ಈ ವಾರ ತೆರೆಗೆ ಬರುವ ಕನ್ನಡ ಸಿನಿಮಾಗಳು

ಶುಕ್ರವಾರ, ಮೇ 24, 2019
23 °C

ಈ ವಾರ ತೆರೆಗೆ ಬರುವ ಕನ್ನಡ ಸಿನಿಮಾಗಳು

Published:
Updated:

ಪಯಣಿಗರು

ಜೀವನದಲ್ಲಿ ನೆಮ್ಮದಿ ಹುಡುಕಿ ಗೋವಾ ಟ್ರಿಪ್ ಹೊರಡುವ ನಾಲ್ವರು ಗೆಳೆಯರು ಅಲ್ಲಿ ಅನುಭವಿಸುವುದು ಏನನ್ನು ಎಂಬುದು ಇದರ ಕಥೆ. ಇದನ್ನು ರಾಜ್‍ ಗೋಪಿ ನಿರ್ದೇಶಿಸಿದ್ದಾರೆ. ವಿನು ಮನಸು ಸಂಗೀತ, ರಾಜ ಶಿವಶಂಕರ್ ಛಾಯಾಗ್ರಹಣ ಚಿತ್ರಕ್ಕಿದೆ. ಲಕ್ಷ್ಮಣ್, ಶಿವಶಂಕರ್, ಅಶ್ವಿನ್ ಹಾಸನ್, ರಾಘವೇಂದ್ರ ನಾಯಕ್, ಸುಧೀರ್ ಮೈಸೂರು, ರಾಘವೇಂದ್ರ ಬೂದನೂರು, ನಾಗರಾಜ ರಾವ್, ಸುಜಾತಾ, ಭಾಸ್ಕರ್ ಕೆ.ಆರ್., ರಘು ಕುಮಾರ್, ಚೇತನ್ ಮುಂತಾದವರ ತಾರಾಬಳಗ ಚಿತ್ರದಲ್ಲಿದೆ.

ಪಡ್ಡೆಹುಲಿ

ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಅಭಿನಯದ ಚಿತ್ರ ಇದು. ಇದರ ನಿರ್ಮಾಪಕ ಎಂ. ರಮೇಶ್ ರೆಡ್ಡಿ (ನಂಗ್ಲಿ). ನಿರ್ದೇಶನ ಗುರು ದೇಶಪಾಂಡೆ ಅವರದ್ದು. ನಿಶ್ವಿಕಾ ನಾಯ್ಡು ಚಿತ್ರದ ನಾಯಕಿ. ರವಿಚಂದ್ರನ್ ಅವರು ಶ್ರೇಯಸ್ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಅತಿಥಿ ಪಾತ್ರಗಳಲ್ಲಿ ಪುನೀತ್ ರಾಜಕುಮಾರ್ ಮತ್ತು ರಕ್ಷಿತ್ ಶೆಟ್ಟಿ ಅಭಿನಯಿಸಿದ್ದಾರೆ. ಸುಧಾರಾಣಿ, ಮಧುಸೂಧನ್, ರಂಜಿತ್, ಚಿಕ್ಕಣ್ಣ, ಧರ್ಮಣ್ಣ ಹಾಗೂ ಇತರರು ತಾರಾಬಳಗದಲ್ಲಿ ಇದ್ದಾರೆ. ಸಂಗೀತ ನಿರ್ದೇಶನ ಅಜನೀಶ್ ಲೋಕನಾಥ್ ಅವರದ್ದು. ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ ಚಿತ್ರಕ್ಕಿದೆ.

ತ್ರಯಂಬಕಂ

ದಯಾಳ್ ಪದ್ಮನಾಭನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ತಾರಾಬಳಗದಲ್ಲಿ ರಾಘವೇಂದ್ರ ರಾಜಕುಮಾರ್, ರೋಹಿತ್, ಅನುಪಮಾ ಗೌಡ ಇದ್ದಾರೆ. ಗಣೇಶ್ ನಾರಾಯಣನ್ ಸಂಗೀತ ನಿರ್ದೇಶನ, ಬಿ. ರಾಕೇಶ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !