ವಿದ್ಯುತ್‌ ಗುತ್ತಿಗೆದಾರರ ಪ್ರತಿಭಟನೆ: ‘ಕತ್ತಲಲ್ಲಿ ಬೆಂಗಳೂರು’?

7
₹35 ಕೋಟಿ ಬಾಕಿ ಪಾವತಿಗೆ ಆಗ್ರಹ

ವಿದ್ಯುತ್‌ ಗುತ್ತಿಗೆದಾರರ ಪ್ರತಿಭಟನೆ: ‘ಕತ್ತಲಲ್ಲಿ ಬೆಂಗಳೂರು’?

Published:
Updated:
ಬಿಬಿಎಂಪಿ ಬೀದಿ ದೀಪಗಳ ನಿರ್ವಹಣೆ ಗುತ್ತಿಗೆದಾರರ ಸಂಘದ ಕಾರ್ಯಕರ್ತರು ಬಾಕಿ ಬಿಲ್‌ ಪಾವತಿಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದು, ಬೀದಿ ದೀಪ ರಿಪೇರಿಗೆ ಬಳಸುವ ವಾಹನಗಳನ್ನು  ನಿಲ್ಲಿಸಿ ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ

ಬೆಂಗಳೂರು: ಬೀದಿ ದೀಪಗಳನ್ನು ನಿರ್ವಹಣೆ ಮಾಡುವ ಗುತ್ತಿಗೆದಾರರಿಗೆ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)  ₹35 ಕೋಟಿ ಬಾಕಿ ಪಾವತಿಸದಿದ್ದರೆ ನಗರ ಕತ್ತಲಲ್ಲಿ ಮುಳುಗುವ ಆತಂಕ ಎದುರಾಗಿದೆ. 

18 ತಿಂಗಳಿನಿಂದ ಬಾಕಿ ಉಳಿಸಿಕೊಂಡಿರುವ ಹಣ ಪಾವತಿಸುವಂತೆ ಒತ್ತಾಯಿಸಿ ಗುತ್ತಿಗೆದಾರರು ಬುಧವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದ್ದಾರೆ.

ಬಿಬಿಎಂಪಿಯ ವಿದ್ಯುತ್ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ರಾಜು ಮಾತನಾಡಿ, ‘ಗುತ್ತಿಗೆದಾರರಿಗೆ ಪಾವತಿಸಬೇಕಾದ ಹಣ ನೀಡದೇ ಇರುವುದರಿಂದ ಕೆಲಸಕ್ಕೆ ಗೈರುಹಾಜರಾಗಲು ನಿರ್ಧರಿಸಿ
ದ್ದೇವೆ. ನಗರದಲ್ಲಿ  4.80 ಲಕ್ಷ ಬೀದಿ ದೀಪಗಳಿದ್ದು, ನಮ್ಮ ಬೇಡಿಕೆ ಈಡೇರುವವರೆಗೂ ಅವುಗಳನ್ನು ಉರಿಯಲು ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

198 ವಾರ್ಡ್‌ಗಳ ಬೀದಿ ದೀಪ ರಿಪೇರಿಗೆ ಬಳಸುವ 150 ವಾಹನಗಳನ್ನು ಬಿಬಿಎಂಪಿ ಮುಖ್ಯ ಕಚೇರಿಯ ಸುತ್ತಮುತ್ತ ನಿಲ್ಲಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !