ಆನೆ ದಂತ ಮಾರಾಟಗಾರರ ಸೆರೆ

7
ಗ್ರಾಹಕರ ವೇಷದಲ್ಲಿ ಪೊಲೀಸರ ಕಾರ್ಯಾಚರಣೆ

ಆನೆ ದಂತ ಮಾರಾಟಗಾರರ ಸೆರೆ

Published:
Updated:
Deccan Herald

ಬೆಂಗಳೂರು: ಸಕಲೇಶಪುರದಿಂದ ಆನೆ ದಂತಗಳನ್ನು ತಂದು ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿಯ ಎಂ.ಬಿ.ನಾಗೇಶ್, ಕಡಗರವಳ್ಳಿಯ ಬಿ.ಡಿ.ಕೃಷ್ಣರಾಜು ಹಾಗೂ ಹೊಳೆನರಸೀಪುರದ ಎಚ್‌.ಜಿ.ಪ್ರತಾಪ್‌ ಬಂಧಿತರು. ಅವರಿಂದ ₹10 ಲಕ್ಷ ಮೌಲ್ಯದ ಎರಡು ದಂತಗಳನ್ನು ಜಪ್ತಿ ಮಾಡಲಾಗಿದೆ.

ಕಾರಿನಲ್ಲಿ ನಗರಕ್ಕೆ ಬಂದಿದ್ದ ಆರೋಪಿಗಳು, ಹೆಬ್ಬಾಳ ಕೆರೆ ಸಮೀಪದ ಹೊರವರ್ತುಲ ರಸ್ತೆ ಬಳಿ ನಿಂತುಕೊಂಡು ಗ್ರಾಹಕರಿಗಾಗಿ ಹುಡುಕಾಡುತ್ತಿದ್ದರು. ಆ ಬಗ್ಗೆ ಮಾಹಿತಿ ಪಡೆದು ಗ್ರಾಹಕರ ಸೋಗಿನಲ್ಲಿ ಕಾರ್ಯಾಚರಣೆ ನಡೆಸಿದ ಇನ್‌ಸ್ಪೆಕ್ಟರ್ ಎಂ.ಎಲ್‌.ಚೇತನ್‌ಕುಮಾರ್ ಹಾಗೂ ಪಿಎಸ್‌ಐ ವಿಜಯ್ ಕಾಂಬಳೆ ನೇತೃತ್ವದ ತಂಡ, ದಂತಗಳ ಸಮೇತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.

ಸತ್ತ ಆನೆಯ ದಂತ: ‘ಆರೋಪಿಗಳು, ಕೃಷಿಕರು. ಅರಣ್ಯದಲ್ಲಿ ಸತ್ತು ಬಿದ್ದಿದ್ದ ಆನೆ ದಂತಗಳನ್ನೇ ಕದ್ದು ತಂದು ಮಾರಾಟ ಮಾಡಲು ಯತ್ನಿಸಿದ್ದಾಗಿ ಅವರು ಹೇಳಿಕೆ ನೀಡಿದ್ದಾರೆ. ಅವರನ್ನು ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಬೇಕಿದೆ. ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ನಂತರವೇ ನಿಜಾಂಶ ತಿಳಿಯಲಿದೆ’ ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !