ಗುರುವಾರ , ಸೆಪ್ಟೆಂಬರ್ 19, 2019
26 °C

ಕಾಡಾನೆ ದಾಳಿ; ಜೋಳದ ಬೆಳೆ ನಾಶ

Published:
Updated:
Prajavani

ಹನೂರು: ತಾಲ್ಲೂಕಿನ ಚಿಗತಪುರ ಗ್ರಾಮದ ಜಮೀನುಗಳಿಗೆ ನಿರಂತರವಾಗಿ ದಾಳಿ ಮಾಡುತ್ತಿರುವ ಕಾಡಾನೆಗಳು ಅಪಾರ ಪ್ರಮಾಣದ ಬೆಳೆ ನಾಶಪಡಿಸಿವೆ.

ಗ್ರಾಮದ ರೈತ ಸೈಯ್ಯದ್ ಅಹಮ್ಮದ್ ಅವರ 2 ಎಕರೆ ಜಮೀನಿನಲ್ಲಿ ಬೆಳೆದಿದ್ದ ಮುಸುಕಿನ ಜೋಳವನ್ನು ಕಾಡಾನೆಗಳು ನಾಶಪಡಿಸಿವೆ.

20 ದಿನಗಳಿಂದ ರಾತ್ರಿ ವೇಳೆ ಮಲೆ ಮಹಾದೇಶ್ವರ ವನ್ಯಜೀವಿ ವಲಯದ ಬರಬೆಟ್ಟ ಅರಣ್ಯ ಪ್ರದೇಶದಿಂದ ಬರುವ ಆನೆಗಳು ಈ ಭಾಗದಲ್ಲಿ ದಾಳಿ ಮಾಡುತ್ತಿವೆ. ಸಾಲ ಮಾಡಿ ಗೊಬ್ಬರ, ಔಷಧಿ ಹಾಕಿದ್ದೆವು. ಕಾಳು ಕಟ್ಟುವ ವೇಳೆಯಲ್ಲಿ ಬೆಳೆ ನಾಶವಾದರೆ ಏನು ಮಾಡಲಿ?, ವಲಯ ಅರಣ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸ್ಥಳ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಸೈಯ್ಯದ್ ಅಹಮ್ಮದ್ ಒತ್ತಾಯಿಸಿದ್ದಾರೆ.

Post Comments (+)