ಶುಕ್ರವಾರ, ಸೆಪ್ಟೆಂಬರ್ 20, 2019
26 °C

ಕಲುಷಿತ ನೀರು ಕುಡಿದು ಹೆಣ್ಣಾನೆ ಸಾವು

Published:
Updated:
Prajavani

ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಕಲುಷಿತ ನೀರು ಕುಡಿದು 40 ವರ್ಷದ ಹೆಣ್ಣಾನೆಯೊಂದು ಕೆಲವು ದಿನಗಳ ಹಿಂದೆ ಮೃತಪಟ್ಟಿದೆ. 

ಹನೂರು ವನ್ಯಜೀವಿ ವಲಯದ ಕೊತ್ತಗುಳಿ ಬೀಟ್‌ನಲ್ಲಿ ಮೃತದೇಹ ಪತ್ತೆಯಾಗಿದ್ದು ಮೂರು ದಿನಗಳ ಹಿಂದೆ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಸುಂದರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಲುಷಿತ ನೀರು ಕುಡಿದ ಕಾರಣದಿಂದ ಆನೆ ಮೃತಪಟ್ಟಿದೆ ಎಂದು ಪಶುವೈದ್ಯರು ಹೇಳಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅರಣ್ಯದಲ್ಲೇ ಕಳೇಬರವನ್ನು ಸುಡಲಾಯಿತು.

Post Comments (+)