ಕರಡಿ ಸೀನ ಮತ್ತು ಪುಟ್ಟರಾಜು

7

ಕರಡಿ ಸೀನ ಮತ್ತು ಪುಟ್ಟರಾಜು

Published:
Updated:
Deccan Herald

‘ಪುಟ್ಟರಾಜು’ ಸಿನಿಮಾ ತಂಡದ ಸದಸ್ಯರೆಲ್ಲ ವೇದಿಕೆ ಮೇಲೆ ಕುಳಿತಿದ್ದರು. ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಬರೆದು, ಅದರ ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳ ಮುಖದಲ್ಲಿ ಇರುವ ದುಗುಡ, ಆತಂಕ, ಖುಷಿ ಇವರ ಮುಖದ ಮೇಲೆಯೂ ಇತ್ತು. ಇದಕ್ಕೆ ಕಾರಣ, ಸಿನಿಮಾ ಬಿಡುಗಡೆಗೆ ಸಿದ್ಧವಾಗಿರುವುದು, ಸಿನಿಮಾ ಬಗ್ಗೆ ಜನ ಏನು ಹೇಳುತ್ತಾರೋ ಎನ್ನುವ ಕಾತರ ಮನಸ್ಸಿನಲ್ಲಿ ಮನೆ ಮಾಡಿರುವುದು.

ಈ ಚಿತ್ರದಲ್ಲಿ ಇರುವುದು ಮುಗ್ಧ ಮನಸುಗಳ ಜೀವನದಲ್ಲಿ ನಡೆದ ನೈಜ ಘಟನೆ. ಹಳ್ಳಿಯ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರದ ದೃಶ್ಯಗಳು ಕಣ್ಣಿಗೆ ತಂಪನ್ನು, ಮನಸ್ಸಿಗೆ ಇಂಪನ್ನು ನೀಡುತ್ತವೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರ ಶುಕ್ರವಾರ (ಆಗಸ್ಟ್‌ 10) ತೆರೆಗೆ ಬರಲಿದೆ.

‘ಸಿನಿಮಾ ನಿರ್ಮಾಣ ದೊಡ್ಡ ಸಾಹಸದ ಕೆಲಸ. ಇದು ಆರ್ಭಟಗಳು ಇಲ್ಲದ ಸಿನಿಮಾ. ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಒಂದು ಕ್ಷಣ ಕೂಡ ಬೋರ್ ಹೊಡೆಸುವುದಿಲ್ಲ’ ಎಂದರು ನಿರ್ಮಾಪಕ ರಾಜು ಬಾಲಕೃಷ್ಣ. ಮಲ್ಟಿಪ್ಲೆಕ್ಸ್‌ ಸೇರಿದಂತೆ ಐವತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಇದು ಬಿಡುಗಡೆ ಆಗಲಿದೆ.

‘ನಮ್ಮ ಚಿತ್ರದ ಹೂರಣ ಚೆನ್ನಾಗಿದೆ. ಹಾಗಾಗಿ ಇದನ್ನು ಜನ ವೀಕ್ಷಿಸುತ್ತಾರೆ ಎನ್ನುವ ನಂಬಿಕೆ ಇದೆ. ನಮ್ಮ ಚಿತ್ರ ಕಳೆದ ವಾರವೇ ತೆರೆಗೆ ಬರಬೇಕಿತ್ತು. ಆದರೆ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಪ್ರಮಾಣಪತ್ರ ಸಿಗುವುದು ತಡವಾದ ಕಾರಣ, ಚಿತ್ರದ ಬಿಡುಗಡೆ ಕೂಡ ವಿಳಂಬ ಆಯಿತು’ ಎಂದರು ನಿರ್ದೇಶಕ ಸಹದೇವ. ಅವರು ಈ ಚಿತ್ರದಲ್ಲಿ ಕೊಕ್ಕೊ ಆಟದ ಸೊಗಸನ್ನು ತೋರಿಸಿದ್ದಾರಂತೆ.

‘ಈ ಚಿತ್ರದಲ್ಲಿನ ಎಲ್ಲ ಅಂಶಗಳೂ ಕನ್ನಡಿಗರ ಮನಸ್ಸಿಗೆ ತಾಕಬಹುದು ಎಂಬ ನಂಬಿಕೆ ನನ್ನಲ್ಲಿದೆ’ ಎಂದರು ಸಹದೇವ. ಚಿತ್ರದ ಹೀರೊ ಅಮಿತ್ ಅವರಿಗೆ ಇದರಲ್ಲಿ ಯುವತಿಯೊಬ್ಬಳ ಮೇಲೆ ಕ್ರಷ್ ಆಗುತ್ತದೆಯಂತೆ. ಡಿಂಗ್ರಿ ನರೇಶ್ ಅವರು ಇದರಲ್ಲಿ ‘ಕರಡಿ ಸೀನ’ ಎಂಬ ಪಾತ್ರ ನಿಭಾಯಿಸಿದ್ದಾರೆ. ಈ ಕರಡಿ ಸೀನ ಸನ್ನಿ ಲಿಯೋನಿಯ ಅಭಿಮಾನಿ!

*

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !