7

ವಿದ್ಯುತ್ ತಗುಲಿ ಆನೆ ಸಾವು

Published:
Updated:
ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಹೆಣ್ಣಾನೆ

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನ, ಯಡಿಯಾಲ ಅರಣ್ಯ ವ್ಯಾಪ್ತಿಯ ಚಿಕ್ಕಬರಗಿ ಗ್ರಾಮದ ಜಮೀನಿನಲ್ಲಿ ವಿದ್ಯುತ್ ಸ್ಪರ್ಶದಿಂದ 60 ವರ್ಷದ ಹೆಣ್ಣಾನೆ ಬುಧವಾರ ಮೃತಪಟ್ಟಿದೆ.

ಗ್ರಾಮದ ಶಿವಾಲಮ್ಮ ಎಂಬುವರ ಜಮೀನಿನಲ್ಲಿ ಅಳವಡಿಸಿದ್ದ ವಿದ್ಯುತ್ ತಂತಿಯು ಆಹಾರ ಅರಸಿ ಬಂದಿದ್ದ ಆನೆ ತಗುಲಿದೆ.

‘ಅಕ್ರಮ ವಿದ್ಯುತ್ ಸಂಪರ್ಕಕ್ಕೆ ಕಾಡು ಪ್ರಾಣಿಗಳು ಬಲಿಯಾಗುತ್ತಿದ್ದು, ಕೂಡಲೇ ಸೆಸ್ಕ್ ಅಧಿಕಾರಿಗಳು ರೈತರಿಗೆ ತಿಳವಳಿಕೆ ಮೂಡಿಸಬೇಕು. ಅಕ್ರಮ ಸಂಪರ್ಕಗಳನ್ನು ತೆರವುಗೊಳಿಸಬೇಕು’ ಎಂದು ಯಡಿಯಾಲ ಎಸಿಎಫ್ ಪರಮೇಶ್ ತಿಳಿಸಿದರು.

ಶಿವಾಲಮ್ಮ, ಮಹೇಶ್ ವಿರುದ್ಧ ಸರಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅವರು ತಲೆಮರೆಸಿಕೊಂಡಿದ್ದಾರೆ.

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 2

    Sad
  • 0

    Frustrated
  • 0

    Angry

Comments:

0 comments

Write the first review for this !