ಈ ವಾರ ತೆರೆಗೆ: ಮನಸಿನ ಮರೆಯಲಿ

7

ಈ ವಾರ ತೆರೆಗೆ: ಮನಸಿನ ಮರೆಯಲಿ

Published:
Updated:

ರಾಕಿನ್ ಪ್ರೊಡಕ್ಷನ್ ಲಾಂಛನದಲ್ಲಿ ಕಿಂಗ್ ಲಿಂಗರಾಜ್, ಶಬೀನಾ ಹರ ನಿರ್ಮಿಸಿರುವ ಚಿತ್ರವಿದು. ಈ ಚಿತ್ರವನ್ನು ಆಸ್ಕರ್ ಕೃಷ್ಣ ಕಥೆ ಬರೆದು ನಿರ್ದೇಶಿಸಿದ್ದಾರೆ. ಪವನ್ ಕುಮಾರ್ ಛಾಯಾಗ್ರಹಣ, ತ್ಯಾಗರಾಜ್ ಸಾಹಿತ್ಯ ಮತ್ತು ಸಂಗೀತ, ಎ.ಆರ್. ಸಾಯಿರಾಮ್ ಚಿತ್ರಕಥೆ ಮತ್ತು ಸಂಭಾಷಣೆ ಈ  ಚಿತ್ರಕ್ಕಿದೆ. ಕಿಶೋರ್ ಯಾದವ್, ದಿವ್ಯಾ ಗೌಡ, ಗುರುರಾಜ್ ಬೂಪಾಲ್, ರಾಜ್, ಪುಷ್ಪಾ, ಶುಕ್ಲ ಭಗವತ್, ವರ್ದನ್ ತೀರ್ಥಹಳ್ಳಿ, ಮಾಸ್ಟರ್ ಕಿನ್, ಪ್ರಿಯಾಂಕಾ, ಸಂದೀಪ್ ಮಲಾನಿ, ವಠಾರ ಮಲ್ಲೇಶ್ ತಾರಾಗಣದಲ್ಲಿದ್ದಾರೆ. 

ಗಲ್ಲಿ ಬೇಕರಿ

ಟ್ವಿನ್ ಟವರ್‌ ಎಂಟರ್‌ಟೈನ್‌ಮೆಂಟ್‌ ಲಾಂಛನದಲ್ಲಿ ಎಂ.ಎಂ. ನಿರ್ಮಾಣದ ಚಿತ್ರವಿದು. ವಿ.ಆರ್‌.ಕೆ. ರಾಧಾಕೃಷ್ಣನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ರಮೇಶ್ ಕೊಯಿರಾ ಛಾಯಾಗ್ರಹಣ, ಸುನಾದ್ ಗೌತಮ್ ಸಂಗೀತ ಚಿತ್ರಕ್ಕಿದೆ. ಸಂತೋಷ್‌ ಕಿರಣ, ಪ್ರಜ್ವಲ್ ಪೂವಯ್ಯ, ಆರ್ಯನ್, ಉಗ್ರಂ ರೆಡ್ಡಿ, ಸೂರ್ಯ, ರಮೇಶ್‌ ಭಟ್, ಸುಚೇಂದ್ರಪ್ರಸಾದ್, ಯಮುನಾ ಶ್ರೀನಿಧಿ ಪ್ರದೀಪ್‌ ಇದ್ದಾರೆ.

ಎಂಎಲ್ಎ

ತ್ರಿವೇಣಿ 24ಕ್ರಾಪ್‌ ಲಾಂಛನದಲ್ಲಿ ವೆಂಕಟೇಶ್ ರೆಡ್ಡಿ ನಿರ್ಮಿಸಿರುವ ಚಿತ್ರವಿದು. ಮೌರ್ಯ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಪ್ರಥಮ್‌ ನಾಯಕನಾಗಿ ನಟಿಸಿದ್ದಾರೆ. ಸೋನಲ್ ಮೊಂತೆರೋ ಈ ಚಿತ್ರದ ನಾಯಕಿ. ರೇಖಾ, ಕುರಿ ಪ್ರತಾಪ್‌, ರಾಜಶೇಖರ್, ನವೀನ್, ಚಂದ್ರಕಲಾ ಮೋಹನ್ ತಾರಾಗಣದಲ್ಲಿದ್ದಾರೆ. 

ವಿಕ್ರಂ ಸುಬ್ರಹ್ಮಣ್ಯ ಸಂಗೀತ ನಿರ್ದೇಶನ, ಕೃಷ್ಣಸಾರಥಿ ಛಾಯಾಗ್ರಹಣ ಈ ಚಿತ್ರಕ್ಕಿದೆ. 

ಜಗತ್ ಕಿಲಾಡಿ

ಲಯನ್ ಸಿನಿ ಕ್ರಿಯೇಷನ್ಸ್‌ ಲಾಂಛನದಲ್ಲಿ ಆರ್‌.ರಮೇಶ್‌ಬಾಬು ನಿರ್ಮಿಸಿರುವ ಚಿತ್ರವಿದು. ಧೀರೇಂದ್ರ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಸಿನಿಟೆಕ್ ಸೂರಿ ಛಾಯಾಗ್ರಹಣ, ಗಿರಿಧರ್ ದಿವಾನ್ ಸಂಗೀತ ಚಿತ್ರಕ್ಕಿದೆ. ವಿ. ಮನೋಹರ್ ಮತ್ತು ಉಮೇಶ್‌ ಹಾಡುಗಳನ್ನು ಬರೆದಿದ್ದಾರೆ. ನಿರಂಜನ್ ಕುಮಾರ್ ಶೆಟ್ಟಿ, ಅಮಿತಾ ಕುಲಾಲ್, ಜೈಜಗದೀಶ್, ವಿಶ್ವ, ರವಿಚೇತನ್, ಕೌಂಡಿನ್ಯ, ಮೈಕೋ ನಾಗರಾಜ್ ತಾರಾಗಣದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !