ರಾಕಿನ್ ಪ್ರೊಡಕ್ಷನ್ ಲಾಂಛನದಲ್ಲಿ ಕಿಂಗ್ ಲಿಂಗರಾಜ್, ಶಬೀನಾ ಹರ ನಿರ್ಮಿಸಿರುವ ಚಿತ್ರವಿದು. ಈ ಚಿತ್ರವನ್ನು ಆಸ್ಕರ್ ಕೃಷ್ಣ ಕಥೆ ಬರೆದು ನಿರ್ದೇಶಿಸಿದ್ದಾರೆ. ಪವನ್ ಕುಮಾರ್ ಛಾಯಾಗ್ರಹಣ, ತ್ಯಾಗರಾಜ್ ಸಾಹಿತ್ಯ ಮತ್ತು ಸಂಗೀತ, ಎ.ಆರ್. ಸಾಯಿರಾಮ್ ಚಿತ್ರಕಥೆ ಮತ್ತು ಸಂಭಾಷಣೆ ಈ ಚಿತ್ರಕ್ಕಿದೆ. ಕಿಶೋರ್ ಯಾದವ್, ದಿವ್ಯಾ ಗೌಡ, ಗುರುರಾಜ್ ಬೂಪಾಲ್, ರಾಜ್, ಪುಷ್ಪಾ, ಶುಕ್ಲ ಭಗವತ್, ವರ್ದನ್ ತೀರ್ಥಹಳ್ಳಿ, ಮಾಸ್ಟರ್ ಕಿನ್, ಪ್ರಿಯಾಂಕಾ, ಸಂದೀಪ್ ಮಲಾನಿ, ವಠಾರ ಮಲ್ಲೇಶ್ ತಾರಾಗಣದಲ್ಲಿದ್ದಾರೆ.