ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ರಂಗಭೂಮಿ ಬಲು ಕಠಿಣ'

ಪಂಚರಂಗಿ
Last Updated 1 ಜುಲೈ 2013, 19:59 IST
ಅಕ್ಷರ ಗಾತ್ರ

ಭಿನಯದ ಮಟ್ಟುಗಳನ್ನೆಲ್ಲ ಅರೆದು ಕುಡಿದಿರುವ ಮೆಗಾಸ್ಟಾರ್ ಅಮಿತಾಬ್ ಬಚ್ಚನ್, ರಂಗಭೂಮಿಯೇ ಕಠಿಣವಾದ ಕ್ಷೇತ್ರ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಎಪ್ಪತ್ತರ ಹರೆಯದಲ್ಲೂ ಅನೇಕರು ದಂಗುಬಡಿಯುವಂತೆ ನಟಿಸುವ ಬಿಗ್ ಬಿ ಪ್ರಕಾರ ಸದಾ ಕಲಿಕೆಗೆ ಅವಕಾಶವಿರುವ ರಂಗಭೂಮಿಗೆ ಮರಳುವುದು ರೋಮಾಂಚಕ ಅನುಭವ.

ಕಳೆದ ವಾರವಷ್ಟೇ ಪೃಥ್ವಿರಾಜ್ ರಂಗಮಂದಿರದಲ್ಲಿ ನಾಟಕವೊಂದನ್ನು ವೀಕ್ಷಿಸಿದ ಬಳಿಕ ಅವರಿಗೆ ಹೀಗೆ ಅನಿಸಿತಂತೆ. ಮಾತ್ರವಲ್ಲ, ನಾಟಕ ನೋಡುತ್ತಿರುವಾಗ ಶಾಲೆ ಮತ್ತು ಕಾಲೇಜಿನಲ್ಲಿ ನಾಟಕಗಳಲ್ಲಿ ತಾವು ಅಭಿನಯಿಸಿದ ದಿನಗಳು ಮರುಕಳಿಸಿದವಂತೆ.

`ರಂಗಭೂಮಿಗೆ ಮರಳುವುದು ನಿಜಕ್ಕೂ ಅದ್ಭುತ ಅನುಭವವಾದೀತು. ಆದರೆ ಈಗ ಅಲ್ಲಿಗೆ ಹೋಗುವುದನ್ನು ಊಹಿಸುವುದೂ ಕಷ್ಟ. ನನ್ನಲ್ಲಿ ಆ ಯೋಚನೆ ದಿಗಿಲು ಹುಟ್ಟಿಸುತ್ತದೆ. ನಮಗೇನಿದ್ದರೂ ಒಂದು ವ್ಯವಸ್ಥಿತವಾದ, ನಿಯಂತ್ರಿತವಾದ ವ್ಯವಸ್ಥೆಯೇ ಸೂಕ್ತ' ಎಂದು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿರುವ ಬಿಗ್ ಬಿ, ಅಸಂಖ್ಯಾತ ತಪ್ಪುಗಳನ್ನು ಮಾಡುತ್ತಾ, ತಿದ್ದಿಕೊಳ್ಳುತ್ತಾ ಪಾತ್ರಗಳನ್ನು ರೂಪಿಸುವ ಚಿತ್ರರಂಗಕ್ಕಿಂತ ತಕ್ಷಣವೇ ಪ್ರೇಕ್ಷಕರ ಪ್ರತಿಕ್ರಿಯೆ ವ್ಯಕ್ತವಾಗುವ ನಾಟಕ ಕ್ಷೇತ್ರ ನಿಜಕ್ಕೂ ಕಠಿಣವಾದುದು.

ಪಾತ್ರವೊಂದರ ಅಭಿನಯಕ್ಕೆ ನಿಮ್ಮೆದುರೇ ಕುಳಿತ ಪ್ರೇಕ್ಷಕ ಚಪ್ಪಾಳೆ ತಟ್ಟುವ ಮೂಲಕವೋ ಅಥವಾ ಇನ್ಯಾವುದೇ ರೂಪದಲ್ಲಿಯೋ ಪ್ರತಿಕ್ರಿಯೆ ವ್ಯಕ್ತಪಡಿಸುವ ಪ್ರಕ್ರಿಯೆ ಇದೆಯಲ್ಲ ಅದನ್ನು ಸ್ವತಃ ಅನುಭವಿಸಿಯೇ ತೀರಬೇಕು ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT