ಗ್ರೀನ್‌ಕಾರ್ಡ್‌: ಮೀಸಲಾತಿ ಬಿಟ್ಟರೆ ಭಾರತೀಯರ ಆಧಿಪತ್ಯ

7

ಗ್ರೀನ್‌ಕಾರ್ಡ್‌: ಮೀಸಲಾತಿ ಬಿಟ್ಟರೆ ಭಾರತೀಯರ ಆಧಿಪತ್ಯ

Published:
Updated:
Prajavani

ವಾಷಿಂಗ್ಟನ್: ‘ಗ್ರೀನ್‌ಕಾರ್ಡ್ ಪಡೆಯಲು ಇರುವ ದೇಶವಾರು ಮೀಸಲಾತಿಯನ್ನು ತೆಗೆದುಹಾಕುವುದರಿಂದ, ಪ್ರಸ್ತುತ ಅಮೆರಿಕದ ಔದ್ಯೋಗಿಕ ವಲಯದಲ್ಲಿರುವ ತಾರತಮ್ಯ ಕೊನೆಯಾಗಬಹುದು. ಆದರೆ, ಇದರಿಂದ ಭಾರತ ಹಾಗೂ ಚೀನಾದಂತಹ ರಾಷ್ಟ್ರಗಳ ಪ್ರಜೆಗಳು ಅಮೆರಿಕದ ಪೌರತ್ವ ಪಡೆಯುವಲ್ಲಿ ಆಧಿಪತ್ಯ ಸಾಧಿಸಬಹುದು’ ಎಂದು ಸಂಸತ್ತಿನ ಸಂಶೋಧನಾ ಸೇವೆ (ಸಿಆರ್‌ಎಸ್) ವರದಿ ಅಭಿಪ್ರಾಯಪಟ್ಟಿದೆ. 

‘ಗ್ರೀನ್‌ಕಾರ್ಡ್ ಪಡೆದವರು ಅಮೆರಿಕದಲ್ಲಿ ಶಾಶ್ವತವಾಗಿ ವಾಸಿಸಲು ಹಾಗೂ ಉದ್ಯೋಗ ಹೊಂದಲು ಅರ್ಹರಾಗಿರುತ್ತಾರೆ. ಪ್ರಸ್ತುತ ವಲಸೆ ನಿಯಮದ ಅನುಸಾರ, ಪ್ರತಿ ದೇಶದಿಂದ ಉದ್ಯೋಗಕ್ಕಾಗಿ ವಲಸೆ ಬರುವವರಿಗೆ ಶೇ 7 ಮಾತ್ರ ಮೀಸಲಾತಿ ನೀಡಲಾಗಿದೆ. ಈ ಮೀಸಲಾತಿ ನಿಯಮ ಕೈಬಿಟ್ಟರೆ, ಸರದಿಯಲ್ಲಿ ಕಾಯುತ್ತಿದ್ದ ಭಾರಿ ಸಂಖ್ಯೆಯ ಭಾರತ ಮತ್ತು ಚೀನಾದ ಪ್ರಜೆಗಳೇ ಹೆಚ್ಚಿನ ಪ್ರಮಾಣದಲ್ಲಿ ಗ್ರೀನ್‌ಕಾರ್ಡ್ ಪಡೆದುಕೊಳ್ಳಬಹುದು’ ಎಂದು ವರದಿಯಲ್ಲಿ ಹೇಳಲಾಗಿದೆ. 

ಸರದಿಯಲ್ಲಿ ಐ.ಟಿ ಉದ್ಯೋಗಿಗಳು

ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆ (ಯುಎಸ್‌ಸಿಐಎಸ್‌) ಅಂಕಿ ಅಂಶದ ಪ್ರಕಾರ, ಗ್ರೀನ್‌ಕಾರ್ಡ್‌ ಪಡೆಯಲು ಕಾಯುತ್ತಿರುವವರಲ್ಲಿ ಶೇ 78ರಷ್ಟು ಮಂದಿ ಭಾರತೀಯರೇ ಆಗಿದ್ದಾರೆ. 2018ರ ಏಪ್ರಿಲ್‌ ತನಕದ ಅವಧಿಗೆ ಭಾರತದ 3,06,601 ಐ.ಟಿ ಉದ್ಯೋಗಿಗಳು ಗ್ರೀನ್‌ಕಾರ್ಡ್ ಪಡೆಯಲು ಸರದಿಯಲ್ಲಿ ಕಾಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !