‘ಜೋಯಾ ಫ್ಯಾಕ್ಟರ್‌’ಗೆಯು ಪ್ರಮಾಣಪತ್ರ

ಗುರುವಾರ , ಜೂಲೈ 18, 2019
29 °C
ಸೋನಂ ಕಪೂರ್, ದುಲ್ಕರ್ ಸಲ್ಮಾನ್

‘ಜೋಯಾ ಫ್ಯಾಕ್ಟರ್‌’ಗೆಯು ಪ್ರಮಾಣಪತ್ರ

Published:
Updated:
Prajavani

ಸೋನಂ ಕಪೂರ್ ಮತ್ತು ದುಲ್ಕರ್ ಸಲ್ಮಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಜೋಯಾ ಫ್ಯಾಕ್ಟರ್‌’ಗೆ ಸೆನ್ಸಾರ್ ಮಂಡಳಿ ‘ಯು’ ಪ್ರಮಾಣಪತ್ರ ನೀಡಿದೆ. 

ಚಿತ್ರದಲ್ಲಿ ಸೋನಂ ಮತ್ತು ದುಲ್ಕರ್ ನಡುವಣ ಆತ್ಮೀಯ ದೃಶ್ಯಗಳಿದ್ದು, ಇದಕ್ಕಾಗಿಯೇ ಚಿತ್ರಕ್ಕೆ ‘ಯು’ ಪ್ರಮಾಣ ಪತ್ರ ನೀಡಲಾಗಿದೆ. 

ಲೇಖಕಿ ಅನುಜಾ ಚೌಧರಿ ಅವರ ಕಾದಂಬರಿ ಆಧರಿಸಿ ತಯಾರಾಗಿರುವ ಚಿತ್ರವಿದು. ಮಲಯಾಳಂ ಸಿನಿರಂಗದಲ್ಲಿ ಜನಪ್ರಿಯತೆ ಗಳಿಸಿರುವ ನಟ ದುಲ್ಕರ್ ಜತೆಗೆ ಸೋನಂ ಮೊದಲ ಬಾರಿಗೆ ನಟಿಸುತ್ತಿದ್ದು, ಸೋನಂ ತಂದೆ ಪಾತ್ರದಲ್ಲಿ ಚಿಕ್ಕಪ್ಪ ಸಂಜಯ್ ಕಪೂರ್ ನಟಿಸುತ್ತಿರುವುದು ಈ ಸಿನಿಮಾದ ವಿಶೇಷತೆಗಳಲ್ಲೊಂದು.

‘ಖೂಬ್‌ಸೂರತ್’ ಸಿನಿಮಾದ ನಂತರ ನಾನು ಗಟ್ಟಿಕಥಾ ಹಂದರದ ಸಿನಿಮಾಕ್ಕಿಂತ ಭಿನ್ನ ಬಗೆಯ ಸಿನಿಮಾಗಳನ್ನು ಮಾಡಲು ತೊಡಗಿದ್ದೇನೆ. ಬಹುತೇಕರು ನನ್ನನ್ನು  ಜೋಯಾ ರೀತಿಯ ಪಾತ್ರದಲ್ಲಿಯೇ ನೋಡಲಿಚ್ಛಿಸುತ್ತಾರೆ. ಈ ವಿಷಯದಲ್ಲಿ ನಾನು ನಿರ್ದೇಶಕ ಅಭಿಷೇಕ್ ಶರ್ಮಾ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರೊಬ್ಬ ಅದ್ಭುತ ಮನುಷ್ಯ. ದುಲ್ಕರ್ ಜತೆಗೆ ಇದು ನನ್ನ ಮೊದಲ ಸಿನಿಮಾ’ ಎಂದು ಸೋನಂ ಸಿನಿಮಾ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಈ ಸಿನಿಮಾದ ಚಿತ್ರೀಕರಣ ಆರಂಭವಾದಾಗ ಸೋನಂ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ‘ಹೊಸ ಆರಂಭ’ ಅನ್ನುವ ಒಕ್ಕಣೆಯೊಂದಿಗೆ ‘ಜೋಯಾ ಫ್ಯಾಕ್ಟರ್’ ಕುರಿತು ಹಂಚಿಕೊಂಡಿದ್ದರು. ಈ ಸಿನಿಮಾದಲ್ಲಿ ಸೋನಂ ಅವರರದ್ದು ಜೋಯಾ ಸಿಂಗ್ ಸೋಲಂಕಿ ಅನ್ನುವ ಜಾಹೀರಾತು ಎಕ್ಸಿಕ್ಯೂಟಿವ್ ಪಾತ್ರ, ದುಲ್ಕರ್ ಭಾರತ ಕ್ರಿಕೆಟ್ ತಂಡದ ನಾಯಕನ ಪಾತ್ರ ಮಾಡಿದ್ದಾರೆ. 

ಸೋನಂ ಅಭಿನಯದ ‘ಏಕ್ ಲಡ್ಕಿ ಕೋ ದೇಖಾ ತೋ ಐಸಾ ಲಾಗಾ’ ಸಿನಿಮಾ ಬಾಕ್ಸ್‌ ಆಫೀಸಿನಲ್ಲಿ ಅಷ್ಟಾಗಿ ಯಶಸ್ಸು ಗಳಿಸದಿದ್ದರೂ ಸಲಿಂಗ ಪ್ರೇಮದ ಕಥೆಯನ್ನೊಳಗೊಂಡಿದ ಈ ಸಿನಿಮಾ ಭಿನ್ನ ಕಥಾವಸ್ತುವಿಗಾಗಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು.

‘ಜೋಯಾ ಫ್ಯಾಕ್ಟರ್‌’ನಲ್ಲಿ ಸೋನಂ ಜತೆಗೆ ಪ್ರಧಾನ ಪಾತ್ರ ವಹಿಸಿರುವ ದುಲ್ಕರ್, ಕಳೆದ ವರ್ಷ ‘ಕಾರ್‌ವಾನ್’ ಸಿನಿಮಾದಲ್ಲಿ ಇರ್ಫಾನ್ ಖಾನ್ ಜತೆಗೆ ನಟಿಸಿದ್ದರು. ಬಾಲಿವುಡ್‌ನಲ್ಲಿ ಇದು ಅವರ ಮೊದಲ ಚಿತ್ರವಾಗಿದ್ದು, ದುಲ್ಕರ್ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. 

Post Comments (+)