ಸೋಮವಾರ, ಡಿಸೆಂಬರ್ 16, 2019
17 °C

ನನ್ನ ನಿರ್ಮಾಣದ ಸಿನಿಮಾಗಳಲ್ಲಿ ನಾನು ನಟಿಸಲ್ಲ: ಕಂಗನಾ ರನೋಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

2020ರ ಜನವರಿಗೆ ಕಂಗನಾ ರನೋಟ್‌ ಅವರ ಸ್ವಂತ ಸಿನಿಮಾ ನಿರ್ಮಾಣ ಸಂಸ್ಥೆ ಕಾರ್ಯಾರಂಭ ಮಾಡಲಿದೆ.

‘ಮಣಿಕರ್ಣಿಕಾ: ದಿ ಕ್ವೀನ್‌ ಆಫ್‌ ಝಾನ್ಸಿ’ ಸಿನಿಮಾದ ಮೂಲಕ ನಿರ್ದೇಶನಕ್ಕೆ ಇಳಿದಿರುವ ಕಂಗನಾ, ಈಗ ಸ್ವಂತ ನಿರ್ಮಾಣ ಸಂಸ್ಥೆಯನ್ನು ನಿರ್ಮಾಣ ಮಾಡುವ ತಯಾರಿ ನಡೆಸುತ್ತಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ಈ ಬಗ್ಗೆ ಮಾತನಾಡಿದ್ದು, ತಮ್ಮದೇ ನಿರ್ಮಾಣ ಸಂಸ್ಥೆ ಮೂಲಕ ‘ಮಣಿಕರ್ಣಿಕಾ’ ಸಿನಿಮಾವನ್ನು ಬೇರೆ ಭಾಷೆಗಳಿಗೆ ಡಬ್‌ ಮಾಡಲಿದ್ದಾರಂತೆ.

‘ನನ್ನ ನಿರ್ಮಾಣ ಸಂಸ್ಥೆಯಲ್ಲಿ ಸಣ್ಣ ಬಜೆಟ್‌ ಸಿನಿಮಾಗಳನ್ನು ಮೊದಲು ತಯಾರಿಸುತ್ತೇನೆ. ಅದಕ್ಕೆ ಬರುವ ಪ್ರತಿಕ್ರಿಯೆಗಳನ್ನು ನೋಡಿಕೊಂಡು ಹೆಚ್ಚು ಹೆಚ್ಚು ಸಿನಿಮಾಗಳನ್ನು ನಿರ್ಮಿಸುತ್ತೇನೆ. ನಿಧಾನವಾಗಿ ಮೆಗಾ ಬಜೆಟ್‌ ಸಿನಿಮಾ ನಿರ್ಮಾಣ ಮಾಡುತ್ತೇನೆ’ ಎಂದು ಹೇಳಿದ್ದಾರೆ. ಆದರೆ ತಮ್ಮ ನಿರ್ಮಾಣದ ಸಿನಿಮಾಗಳಲ್ಲಿ ಅವರು ನಟಿಸಲ್ಲವಂತೆ.

‘ನಮ್ಮ ಹೊಸ ಆಫೀಸ್‌ ಜನವರಿಯಲ್ಲಿ ರೆಡಿ ಆಗಲಿದೆ. ಈಗಾಗಲೇ ಅನೇಕ ಸ್ಕ್ರಿಫ್ಟ್‌ಗಳು ಬಂದಿವೆ. ಅದರಲ್ಲಿ ಅನೇಕ ನಿರ್ದೇಶಕರು ನಾನೇ ನಟಿಸುವಂತೆ ಕೇಳಿಕೊಂಡಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ನಮ್ಮ ಉದ್ದೇಶ’ ಎಂದು ಕಂಗನಾ ಹೇಳಿದ್ದಾರೆ.

ಅಶ್ವಿನಿ ಅಯ್ಯರ್‌ ತಿವಾರಿ ಅವರ ಕ್ರೀಡಾ ಸಂಬಂಧಿತ ಚಿತ್ರ ‘ಪಂಗಾ’,  ಜಯಲಲಿತಾ ಜೀವನಾಧಾರಿತ ಚಿತ್ರ ‘ತಲೈವಿ’, ಆ್ಯಕ್ಷನ್‌ ಚಿತ್ರ ‘ಧಾಕಡ್‌’ ಚಿತ್ರದಲ್ಲಿ ಕಂಗನಾ ನಟಿಸುತ್ತಿದ್ದಾರೆ. ‘ಪಂಗಾ’ ಚಿತ್ರವು 2020ರ ಜನವರಿಯಲ್ಲಿ ಬಿಡುಗಡೆಯಾಗಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು