ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡಕ್ಕೆ ಚೀನಾ ಸವಾಲು

ಇಂದಿನಿಂದ ಡೇವಿಸ್‌ ಕಪ್ ಟೆನಿಸ್ ಟೂರ್ನಿ: ಜೊತೆಗೂಡಿದ ಪೇಸ್, ಬೋಪಣ್ಣ
Last Updated 5 ಏಪ್ರಿಲ್ 2018, 19:40 IST
ಅಕ್ಷರ ಗಾತ್ರ

ತೆಂಜಿನ್: ಅನುಭವಿ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರು ಮತ್ತೊಂದು ದಾಖಲೆ ಬರೆಯುವ ಛಲದಲ್ಲಿದ್ದಾರೆ.

ಶುಕ್ರವಾರ ಚೀನಾ ತಂಡದ ಎದುರು ಇಲ್ಲಿ ಆರಂಭವಾಗಲಿರುವ ಡೇವಿಸ್ ಕಪ್ ಟೂರ್ನಿಯಲ್ಲಿ ಅವರು ಡಬಲ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

ಈ ಪಂದ್ಯದಲ್ಲಿ ಗೆದ್ದರೆ ಅವರು ಇಟಲಿಯ ನಿಕೊಲಾ ಪೀಟರೆಂಜೆಲಿ ಅವರ ಹೆಸರಿನಲ್ಲಿರುವ 42 ಪಂದ್ಯಗಳ ಜಯದ ದಾಖಲೆಯನ್ನು ಸರಿಗಟ್ಟುವರು. ಈ ಟೂರ್ನಿಯಲ್ಲಿ ಅವರು ಆಡಲಿರುವ ಒಟ್ಟು ಎರಡು ಡಬಲ್ಸ್‌ ಪಂದ್ಯಗಳಲ್ಲಿಯೂ ಗೆದ್ದರೆ ನಿಕೊಲಾ ಅವರ ದಾಖಲೆಯನ್ನು ಮೀರಿ ನಿಲ್ಲುತ್ತಾರೆ.

ಹೋದ ವರ್ಷದ ಪುಣೆಯಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ಡೆವಿಸ್ ಕಪ್‌ ಟೂರ್ನಿಯಲ್ಲಿ ಡಬಲ್ಸ್‌ನಲ್ಲಿ ಪೇಸ್ ಜೋಡಿ ಸೋತಿತ್ತು.

ಅದರ ನಂತರ ಬೆಂಗಳೂರಿನಲ್ಲಿ ಉಜ್ಬೇಕಿಸ್ತಾನ ತಂಡದ ಎದುರು ನಡೆದಿದ್ದ ಪಂದ್ಯದಲ್ಲಿ ಪೇಸ್ ಅವರನ್ನು ಆಟವಾಡದ ನಾಯಕ ಮಹೇಶ್ ಭೂಪತಿ  ಇತರೆ ಆಟಗಾರರಲ್ಲಿ ಸೇರಿಸಿದ್ದರು. ಅದರಿಂದಾಗಿ ಪೇಸ್ ಬೆಂಚ್ ಕಾಯಬೇಕಾಗಿತ್ತು. ಅವರ ಬದಲಿಗೆ ಶ್ರೀರಾಮ್ ಬಾಲಾಜಿ
ಕಣಕ್ಕಿಳಿದಿದ್ದರು.

ಆದರೆ ಈಗ ಚೀನಾದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಪೇಸ್, ರೋಹನ್ ಬೋಪಣ್ಣ ಮತ್ತು ಭೂಪತಿ ಜೊತೆಗೂಡಿದ್ದಾರೆ. ಇದರಿಂದಾಗಿ ತಂಡವು ಗೆಲುವಿನ ಭರವಸೆಯಲ್ಲಿದೆ.

‘ಚೀನಾ ತಂಡವನ್ನು ಅದರ ತವರಿನಲ್ಲಿಯೇ ಮಣಿಸುವುದು ಸುಲಭವಲ್ಲ. ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಜೂನಿಯರ್ ವಿಭಾಗದಲ್ಲಿ ಚಾಂಪಿಯನ್ ಆಗಿದ್ದ ಚೀನಾದ ಆಟಗಾರ ಅವರ ಡಬಲ್ಸ್‌ ವಿಭಾಗದಲ್ಲಿದ್ದು, ಪೈಪೋಟಿ ಕಠಿಣವಾಗಿದೆ. 29 ವರ್ಷಗಳ ಕಾಲ ಆಡಿದ ನಂತರ ದಾಖಲೆ ಬರೆಯುವ ಅವಕಾಶ ಒದಗಿಬಂದಿದೆ. ಭಾರತಕ್ಕಾಗಿ ಈ ದಾಖಲೆ ಮಾಡುವುದು ಹೆಮ್ಮೆಯ ಸಂಗತಿ’ ಎಂದು ಪೇಸ್ ಹೇಳಿದ್ದಾರೆ.

ತಂಡದಲ್ಲಿ ಇರುವ ರಾಮಕುಮಾರ್ ರಾಮನಾಥನ್, ಸುಮಿತ್ ನಗಾಲ್ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಚೀನಾ ತಂಡದಲ್ಲಿ ಅಗ್ರ ಶ್ರೇಯಾಂಕದ ಜೀ ಝಾಂಗ್, ಡಿ ವು ಅವರು ಇದ್ದಾರೆ. 18 ವರ್ಷದ ವೈಬಿಂಗ್ ವೂ ಅವರು ಇರುವುದು ತಂಡದ ಬಲ ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT