ಸಿನಿ ಸಂಕ್ಷಿಪ್ತ

7

ಸಿನಿ ಸಂಕ್ಷಿಪ್ತ

Published:
Updated:
Prajavani

‘ವೀಕ್ ಎಂಡ್’ಗೆ ರೀರೆಕಾರ್ಡಿಂಗ್

ಮಂಜುನಾಥ್ ಡಿ. ಅವರು ನಿರ್ಮಿಸುತ್ತಿರುವ ‘ವೀಕ್ ಎಂಡ್’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಮಾತಿನ ಜೋಡಣೆ ಪೂರ್ಣಗೊಂಡಿರುವ ಈ ಚಿತ್ರಕ್ಕೆ ಬಾಲಾಜಿ ಡಿಜಿಟಲ್ ಸ್ಟುಡಿಯೊದಲ್ಲಿ ರಿ ರೆಕಾಡಿಂಗ್ ನಡೆಯುತ್ತಿದೆ ಎಂದು ನಿರ್ದೇಶಕ ಶೃಂಗೇರಿ ಸುರೇಶ್ ತಿಳಿಸಿದ್ದಾರೆ. ಈ ಚಿತ್ರಕ್ಕೆ ಶಶಿಧರ್ ಅವರು ಛಾಯಾಗ್ರಹಣ ಹಾಗೂ ಮನೋಜ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ಮಿಲಿಂದ್ ಅವರು ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರದ ನಾಯಕಿ ಸಂಜನಾ ಬುರ್ಲಿ. ಅನಂತನಾಗ್, ಗೋಪಿನಾಥ್ ಭಟ್, ಮಂಜುನಾಥ್, ನಾಗಭೂಷಣ್, ನೀನಾಸಂ ರಘು, ನವನೀತ, ನಟನ ಪ್ರಶಾಂತ್, ನೀತು ಬಾಲಾ, ವೀಣಾ ಜಯಶಂಕರ್, ಬ್ಯಾಂಕ್ ಸತೀಶ್, ಶಿವಕುಮಾರ್, ಸಂಜಯ್ ನಾಗೇಶ್ ಹಾಗೂ ಮಂಜುನಾಥ್ ಶಾಸ್ತ್ರಿ ತಾರಾಬಳಗದಲ್ಲಿದ್ದಾರೆ.

ಸೆನ್ಸಾರ್‌ ಮುಂದೆ ‘ತ್ರಿಪುರ’

ಕೆ. ಶಂಕರ್ ಚಿತ್ರ ಕಥೆ ಬರೆದು ನಿರ್ದೇಶಿಸಿರುವ ‘ತ್ರಿಪುರ’ ಚಿತ್ರದ ಮೊದಲ ಪ್ರತಿ ಸಿದ್ದವಾಗಿದ್ದು ಸೆನ್ಸಾರ್ ಹಂತದಲ್ಲಿದೆ. ಸಸ್ಪೆನ್ಸ್, ಥ್ರಿಲರ್ ಹಾಗೂ ಕಾಮಿಡಿ ಜೊತೆಗೆ ಪ್ರೇಮ ಕಥಾನಕವನ್ನು ಒಳಗೊಂಡಿರುವ ಈ ಚಿತ್ರದಲ್ಲಿ 2 ಹಾಡುಗಳಿವೆ. ‘ತ್ರಿಪುರ’ ಎಂಬ ಸುಂದರ ಸ್ತ್ರೀಯ ಸುತ್ತ ನಡೆಯುವ ಹಲವು ಘಟನೆಗಳ ಕತೆ ಈ ಚಿತ್ರದಲ್ಲಿದೆ.

ಎಲ್. ಮಂಜುನಾಥ್ ನಿರ್ಮಿಸಿರುವ ಈ ಚಿತ್ರಕ್ಕೆ ಗೌರಿವೆಂಕಟೇಶ್ ಛಾಯಗ್ರಹಣ, ಡಿ.ಆರ್. ಹೇಮಂತ್ ಕುಮಾರ್ ಸಂಗೀತ ನೀಡಿದ್ದಾರೆ.  ಅಶ್ವಿನಿ ಗೌಡ, ಶ್ರೀಧರ್, ಧರ್ಮ, ಟೆನ್ನಿಸ್ ಕೃಷ್ಣ, ಲಕ್ಷ್ಮಣ್ ರಾವ್, ಕಿಲ್ಲರ್ ವೆಂಕಟೇಶ್, ರಮಾನಂದ್, ಸುಂದರಶ್ರೀ, ಡಿಂಗ್ರಿ ನಾಗರಾಜ್, ಬೇಬಿ ಆದ್ಯ, ಪವಿತ್ರ ಹಾಗೂ ಮಂಜುನಾಥ್ ಅವರ ತಾರಾಬಳಗವಿದೆ.

‘ಗೂಸಿ ಗ್ಯಾಂಗ್‍’ ಸಿದ್ಧ

ರಾಜು ದೇವಸಂದ್ರ ಅವರು ಸಂಭಾಷಣೆ ಬರೆದು ನಿರ್ದೇಶಿಸಿರುವ ‘ಗೂಸಿ ಗ್ಯಾಂಗ್‌’ ಚಿತ್ರ ಫೆಬ್ರುವರಿ 1ರಂದು ತೆರೆ ಕಾಣುವ ಸಾಧ್ಯತೆ ಇದೆ.

ಈ ಚಿತ್ರದಲ್ಲಿ ಅಜಯ್‍ ಕಾರ್ತಿಕ್ ಮತ್ತು ಜಗ್ಗೇಶ್ ಅವರ ಎರಡನೇ ಪುತ್ರ ಯತಿರಾಜ್‍ ಜಗ್ಗೇಶ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನುಷಾ ರೈ, ಮೋನಿಕಾ, ಮತ್ತು ಸೋನು ಪಾಟೀಲ್ ನಾಯಕಿಯರು. ತಾರಗಣದಲ್ಲಿ ರೋಹಿತ್, ಬ್ಯಾಂಕ್‍ ಜನಾರ್ದನ್,  ಅಪ್ಪುವೆಂಕಟೇಶ್, ಕಿಲ್ಲರ್‌ ವೆಂಕಟೇಶ್, ಬಿರಾದಾರ್, ಮೈಕೆಲ್‍ಮಧು, ಸುಚಿತ್ರಾ, ಕಾವ್ಯಪ್ರಕಾಶ್, ಅನ್ನಪೂರ್ಣ ಹಾಗೂ ಗಿರೀಶ್ ಇದ್ದಾರೆ. ಹಾಲೇಶ್‌ ಛಾಯಗ್ರಹಣ ಮಾಡಿದ್ದಾರೆ. ಚಿತ್ರಕ್ಕೆ ಯುಎ ಪ್ರಮಾಣಪತ್ರ ನೀಡಲಾಗಿದೆ.

‘ಕನ್ನಡ ಮೇಷ್ಟ್ರು’ ಭರದ ಸಿದ್ದತೆ

ಕನ್ನಡಪರ ಹೋರಾಟಗಾರರೊಬ್ಬರ ಜೀವನವನ್ನು ಆಧರಿಸಿದ ಬಯೋಪಿಕ್ ‘ಕನ್ನಡ ಮೇಷ್ಟ್ರು’, ಚಿತ್ರೀಕರಣ ಮುಗಿಸಿ ಈಗ ಡಬ್ಬಿಂಗ್‌ ಹಂತಕ್ಕೆ ಬಂದಿದೆ.

ಈ ಚಿತ್ರವನ್ನು ಎಸ್. ಮಹೇಂದರ್ ನಿರ್ದೇಶಿಸಿದ್ದು ಟೋಟಲ್ ಕನ್ನಡ ವಿ. ಲಕ್ಷ್ಮೀಕಾಂತ್ ನಿರ್ಮಿಸಿದ್ದಾರೆ. ಹಂಸಲೇಖ ಸಂಗೀತ ನೀಡಿದ್ದಾರೆ. ‘ಮುಂದಿನ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಚಿತ್ರದ ಬಿಡುಗಡೆಗೆ  ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಲಕ್ಷ್ಮೀಕಾಂತ್‌ ಹೇಳಿದ್ದಾರೆ.

ಬಹುತೇಕ ರಂಗಭೂಮಿಯ ಕಲಾವಿದರನ್ನೇ ಒಳಗೊಂಡಿರುವ ಈ ಚಿತ್ರಕ್ಕೆ ರಮೇಶ್ ಬಾಬು ಛಾಯಾಗ್ರಹಣ ಮಾಡಿದ್ದಾರೆ.  ಕೀರ್ತಿ ಭಾನು, ಅರವಿಂದ್, ಸಂಗೀತ, ರಾಘವ್, ರವಿ ಭಟ್, ರೇಣುಕ, ಶ್ರೀನಿವಾಸ ಪ್ರಭು, ಪೃಥ್ವಿರಾಜ್, ವಿಜಯ್ ಕೌಂಡಿನ್ಯ ತಾರಾಗಣದಲ್ಲಿದ್ದಾರೆ.

ಮಾತಿನ ಮನೆಯಲ್ಲಿ ‘ನ್ಯೂರಾನ್'

ಫ್ರೆಂಡ್ಸ್‌ ಪ್ರೊಡಕ್ಷನ್ ಲಾಂಛನದಲ್ಲಿ ವಿನಯ್‍ಕುಮಾರ್ ನಿರ್ಮಿಸುತ್ತಿರುವ ‘ನ್ಯೂರಾನ್’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ ಆಕಾಶ್ ರೆಕಾರ್ಡಿಂಗ್ ಸ್ಟುಡಿಯೊದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ. ಚಿತ್ರ ಏಪ್ರಿಲ್ ವೇಳೆಗೆ ತೆರೆಗೆ ಬರಲಿದೆ.

ನೈಜ ಘಟನೆ ಆಧರಿತ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಈ ಚಿತ್ರಕ್ಕೆ ವಿಕಾಸ್ ಪುಷ್ಪಗಿರಿ ಅವರು ಚಿತ್ರಕಥೆ ಬರೆದು ನಿರ್ದೇಶನ  ಮಾಡಿದ್ದಾರೆ. ಯುವ ಈ ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ನೇಹಾ ಪಾಟೀಲ್ ನಾಯಕಿಯಾಗಿದ್ದಾರೆ. ವೈಷ್ಣವಿ ಮೆನನ್ ಪ್ರಮುಖ ಪಾತ್ರದಲ್ಲಿದ್ದಾರೆ. ಜೈಜಗದೀಶ್, ಶಿಲ್ಪಾ ಶೆಟ್ಟಿ, ವರ್ಷ, ಅರವಿಂದ್ ರಾವ್, ಕಬೀರ್ ಸಿಂಗ್ (ಬಾಂಬೆ), ರಾಕ್‍ಲೈನ್ ಸುಧಾಕರ್ ಹಾಗೂ ಕಾರ್ತಿಕ್ ತಾರಾಬಳಗದಲ್ಲಿದ್ದಾರೆ.

ಗುರುಕಿರಣ್ ಅವರ ಸಂಗೀತ, ಶೋಯಬ್ ಅಹಮದ್ ಅವರ ಛಾಯಾಗ್ರಹಣವಿದೆ. ವಿ. ನಾಗೇಂದ್ರ ಪ್ರಸಾದ್ ಹಾಡುಗಳನ್ನು ಹಾಗೂ ಶ್ರೀಹರ್ಷ ಸಂಭಾಷಣೆ ಬರೆದಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !