಐಟಿ, ಬಿಟಿ, ವಿಜ್ಞಾನ– ತಂತ್ರಜ್ಞಾನ ಕ್ಷೇತ್ರದ ಕೇಂದ್ರ ಬಿಂದುವಾಗಿದೆ. ಇದರ ಬೆಳವಣಿಗೆಯಲ್ಲಿ ಯುವಕರ ಪಾತ್ರವೇ ಹೆಚ್ಚು. ಆದರೆ ಎಲ್ಲ ಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿಗಳು 65– 70 ವರ್ಷ ಮೇಲ್ಪಟ್ಟವರೇ. ಕರ್ನಾಟಕ ಇನ್ನಷ್ಟು ವೇಗವಾಗಿ ಅಭಿವೃದ್ಧಿ ಹೊಂದಲು ಹೊಸ ಆಲೋಚನೆಗಳನ್ನು ಹೊಂದಿರುವ ಯುವಕರು ಮುಖ್ಯಮಂತ್ರಿ ಆದರೆ ಸೂಕ್ತ ಎನಿಸುವುದಿಲ್ಲವೇ?

ಈ ಸಲ ಬಿಜೆಪಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಹೊಸಬರಿಗೆ, ಯುವಕರಿಗೆ, ಮಹಿಳೆಯರಿಗೆ ಟಿಕೆಟ್‌ ನೀಡಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹೊಸಬರಿಗೆ ಅವಕಾಶ ನೀಡಲಾಗಿದೆ. ಪ್ರಧಾನಿ ಮೋದಿಯವರು ಇತ್ತೀಚೆಗೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಮುಂದಿನ 25 ವರ್ಷ ಕರ್ನಾಟಕವನ್ನು ಮುನ್ನಡೆಸುವ ಪ್ರತಿಭಾವಂತ ತಂಡವನ್ನು ಕೊಡುತ್ತೇನೆ ಎಂದು ಹೇಳಿದ್ದರು. ಯುವ ವಯಸ್ಸು ಎನ್ನುವುದಕ್ಕಿಂತ ಹೊಸತನದ ಆಲೋಚನೆಗಳನ್ನು ಹೊಂದಿರುವುದು ಮುಖ್ಯ. ಮೋದಿಯವರು ಹಿರಿಯರು. ಆದರೆ, ಅವರ ಆಲೋಚನೆಗಳು ಯುವಕರನ್ನು ಮೀರಿದ್ದು. ಮತ್ತೊಂದು ಕಡೆ ರಾಹುಲ್‌ಗಾಂಧಿ, ಅವರು ಯುವಕರೇನೋ ಹೌದು. ಆದರೆ, ಅವರ ಆಲೋಚನೆಗಳಲ್ಲಿ ಯೌವನ ಕಂಡು ಬರುತ್ತದೆಯೇ?

ಜನ ಬಿಜೆಪಿಗೆ ಏಕೆ ಮತ ಹಾಕಬೇಕು, ಚುನಾವಣೆಯಲ್ಲಿ ಗೆಲ್ಲಿಸಬೇಕು?

ನಾವು ನುಡಿದಂತೆ ನಡೆದಿದ್ದೇವೆ. ಕಳೆದ ನಾಲ್ಕು ವರ್ಷಗಳಲ್ಲಿ ಶತಮಾನ ಕಂಡರಿಯದ ಪ್ರವಾಹ, ಆ ಬಳಿಕ ಕೋವಿಡ್‌ ಸಂಕಷ್ಟ ಮತ್ತು ಆರ್ಥಿಕ ದುಃಸ್ಥಿತಿ ಇತ್ತು. ಅವೆಲ್ಲವನ್ನೂ ಚೆನ್ನಾಗಿ ನಿಭಾಯಿಸಿದ್ದೂ ಅಲ್ಲದೆ ಆರ್ಥಿಕ ಸ್ಥಿತಿ ಉತ್ತಮಗೊಳಿಸಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ದಶಕಗಳಿಂದ ನನೆಗುದಿಯಲ್ಲಿದ್ದ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲಾಯಿತು. ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಸುವ ಜಲ ಜೀವನ್ ಮಿಷನ್ ಅಡಿ ಶೇ 60 ರಷ್ಟು ಮನೆಗಳಿಗೆ ನಲ್ಲಿ ನೀರು ನೀಡಲಾಗಿದೆ. ಬೆಂಗಳೂರಿಗೆ ಉಪನಗರ ರೈಲು ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಎಲ್ಲದ್ದಕ್ಕಿಂತ ಮುಖ್ಯವಾಗಿ ಒಳಮೀಸಲಾತಿ ಕಲ್ಪಿಸಿದ್ದೇವೆ. ಮೀಸಲಾತಿ ಪ್ರಮಾಣವನ್ನೂ ಹೆಚ್ಚಿಸಲಾಗಿದೆ. ಕೇಂದ್ರದಲ್ಲಿ ಬಿಜೆಪಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಮಾತ್ರ ಕರ್ನಾಟಕ ಇನ್ನಷ್ಟು ವೇಗವಾಗಿ ಅಭಿವೃದ್ದಿ ಹೊಂದಲಿದೆ.

ಇಷ್ಟೆಲ್ಲ ಅಭಿವೃದ್ಧಿ ಮಾಡಿರುವುದಾಗಿ ಹೇಳುತ್ತೀರಿ, ಉರಿಗೌಡ, ನಂಜೇಗೌಡ, ಟಿಪ್ಪು ವಿಷಯವನ್ನು ಪ್ರಸ್ತಾಪಿಸುವ ಅಗತ್ಯವೇನಿದೆ?

ಟಿಪ್ಪು ವಿಷಯವನ್ನು ಮೊದಲಿಗೆ ನಾವು ಪ್ರಸ್ತಾಪಿಸಿದ್ದಲ್ಲ. ಮುಸ್ಲಿಮರನ್ನು ಓಲೈಕೆ ಮಾಡಲು ಟಿಪ್ಪು ಜಯಂತಿ ಆರಂಭಿಸಿದ್ದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ. ಪಿಎಫ್‌ಐ ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನು ಕೈಬಿಟ್ಟಿದ್ದೂ ಅವರ ಸರ್ಕಾರವೇ, ಅದನ್ನು ನಾವು ಪ್ರಶ್ನಿಸಿದರೆ ಕೋಮುವಾದಿ ಎಂದು ಹಣೆಪಟ್ಟಿ ಕಟ್ಟುತ್ತಾರೆ.

ಜನ ಸಾಮಾನ್ಯರನ್ನು ತೀವ್ರವಾಗಿ ಕಾಡುತ್ತಿರುವ ಸರ್ಕಾರಿ ಕಚೇರಿಗಳೂ ಸೇರಿ ತಳಮಟ್ಟದ ಭ್ರಷ್ಟಾಚಾರವನ್ನು ತಪ್ಪಿಸಲು ನಿಮ್ಮ ಸರ್ಕಾರ ಬಂದರೆ ಏನು ಮಾಡುತ್ತೀರಿ?

ತಂತ್ರಜ್ಞಾನದ ನೆರವಿನಿಂದ ಈ ಸಮಸ್ಯೆಗಳನ್ನು ಎಷ್ಟು ಸಾಧ್ಯವೋ ಅಷ್ಟು ಬಗೆಹರಿಸಲು ಸಾಧ್ಯವಿದೆ. ಸರ್ಕಾರಿ ಕಚೇರಿಗಳ ಜತೆ ನೇರವಾಗಿ ವ್ಯವಹರಿಸುವುದನ್ನು ಕಡಿಮೆ ಮಾಡಲು ತಂತ್ರಜ್ಞಾನವೊಂದೇ ಪರಿಹಾರವಾಗ ಬಲ್ಲದು. ಅದರಲ್ಲಿ ಡಿಬಿಟಿ ಉತ್ತಮ ಉದಾಹರಣೆ. ರಾಜೀವ್‌ಗಾಂಧಿ ಕಾಲದಲ್ಲಿ ದೆಹಲಿಯಿಂದ ನೂರು ರೂಪಾಯಿ ಕಳಿಸಿದರೆ ಫಲಾನುಭವಿಗೆ ಹದಿನೈದು ರೂಪಾಯಿ ಮಾತ್ರ ಸಿಗುತ್ತಿತ್ತು. ಈಗ ನೂರು ರೂಪಾಯಿಯೂ ಫಲಾನುಭವಿಗೆ ಸಿಗುತ್ತದೆ. ದೈನಂದಿಂದ ಆಡಳಿತದಲ್ಲಿ ಜನರಿಗೆ ಬಾಧಕ ಆಗದಂತೆ ವ್ಯವಸ್ಥೆ ರೂಪಿಸುತ್ತೇವೆ.

ಜನ ಬಿಜೆಪಿಗೆ ಏಕೆ ಮತ ಹಾಕಬೇಕು, ಚುನಾವಣೆಯಲ್ಲಿ ಗೆಲ್ಲಿಸಬೇಕು?

ನಾವು ನುಡಿದಂತೆ ನಡೆದಿದ್ದೇವೆ. ಕಳೆದ ನಾಲ್ಕು ವರ್ಷಗಳಲ್ಲಿ ಶತಮಾನ ಕಂಡರಿಯದ ಪ್ರವಾಹ, ಆ ಬಳಿಕ ಕೋವಿಡ್‌ ಸಂಕಷ್ಟ ಮತ್ತು ಆರ್ಥಿಕ ದುಃಸ್ಥಿತಿ ಇತ್ತು. ಅವೆಲ್ಲವನ್ನೂ ಚೆನ್ನಾಗಿ ನಿಭಾಯಿಸಿದ್ದೂ ಅಲ್ಲದೆ ಆರ್ಥಿಕ ಸ್ಥಿತಿ ಉತ್ತಮಗೊಳಿಸಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ.

ದಶಕಗಳಿಂದ ನನೆಗುದಿಯಲ್ಲಿದ್ದ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲಾಯಿತು.  ಎಲ್ಲದ್ದಕ್ಕಿಂತ ಮುಖ್ಯವಾಗಿ ಒಳಮೀಸಲಾತಿ ಕಲ್ಪಿಸಿದ್ದೇವೆ. ಮೀಸಲಾತಿ ಪ್ರಮಾಣವನ್ನೂ ಹೆಚ್ಚಿಸಲಾಗಿದೆ. ಕೇಂದ್ರದಲ್ಲಿ ಬಿಜೆಪಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಮಾತ್ರ ಕರ್ನಾಟಕ ಇನ್ನಷ್ಟು ವೇಗವಾಗಿ ಅಭಿವೃದ್ದಿ ಹೊಂದಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT