ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜನಿಕಾಂತ್‌ 'ದರ್ಬಾರ್': ಸಾಮಾಜಿಕ ಜಾಲತಾಣಗಳಲ್ಲಿ ಟ್ರೇಲರ್‌ ಹವಾ...

Last Updated 17 ಡಿಸೆಂಬರ್ 2019, 6:27 IST
ಅಕ್ಷರ ಗಾತ್ರ

ಚೆನ್ನೈ: ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಕಮಾಲ್‌ ಮಾಡಿರುವ ಸೂಪರ್‌ ಸ್ಟಾರ್‌ರಜನಿಕಾಂತ್‌ ಅಭಿನಯದದರ್ಬಾರ್ ಸಿನಿಮಾಟ್ರೇಲರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿಸದ್ದು ಮಾಡುತ್ತಿದೆ.

ತಲೈವನ ದರ್ಬಾರ್‌ ಟ್ರೇಲರ್‌ ಅನ್ನು ಸೋಮವಾರ ಯುಟ್ಯೂಬ್‌ನಲ್ಲಿ ಸೇರಿಸಲಾಗಿದೆ. ಬಿಡುಗಡೆಯಾಗಿ 16 ಗಂಟೆಗಳಲ್ಲಿ 62 ಲಕ್ಷ ಜನರುವೀಕ್ಷಿಸಿದ್ದಾರೆ.ಸುಮಾರ 6 ಲಕ್ಷ ಜನರು ಲೈಕ್‌ ಮಾಡಿದ್ದಾರೆ.

ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಬಾರಿ ನೀರಿಕ್ಷೆ ಹುಟ್ಟುಹಾಕಿದೆ. ಚಿತ್ರಕಥೆಗಿಂತಲೂ ರಜನಿಯ ನಟನಾ ಶೈಲಿ ಮತ್ತು ಡೈಲಾಗ್‌ಗಳಿಗೆ ಮಾರುಹೋಗುವ ಪ್ರೇಕ್ಷಕರೇ ಹೆಚ್ಚು. ಈ ಹಿಂದೆ ‘ದರ್ಬಾರ್‌’ ಚಿತ್ರದ ಫಸ್ಟ್‌ಲುಕ್‌ ಕೂಡ ಬಣ್ಣದಲೋಕದಲ್ಲಿ ದೊಡ್ಡಮಟ್ಟದ ಸಂಚಲನ ಸೃಷ್ಟಿಸಿತ್ತು.

ಎ.ಆರ್. ಮುರುಗದಾಸ್ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ನಯನ ತಾರಾ, ಸುನಿಲ್ ಶೆಟ್ಟಿ, ಯೋಗಿಬಾಬು ಮುಖ್ಯಭೂಮಿಕೆಯಲ್ಲಿದ್ದಾರೆ. ಅನಿರುದ್ಧ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ.

1992ರಲ್ಲಿ ಬಿಡುಗಡೆಗೊಂಡ ‘ಪಾಂಡಿಯನ್’ ಚಿತ್ರದಲ್ಲಿ ರಜನಿಕಾಂತ್‌ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದರು. ಇದಾದ ಬಳಿಕ ಅವರು ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಚಿತ್ರದಲ್ಲಿ ಖಳನಟನಾಗಿಟೈಗರ್ ಪ್ರಭಾಕರ್ ನಟಿಸಿದ್ದರು.ಎಸ್.ಪಿ. ಮುತ್ತುರಾಮನ್ ನಿರ್ದೇಶನ ಮಾಡಿದ್ದ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ವಿಯಾಗಿತ್ತು.

‘ಘಜನಿ’, ‘ತುಪಾಕಿ’, ‘ಕತ್ತಿ’ ಮತ್ತು ‘ಸರ್ಕಾರ್’ ಮೊದಲಾದ ಯಶಸ್ವಿ ಚಿತ್ರಗಳನ್ನು ನೀಡಿರುವ ಮುರುಗದಾಸ್ ದರ್ಬಾರ್‌ನಲ್ಲಿ ರಜನಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಈ ಹಿಂದೆ ತಲೈವ ಖಾಕಿ ತೊಟ್ಟು ಮಿಂಚಿದ್ದ ಚಿತ್ರಗಳು ಭರ್ಜರಿ ಯಶಸ್ಸು ಕಂಡಿವೆ. ‘ದರ್ಬಾರ್’ ಮೂಲಕ ಮತ್ತೆ ಖಾಕಿ ಗತ್ತಿನ ಗತವೈಭವ ಮರುಕಳಿಸುವುದೇ ಎನ್ನುವುದು ಅವರ ಅಭಿಮಾನಿಗಳ ಕುತೂಹಲ. ಈ ಚಿತ್ರ ಪೊಂಗಲ್‌ ಹಬ್ಬಕ್ಕೆ ತೆರೆಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT